Connect with us

ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

ಬೆಂಗಳೂರು: ಮನೆಯವರ ಒಪ್ಪಿಗೆಯಂತೆ ಗುರುವಾರ ಅಮೂಲ್ಯ-ಜಗದೀಶ್ ಮೊದಲನೇ ಶಾಸ್ತ್ರ ಮುಗಿಸಿದ್ದಾರೆ. ತುಂಬಾ ಸಂತೋಷವಾಗ್ತಿದೆ. ಜಗದೀಶ್ ಬಗ್ಗೆ ಹೆಚ್ಚಿಗೆ ಯಾರಿಗೂ ತಿಳಿದಿಲ್ಲ. ಆದ್ರೆ ನನಗೆ ಅವರ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರ ಇಡೀ ಕುಟುಂಬ ನನ್ನ ಕುಟುಂಬ ಇದ್ದಂತೆ. ಬಹಳ ಒಳ್ಳೆಯ ಕುಟುಂಬವಾಗಿದೆ. ಮಾತ್ರವಲ್ಲದೇ ಜಗದೀಶ್ ಕೂಡ ಒಳ್ಳೆಯ ಹುಡುಗ. ಹೀಗಾಗಿ ನಮ್ಮ ಅಮೂಲ್ಯ ಕೂಡ ಒಳ್ಳೆಯ ಹುಡುಗಿ ಅಂತಾ ತಿಳಿದಿರುವ ವಿಷಯ. ಹೀಗಾಗಿ ಇವರಿಬ್ಬರು ಬಾಳಲ್ಲಿ ಒಂದಾಂದ್ರೆ ಮುಂದೆ ಚೆನ್ನಾಗಿರಬಹುದೆಂದು ನಮ್ಮ ನಂಬಿಕೆ. ಒಟ್ಟಿನಲ್ಲಿ ಇದೀಗ ಮೊದಲನೇ ಶಾಸ್ತ್ರ ಮುಗಿಸಿದ್ದೀವಿ. ಮಾರ್ಚ್ 6ರಂದು ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಎಲ್ಲವೂ ಚೆನ್ನಾಗಿ ನಡೆಯಲಿ ಅಂತಾ ನಟ ಗಣೇಶ್ ಆಶಿಸಿದ್ರು.

ಪ್ರಪೋಸಲ್ ಹೇಗೆ ಬಂತು?: ಜಗದೀಶ್ ಗೆ ಮನೆಯಲ್ಲಿ ಹುಡುಗಿ ಹುಡುತ್ತಾ ಇದ್ರು. ಇತ್ತ ನಮ್ಮಿಬ್ರಿಗೂ ಬಹಳ ಬೇಕಾದವ್ರು ಒಬ್ಬರು ಇದ್ರು. ಅವರ ಕೈಯಲ್ಲಿ ಈ ಪ್ರಪೋಸಲನ್ನು ನಾವು ಕರೆಸಿದ್ವಿ. ಆಮೇಲೆ ಜಾತಕ ಕೂಡಿ ಬರುತ್ತಾ ಅಂತಾ ಚೆಕ್ ಮಾಡಿದ್ವಿ. ಆ ಸಂದರ್ಭದಲ್ಲಿ ಇಬ್ಬರ ಜಾತಕವೂ ಕೂಡಿ ಬಂತು ಅಂತಾ ಗಣೇಶ್ ಹೇಳಿದ್ರು.

ಸಾಮಾನ್ಯವಾಗಿ ಒಕ್ಕಲಿಗರ ಮದುವೆ ಕಾರ್ಯಕ್ರಮದಲ್ಲಿ ಹುಡುಗಿ ನೋಡಿ ಓಕೆ ಆದ ಬಳಿಕ ಎರಡೂ ಕಡೆಯವರು ಒಬ್ಬರನೊಬ್ಬರ ಮನೆಗೆ ಹೋಗಿ ಮಾತುಕತೆ ನಡೆಲಿದೆ. ಅಂತೆಯೇ ಇಲ್ಲಿ ಕೂಡ ಅದೇ ಸಂಪ್ರದಾಯವನ್ನು ಮಾಡಿದ್ದೇವೆ ಅಂತಾ ಹೇಳಿದ್ರು.

ಅಮೂಲ್ಯ ಸಾಕಷ್ಟು ಸಿನಿಮಾಗಳನ್ನು ನಿಮ್ಮ ಜೊತೆ ಮಾಡಿದ್ದಾರೆ. ಆದ್ರೆ ಇದೂವರೆಗೆ ಯಾವ ಹಿರೋ, ಹೀರೋಯಿನ್ ಮದುವೆಗೆ ಸಹಾಯ ಮಾಡಿಲ್ಲ ಅಲ್ಲವೇ ಎಂದು ಕೇಳಿದ್ದಕ್ಕೆ, ನಮ್ಮದೇ ಹುಡ್ಗಿ. ಜಗದೀಶ್ ಕೂಡ ನಮ್ಮ ಮನೆಯವರಂತೆ ಇದ್ದಾರೆ. ಆದುದರಿಂದ ಇನ್ನು ಮುಂದೆ ಅಮೂಲ್ಯನೂ ನಮ್ಮ ಮನೆಯಲ್ಲೇ ಇರ್ತಾರೆ ಅನ್ನೋ ಖುಷಿಯಿದೆ ಅಂತಾ ಹೇಳಿದ್ರು.

ಇಷ್ಟೊಂದು ಗೌಪ್ಯವಾಗಿಟ್ಟು, ಶಾಕಿಂಗ್ ಕೊಡುವ ಪ್ಲಾನ್ ನಿಮ್ಮದಾಗಿತ್ತಾ ಅಂತ ಕೇಳಿದ್ದಿಕೆ, ಹೌದು ಯಾಕಂದ್ರೆ ನಾನು ಕೂಡ ಅಭಿಮಾನಿಗಳಿಗೆ ಶಾಕ್ ಕೊಟ್ಟೆ ಮದುವೆ ಆಗಿದ್ದೆ. ಹಾಗಾಗಿ ನನ್ನ ಜೊತೆ ಇರುವವರೂ ಅಭಿಮಾನಿಗಳಿಗೆ ಶಾಕಿಂಗ್ ಆಗಿ ಸುದ್ದಿ ನೀಡಬೇಕು ಅಂತಾ ನಕ್ಕುಬಿಟ್ಟರು.

ಯಾವತ್ತು ಅಷ್ಟೇ ಯಾವುದೇ ಕೆಲಸವಾಗಲಿ ಮುಗಿದ ಬಳಿಕ ಹೇಳೋದೆ ಒಳ್ಳೆಯದು. ಅದ್ರಲ್ಲೂ ಮದುವೆ ಮುಂತಾದ ವಿಚಾರಗಳನ್ನು ಹುಡುಗ-ಹುಡುಗಿ ಒಪ್ಪಿಕೊಂಡ ಮೇಲೆ ಬಹಿರಂಗಪಡಿಸುವುದು ಒಳ್ಳೆಯದು ಅಂತಾ ನನ್ನ ಅನಿಸಿಕೆ ಗಣೇಶ್ ಹೇಳಿದರು.

ಒಟ್ಟಿನಲ್ಲಿ ಜಗದೀಶ್ ಖುಷಿಯಿಂದ ಓಡಾಡ್ತಾ ಇದ್ದ, ಇತ್ತ ಅಮೂಲ್ಯ ಮನೆಯಲ್ಲಿ ಸುಮ್ನೆ ಕುಳಿತಿದ್ದಳು. ಅದಕ್ಕೆ ಇಬ್ರಿಗೂ ಜವಾಬ್ದಾರಿ ಕೊಡಿಸೋಣ ಎಂದು ಮದುವೆ ಮಾಡಲು ಮುಂದಾದ್ವಿ ಅಂತಾ ನಟ ಗಣೇಶ್ ಮತ್ತು ಪತ್ನಿ ಶಿಲ್ಪಾ ಕಿಚಾಯಿದ್ರು.

 

Advertisement
Advertisement