ಬೆಳಗಾವಿ: ಗಂಡು ಮಗು ಹುಟ್ಟಿದಕ್ಕೆ ಪಾರ್ಟಿ ಕೇಳಿದ ಸ್ನೇಹಿನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೈಲಹೊಂಗಲ (Bailhongal) ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹಣಮಂತಪ್ಪ ಯಮನಪ್ಪ ಇಟಗಿ ಕೊಲೆಯಾದ ದುರ್ದೈವಿ. ಈತನ ಗೆಳೆಯ ವಿಶ್ವನಾಥ ಪೂಜೇರಿ ಕೊಲೆಗೈದ ಆರೋಪಿ. ಇಬ್ಬರು ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯಲ್ಲಿ ಕುಳಿತು ಹರಟೆಯಲ್ಲಿ ತೊಡಗಿದ್ದರು. ಆಗ ಗಂಡು ಮಗು ಹುಟ್ಟಿದಕ್ಕೆ ವಿಶ್ವನಾಥ್ ಬಳಿ ಹಣಮಂತಪ್ಪ ಪಾರ್ಟಿ ಕೇಳಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಇದನ್ನೂ ಓದಿ: ಕಾರಲ್ಲೇ ಪ್ರೇಮಿಗಳ ಗಲಾಟೆ – ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಯುವಕ ಆತ್ಮಹತ್ಯೆ
ಗಲಾಟೆ ವೇಳೆ ವಿಶ್ವನಾಥನ ಕಣ್ಣಿಗೆ ರಭಸವಾಗಿ ಹಣಮಂತಪ್ಪ ಬೆರಳುತಾಗಿದೆ. ಇದೇ ಸಿಟ್ಟಲ್ಲಿ ಕಲ್ಲಿನಿಂದ ಹಣಮಂತ ತಲೆಗೆ ಆರೋಪಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಹಣಮಂತಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೋಹರಂ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಈಗ ನೆತ್ತರು ಹರಿದಿದ್ದು, ಸೂತಕದ ಛಾಯೆ ಮನೆಮಾಡಿದೆ.
ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನೇಸರಗಿ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿನಿಮಾ ಮೀರಿಸೋ ಲವ್ ಟ್ರ್ಯಾಜಿಡಿ – 6 ವರ್ಷಗಳ ಪ್ರೇಮ ಪ್ರಿಯಕರನ ಸಾವಿನಲ್ಲಿ ಅಂತ್ಯ!
