– ಮುಂಚಿತವಾಗಿಯೇ ವಿಡಿಯೋ ರೆಕಾರ್ಡ್ ಮಾಡಿದ್ದ ದೀಪ್ಕೆ
ನವದೆಹಲಿ: ಅಭಿಜಿತ್ ದೀಪ್ಕೆ (Abhijeet Dipke), ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರು ಪೊಲೀಸ್ ವಶದಲ್ಲಿರುವವರೆಗೆ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಸಿಜೆಪಿಯ (CJP) ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ (Ajinkya Shinde) ವಹಿಸಲಿದ್ದಾರೆ.
ತಮ್ಮನ್ನು ಬಂಧಿಸುವ ಸಾಧ್ಯತೆಯನ್ನು ನಿರೀಕ್ಷಿಸಿದ್ದ ಅಭಿಜಿತ್, ಮುನ್ನೆಚ್ಚರಿಕೆಯಾಗಿ ಶುಕ್ರವಾರ ರಾತ್ರಿಯೇ ವೀಡಿಯೋವನ್ನು ಮೊದಲೇ ರೆಕಾರ್ಡ್ ಮಾಡಿಕೊಂಡಿದ್ದರು. ಇದನ್ನೂ ಓದಿ: ದೆಹಲಿ ಕನ್ನಾಟ್ ಪ್ಲೇಸ್‌ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ – ಇಬ್ಬರಿಗೆ ಗಾಯ, 50 ಪ್ರತಿಭಟನಾಕಾರರು ವಶಕ್ಕೆ
IMPORTANT
Until Abhijeet Dipke, Saurav Das and Ashutosh Ranka are in detention, CJP’s Organization In-Charge Ajinkya Shinde will lead this protest at Jantar Mantar.
Abhijeet had pre-recorded this video last night in anticipation of a potential arrest. @AjinkyaCJP https://t.co/WSQ69mKfTV
— Cockroach Janta Party – CJP (@Cockroachisback) October 10, 2026
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಮುಂಬೈನಿಂದ ದೆಹಲಿಗೆ ಆಗಮಿಸಿದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ವಕ್ತಾರರಾದ ಅಶುತೋಷ್ ರಾಂಕಾ, ಸೌರವ್ ದಾಸ್ ಅವರನ್ನು ದೆಹಲಿ ಪೊಲೀಸರು ವಿಮಾನದ ಒಳಗಡೆಯೇ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಗಾಳಿಗೆ ಹಾರಿಬಿದ್ದ ಶಾಲೆಯ ಮೇಲ್ಛಾವಣಿ – ಮೂರು ಕಾರುಗಳು ಜಖಂ
ನಾವು ಎಲ್ಲದ್ದಕ್ಕೂ ಸಿದ್ದರಿದ್ದೇವೆ. ನಾವು ಯಾವುದಕ್ಕೂ ಹೆದರಲ್ಲ. ಅವರು ನನ್ನನ್ನು ಬಂಧಿಸಲಿ ಅಥವಾ ವಶಕ್ಕೆ ಪಡೆಯಲಿ. ಅದರಿಂದ ನನಗೇನೂ ವ್ಯತ್ಯಾಸವಾಗುವುದಿಲ್ಲ. ಯುಎಪಿಎ ಅಥವಾ ಎನ್‌ಎಸ್‌ಎ ಕಾಯ್ದೆಗಳನ್ನು ಹೇರಲಿ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳಿಗಾಗಿ ಮತ್ತು ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಅಭಿಜಿತ್ ದೀಪ್ಕೆ ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ಸ್ಥಗಿತಕ್ಕೆ ಕೇಂದ್ರವೇ ಕಾರಣ, ಮೋದಿಗೆ ಪ್ರತಿಭಟನೆಯ ಭಯ: ಪ್ರಿಯಾಂಕ್ ಕಿಡಿ

