Bengaluru CityCinemaKarnatakaLatestMain PostSandalwood

ಆಪ್ತರ ಸಮ್ಮುಖದಲ್ಲಿ ನಡೆಯಿತು ಹರಿಪ್ರಿಯಾ- ವಸಿಷ್ಠಸಿಂಹ ಎಂಗೇಜ್‌ಮೆಂಟ್

ಟಿ ಅದಿತಿ ಹಸೆಮಣೆ ಏರಿದ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ಮತ್ತೊಂದು ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ತಮ್ಮ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.  ಇತ್ತೀಚೆಗಷ್ಟೇ ದುಬೈನಲ್ಲಿ ಕೈ ಕೈ ಹಿಡಿದು ಓಡಾಡಿದ್ದ ಈ ಜೋಡಿಯ ಫೋಟೋ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಈಗ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಆಪ್ತರ ಸಮ್ಮುಖದಲ್ಲಿ ನಡೆಯಿತು ಹರಿಪ್ರಿಯಾ- ವಸಿಷ್ಠಸಿಂಹ ಎಂಗೇಜ್‌ಮೆಂಟ್

ಚಂದನವನದ ಸದ್ಯದ ಹಾಟ್ ನ್ಯೂಸ್ ಎಂದರೆ ಹರಿಪ್ರಿಯಾ ಮತ್ತು ವಸಿಷ್ಠ ಜೋಡಿಯ ಪ್ರೇಮ ಕಹಾನಿ. ಕಳೆದ ಕೆಲವು ದಿನಗಳಿಂದ ಈ ಜೋಡಿ ಎಂಗೇಜ್‌ ಆಗಿರುವ ವಿಷ್ಯದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ತಮ್ಮ ಲವ್‌ ಸ್ಟೋರಿ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿದ್ದಾರೆ. ಇದನ್ನೂ ಓದಿ: ಹಿರಿಯ ನಿರ್ಮಾಪಕ ಕೆ.ಮುರಳೀಧರನ್ ನಿಧನ

ಆಪ್ತರ ಸಮ್ಮುಖದಲ್ಲಿ ನಡೆಯಿತು ಹರಿಪ್ರಿಯಾ- ವಸಿಷ್ಠಸಿಂಹ ಎಂಗೇಜ್‌ಮೆಂಟ್

ವಸಿಷ್ಠ ಅವರಿಗಿಂತ ಹರಿಪ್ರಿಯಾ ಮೂರು ವರ್ಷ ಸಣ್ಣವರು. ಇಬ್ಬರು ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದೆ.

Live Tv

Leave a Reply

Your email address will not be published. Required fields are marked *

Back to top button