ಸಾಮಾನ್ಯ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದ ನಟ ಧೃವ ಸರ್ಜಾ!

1 Min Read

ಬೆಂಗಳೂರು: ಜನಸಾಮಾನ್ಯರಿಗಾಗಿ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಆಟೋ ಓಡಿಸಿದ್ದಾರೆ. ಸದ್ಯ ಅವರು ಆಟೋ ಓಡಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ನಡ ಕಿರುತೆರೆಯಲ್ಲಿ ಇದುವರೆಗೂ ಹಲವಾರು ರಿಯಾಲಿಟಿ ಶೋಗಳು ಬಂದಿದೆ. ಹಲವಾರು ರೀತಿಯ ಹೊಸ ಹೊಸ ಕಾರ್ಯಕ್ರಮಗಳು ಮೂಡಿ ಬರುತ್ತಿದೆ. ಇದೀಗ ಖಾಸಗಿ ವಾಹಿನಿಯಲ್ಲಿ ಭಾನುವಾರದಿಂದ ‘ಸದಾ ನಿಮ್ಮೊಂದಿಗೆ’ ಎನ್ನುವ ರಿಯಾಲಿಟಿ ಶೋ ಮೂಡಿ ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಹೊಸತನ ತುಂಬಿಕೊಂಡಿದೆ.

ಕಾರ್ಯಕ್ರಮದಲ್ಲಿ ಚಿತ್ರ ತಾರೆಯರು ಸಾಮಾನ್ಯರಂತೆ ಆಟೋ ಓಡಿಸುವುದು, ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವುದು, ಅಂಗಡಿ ನೋಡಿಕೊಳ್ಳುವುದು ಹಾಗೂ ಹಲವು ಕೆಲಸಗಳನ್ನು ಮಾಡಿ ಕಷ್ಟದಲ್ಲಿರುವ ಜನ ಸಾಮಾನ್ಯರಿಗೆ ಸಹಾಯ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಈ ಕಾರ್ಯಕ್ರಮವನ್ನು ಹಿರಿಯ ನಟಿ ಲಕ್ಷ್ಮೀ ನಿರೂಪಣೆ ಮಾಡಲಿದ್ದಾರೆ. ಇನ್ನೂ ಈ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ನಟ ಧ್ರುವ ಸರ್ಜಾ ಆಟೋ ಓಡಿಸಿದ್ದಾರೆ. ನಂತರ ಆ ಹಣವನ್ನು ಮೈಸೂರಿನ ನರೇಂದ್ರ ಕುಮಾರ್ ಎಂಬವರಿಗೆ ಸಹಾಯ ಮಾಡಿದ್ದಾರೆ.

ಸ್ಯಾಂಡಲ್‍ವುಡ್ ನಟ ಸೃಜನ್ ಲೋಕೇಶ್ ಅವರು ‘ಲೋಕೇಶ್ ಪ್ರೋಡಕ್ಷನ್’ ಮೂಲಕ ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋ ನೀಡಿದ್ದಾರೆ. ಈಗ ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ಮೂಲಕ ಸಾಮಾನ್ಯ ಜನರಿಗೆ ಸಹಾಯ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *