AdvertisementBollywoodCinemaKarnatakaLatestMain Post

ಬಹಿರಂಗ ಪತ್ರ ಬರೆದು ಮತ್ತೆ ಗಂಭೀರ ಆರೋಪ ಮಾಡಿದ ನಟ ನವಾಜುದ್ದೀನ್ ಪತ್ನಿ

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಅವರ ಪತ್ನಿ ಆಲಿಯಾ (Alia) ಜಗಳ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದವರು, ಇದೀಗ ಆ ಜಗಳದಲ್ಲಿ ತಮ್ಮ ಅಪ್ರಾಪ್ತ ಮಗಳನ್ನೂ ಎಳೆದು ತಂದಿದ್ದಾರೆ. ನವಾಜುದ್ದೀನ್ ಪತ್ನಿ ಆಲಿಯಾ ಬರೆದ ಬಹಿರಂಗ ಪತ್ರದಲ್ಲಿ ಸಿದ್ದಿಕಿ ಮ್ಯಾನೇಜರ್ ತಮ್ಮ ಪುಟ್ಟ ಮಗಳ ಜೊತೆ ಕೆಟ್ಟದಾಗಿ ನಡೆದುಕೊಂಡ ಎಂದು ಹೇಳಿಕೊಂಡಿದ್ದಾರೆ.

nawazuddin siddiqui 3

ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿ ಆಲಿಯಾ ಸದ್ಯ ದೂರ ದೂರವಿದ್ದಾರೆ. ಡಿವೋರ್ಸ್ (Divorced) ಕೂಡ ಆಗಿದೆ ಎಂದು ಹೇಳಲಾಗುತ್ತಿದೆ. ಮಕ್ಕಳು ಯಾರ ಜೊತೆ ಇರಬೇಕು ಎನ್ನುವುದರ ಬಗ್ಗೆ ಕೋರ್ಟಿನಲ್ಲಿ ನ್ಯಾಯ ತೀರ್ಮಾನ ಆಗಬೇಕಿದೆಯಂತೆ. ಹಾಗಾಗಿ ಮಕ್ಕಳು ತನ್ನೊಂದಿಗೆ ಇರಬೇಕು ಎನ್ನುವುದು ಆಲಿಯಾ ವಾದ. ಆದರೆ, ಅದಕ್ಕೆ ನವಾಜುದ್ದೀನ್ ಒಪ್ಪುತ್ತಿಲ್ಲ. ಈ ವಿಚಾರವಾಗಿ ಆಲಿಯಾ ಗಂಭೀರ ಆರೋಪ ಮಾಡಿದ್ದು, ನವಾಜುದ್ದೀನ್ ಅಪಾಯಕಾರಿ ತಂದೆ, ಬೇಜವಾಬ್ದಾರಿ ಮನುಷ್ಯ. ಅವರ ಮ್ಯಾನೇಜರ್ ಕೂಡ ಸರಿಯಿಲ್ಲ’ ಎಂದು ಆರೋಪ ಮಾಡಿದ್ದಾರೆ.

nawazuddin siddiqui 4

ಪತ್ನಿಯ ಯಾವ ಮಾತಿಗೂ ಈವರೆಗೂ ಪ್ರತಿಕ್ರಿಯಿಸದ ನವಾಜುದ್ದೀನ್, ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅಸಲಿಯಾಗಿ ಆಲಿಯಾ ನನ್ನ ಪತ್ನಿಯಲ್ಲ, ಆಕೆ ಡಿವೋರ್ಸ್ ತಗೆದುಕೊಂಡಿದ್ದಾಳೆ. ಆದರೆ, ಆಕೆ ಈಗ ಕೇವಲ ನನ್ನ ಮಕ್ಕಳ ತಾಯಿಯಷ್ಟೇ ಎಂದು ಬರೆದುಕೊಂಡಿದ್ದಾರೆ. ತಿಂಗಳಿಗೆ ಸರಾಸರಿ ಹತ್ತು ಲಕ್ಷ ರೂಪಾಯಿ ಕೊಟ್ಟಿದ್ದೇನೆ. ದುಡ್ಡಿನ ದಾಹಕ್ಕೆ ಆಲಿಯಾ ಆರೋಪಿಸುತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬರ್ತ್‌ಡೇ ಸಂಭ್ರಮದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

nawazuddin

ಇನ್ಸ್ಟಾಗ್ರಾಮ್ ಮೂಲಕ ಸಂಸಾರದ ಅನೇಕ ವಿಷಯಗಳನ್ನೂ ಹಂಚಿಕೊಂಡಿರುವ ನವಾಜುದ್ದೀನ್, ‘ಆಲಿಯಾ ಸಿನಿಮಾ ಮಾಡಲು ಕೋಟಿ ಕೋಟಿ ಕಳೆದುಕೊಂಡದ್ದೇನೆ. ಮಕ್ಕಳೊಂದಿಗೆ ಆಕೆ ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ದುಬಾರಿ ಫ್ಲ್ಯಾಟ್ ಕೊಡಿಸಿದ್ದೇನೆ. ಅಲ್ಲದೇ, ಮಕ್ಕಳಿಗಾಗಿ ದುಬೈನಲ್ಲೂ ಅಪಾರ್ಟ್ಮೆಂಟ್ ನೀಡಿದ್ದೇನೆ. ಅಲ್ಲಿ ಅವಳೂ ಇದ್ದಳು. ಇಷ್ಟೆಲ್ಲ ಮಾಡಿದರೂ, ನನ್ನ ಮೇಲೆ ಆರೋಪ ಮಾಡಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ.

nawazuddin siddiqui 2

ಆಲಿಯಾ ಮಾಧ್ಯಮಗಳ ಮುಂದೆ ತಮ್ಮ ಮಾನ ಹರಾಜು ಮಾಡುತ್ತಿರುವ ಕುರಿತಾಗಿಯೂ ಅವರು ಹೇಳಿಕೊಂಡಿದ್ದು, ತಮ್ಮ ಭಾವನೆಗಳ ಜೊತೆ ಅವರು ಆಟವಾಡುತ್ತಿದ್ದಾರೆ ಎಂದು ದೂರಿದ್ದಾರೆ. ಏಕಪಕ್ಷೀಯ ರೀತಿಯ ವಿಡಿಯೋಗಳನ್ನು ಹಾಕುತ್ತಿರುವವರ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ಮಕ್ಕಳಿಗಾಗಿ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿರುವುದಾಗಿ ನವಾಜುದ್ದೀನ್ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back to top button
ವಿಜಯ್‌ ದೇವರಕೊಂಡ ಜೊತೆ ಸಮಂತಾ ‘ಖುಷಿ’..! ಹನಿಮೂನ್‌ ಮುಗಿಸಿ ಬಂದ್ರು ಕಿಯಾರಾ-ಸಿದ್..!‌ ಕಾಂತಾರದ ಲೀಲಾ ‘ಸಪ್ತಮಿ’ಯ ನೋಡೋದೇ ಸೊಗಸು ಮತ್ತೆ ಮಲಯಾಳಂ ಸಿನಿರಂಗಕ್ಕೆ ಭಾವನಾ ಎಂಟ್ರಿ..! ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌