Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ – ಸಾಕ್ಷ್ಯ ನೀಡಿ ಸ್ಪಷ್ಟನೆ ನೀಡಿದ ಸುಧಾಕರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ – ಸಾಕ್ಷ್ಯ ನೀಡಿ ಸ್ಪಷ್ಟನೆ ನೀಡಿದ ಸುಧಾಕರ್

Bengaluru City

ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ – ಸಾಕ್ಷ್ಯ ನೀಡಿ ಸ್ಪಷ್ಟನೆ ನೀಡಿದ ಸುಧಾಕರ್

Public TV
Last updated: October 11, 2021 6:10 pm
Public TV
Share
3 Min Read
SUDAKAR 2
SHARE

ಬೆಂಗಳೂರು: ನಗರದ ನಿಮ್ಹಾನ್ಸ್ ನ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ, ಕರ್ನಾಟಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಸಂದೇಶ ವಿವಾದಕ್ಕೀಡಾಗಿತ್ತು. ಇದೀಗ ಸ್ವತಃ ಅವರೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

SUDAKAR 2

ಸ್ಪಷ್ಟನೆಯಲ್ಲಿ ಏನಿದೆ?
ಶತಮಾನದ ಅತ್ಯಂತ ದೊಡ್ಡ ಸಾಂಕ್ರಾಮಿಕವನ್ನು ಜಗತ್ತು ಎದುರಿಸುತ್ತಿರುವ ಸಮಯದಲ್ಲಿ, ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯಲ್ಲಿ ಅಕ್ಟೋಬರ್ 11 ಭಾನುವಾರದಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆಯಾಯಿತು. ಸಾಂಕ್ರಾಮಿಕದಿಂದ ತಮ್ಮವರನ್ನು ಕಳೆದುಕೊಂಡಿರುವುದು, ಒಂಟಿತನ, ಆರ್ಥಿಕ ನಷ್ಟ, ಆತಂಕ ಮೊದಲಾದ ಕಾರಣಗಳಿಂದ ಜನರಲ್ಲಿ ಮಾನಸಿಕ ಒತ್ತಡ, ಉದ್ವೇಗ, ಖಿನ್ನತೆ ಹೆಚ್ಚಾಗಿದೆ. ಅದರಲ್ಲೂ ಯುವಜನಾಂಗದಲ್ಲಿ ಈ ಸಮಸ್ಯೆ ಅಧಿಕವಾಗಿದೆ. ನಿಮ್ಹಾನ್ಸ್ ಕಾರ್ಯಕ್ರಮದ ನನ್ನ ಭಾಷಣದಲ್ಲಿ ಈ ಮಾನಸಿಕ ಸಮಸ್ಯೆ, ಸವಾಲುಗಳನ್ನು ಭಾರತದ ಕೌಟುಂಬಿಕ ಮೌಲ್ಯಗಳ ಮೂಲಕ ಹೇಗೆ ನಿವಾರಿಸಬಹುದು ಎಂಬ ಸಂದೇಶವನ್ನು ನೀಡಬೇಕೆಂಬ ಉದ್ದೇಶ ಹೊಂದಿದ್ದೆ. ಇದನ್ನೂ ಓದಿ: ಆಧುನಿಕ ಮಹಿಳೆಯರು ಮದುವೆ ಆದ್ರೆ ಮಕ್ಕಳನ್ನು ಹೆರಲು ಬಯಸಲ್ಲ: ಸುಧಾಕರ್

SUDHAKAR

ಭಾನುವಾರ ನಿಮ್ಹಾನ್ಸ್ ನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಮಾಡಿದ 19.30 ನಿಮಿಷದ ನನ್ನ ಈ ದೀರ್ಘ ಭಾಷಣದಲ್ಲಿ, ಒಂದು ಭಾಗವನ್ನು ನೈಜವಾದ ಉದ್ದೇಶದಿಂದ ಹೊರಗೆಳೆದು ಅಪಾರ್ಥ ಕಲ್ಪಿಸಲಾಗಿದೆ ಎಂಬುದು ಬಹಳ ದುರದೃಷ್ಟಕರ ಸಂಗತಿ. ಈ ಮೂಲಕ ಭಾಷಣದ ವ್ಯಾಪಕವಾದ ಅರ್ಥವನ್ನು ಸಂಕೀರ್ಣಗೊಳಿಸಲಾಗಿದೆ.

SUDHAKAR 2

ನಾನು ಒಬ್ಬ ಹೆಮ್ಮೆಯ ಹೆಣ್ಣುಮಗಳ ತಂದೆ ಹಾಗೂ ಸಂಪೂರ್ಣ ವೃತ್ತಿಪರ ತರಬೇತಿ ಪಡೆದ ವೈದ್ಯ ಎಂದು ಮೊದಲಿಗೆ ಹೇಳುತ್ತೇನೆ. ಆದ್ದರಿಂದ ಮಹಿಳೆಯರ ಸುತ್ತಲಿನ ಸೂಕ್ಷ್ಮತೆಗಳನ್ನು, ಸಂವೇದನೆಗಳನ್ನು ಸಂಪೂರ್ಣವಾಗಿ ಅರಿತಿದ್ದೇನೆ ಹಾಗೂ ನಾವು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಮಾನಸಿಕ ಆರೋಗ್ಯದ ಸವಾಲುಗಳನ್ನು ಪರಿಹರಿಸುವ ಸೌಲಭ್ಯಗಳ ಕೊರತೆ ಇರುವ ಕಡೆಗಳಲ್ಲಿ, ಕುಟುಂಬಗಳು ವ್ಯಕ್ತಿಗೆ ಮೌಲ್ಯಯುತವಾದ ವ್ಯವಸ್ಥೆಯನ್ನು ಸೃಷ್ಟಿಸಿಕೊಡುತ್ತದೆ ಎಂಬುದು ಸಂಶೋಧನೆ ಹಾಗೂ ಅಧ್ಯಯನಗಳಿಂದ ಸಾಬೀತಾಗಿದೆ. ಇದು ವ್ಯಕ್ತಿಯ ವಿವಿಧ ಮಾನಸಿಕ ಒತ್ತಡಗಳನ್ನು ನಿರ್ವಹಣೆ ಮಾಡಲು ಸಹಾಯಕವಾಗುತ್ತದೆ. ಭಾರತೀಯ ಸಮಾಜವು ಪರಸ್ಪರ ಅವಲಂಬನೆ, ಸಾಮಾಜಿಕ ಒಗ್ಗಟ್ಟು, ಸಾಮೂಹಿಕತೆಯಿಂದ ಕೂಡಿದೆ. ಭಾರತದ ಸಾಂಪ್ರದಾಯಿಕ ಅವಿಭಕ್ತ ಕುಟುಂಬವು ಸಾಮೂಹಿಕತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಹಾಗೂ ಇದು ಮಾನಸಿಕ ಆರೋಗ್ಯ ಸಮಸ್ಯೆಗೊಳಗಾದವರ ಆರೈಕೆಗೆ ಸೂಕ್ತ ಸೌಲಭ್ಯ ಒದಗಿಸುತ್ತದೆ.

SUDHAKAR 1

ಪಶ್ಚಿಮದ ದೇಶಗಳ ಸಮಾಜವು ವಿಭಕ್ತ ವ್ಯವಸ್ಥೆಯನ್ನು ಉತ್ತೇಜಿಸಿದರೆ, ಭಾರತೀಯ ಸಮಾಜವು ಸಾಮೂಹಿಕತೆ, ಪರಸ್ಪರ ಅವಲಂಬನೆಯನ್ನು ಪ್ರೋತ್ಸಾಹಿಸುತ್ತದೆ. ಆದ್ದರಿಂದ ಭಾರತೀಯ ಹಾಗೂ ಏಷ್ಯಾದ ಕುಟುಂಬಗಳು, ಸದಸ್ಯರ ಬಗ್ಗೆ ಕಾಳಜಿ ವಹಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತದೆ ಮತ್ತು ಇದರಿಂದಲೇ ಪಾಶ್ಚಿಮಾತ್ಯ ದೇಶಗಳಿಗಿಂತ ಹೆಚ್ಚು ಆರೋಗ್ಯದ ಹೊರೆಯನ್ನು ಹೊತ್ತುಕೊಳ್ಳುತ್ತದೆ. ಭಾರತೀಯ ಕುಟುಂಬಗಳು ತಮ್ಮ ರೋಗಿಗಳ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸುತ್ತದೆ ಹಾಗೂ ಆರೈಕೆಯಲ್ಲೂ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳುತ್ತದೆ. ಇದನ್ನೂ ಓದಿ: ಮದ್ವೆಯಾದ ಬಳಿಕ ಒಂಟಿಯಾಗಿ ಜೀವಿಸ್ತಿರೋದು ಅವರ ನಾಯಕ- ಸುಧಾಕರ್‌ಗೆ ನಿಂಬಾಳ್ಕರ್ ಟಾಂಗ್

ಈ ಅಂಶವು ಇಂಡಿಯನ್ ಜರ್ನಲ್ ಆಫ್ ಸೈಕಿಯಾಟ್ರಿಯಲ್ಲಿ ಪ್ರಕಟಗೊಂಡ ಸಂಶೋಧನೆಯಲ್ಲಿ ಸಾಬೀತಾಗಿದೆ. ಯುವಜನರಲ್ಲಿ ಮದುವೆಗೆ ನಿರಾಕರಣೆ ಹಾಗೂ ಮಕ್ಕಳನ್ನು ಪಡೆಯುವುದಕ್ಕೆ ಹಿಂಜರಿಕೆಗೆ ಸಂಬಂಧಿಸಿದ ನನ್ನ ಹೇಳಿಕೆ ಕೂಡ ಸರ್ವೆಯೊಂದನ್ನು ಆಧರಿಸಿದ ಹೇಳಿಕೆಯಾಗಿದೆ. YouGov-Mint-CPR Millennial Survey ಪ್ರಕಾರ, ಹೊಸ ಪೀಳಿಗೆಯಲ್ಲಿ (ಮಿಲೆನಿಯಲ್ಸ್) ಶೇ.19 ರಷ್ಟು ಮಂದಿ ಮದುವೆ ಹಾಗೂ ಮಕ್ಕಳನ್ನು ಪಡೆಯುವುದಕ್ಕೆ ಆಸಕ್ತಿ ಹೊಂದಿಲ್ಲ. ಇನ್ನೂ ಶೇ.8 ರಷ್ಟು ಮಂದಿ ಮಕ್ಕಳ ಬಗ್ಗೆ ಆಸಕ್ತಿ ಹೊಂದಿದ್ದಾರೆ, ಆದರೆ ವಿವಾಹಕ್ಕೆ ಸಿದ್ಧರಾಗಿಲ್ಲ. ನಂತರದ ಪೀಳಿಗೆಯಲ್ಲಿ (ಪೋಸ್ಟ್ ಮಿಲೆನಿಯಲ್ಸ್-ಜನರೇಶನ್ ಝೆಡ್) ಶೇ.23 ರಷ್ಟು ಮಂದಿ ವಿವಾಹ ಹಾಗೂ ಮಕ್ಕಳ ಬಗ್ಗೆ ಆಸಕ್ತಿ ಹೊಂದಿಲ್ಲ. ಈ ಟ್ರೆಂಡ್ ನಲ್ಲಿ ಲಿಂಗ ಆಧಾರಿತವಾಗಿ ಕೆಲ ವ್ಯತ್ಯಾಸಗಳಿವೆ. ಇದು ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಸಂಬಂಧಿಸಿದೆ. ಅದ್ಭುತವಾದ ಬೆಂಬಲ ನೀಡುವಂತಹ ವಾತಾವರಣ ಹೊಂದಿರುವ ನಮ್ಮ ಸಾಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯಿಂದ, ಮಾನಸಿಕ ಆರೋಗ್ಯ ಸಮಸ್ಯೆಗಳಾದ ಒತ್ತಡ, ಉದ್ವೇಗ, ಖಿನ್ನತೆಗೆ ನಮ್ಮ ಯುವಜನತೆ ಪರಿಹಾರ ಪಡೆಯಬಹುದು ಎಂಬುದು ಮಾತ್ರ ನನ್ನ ಮಾತಿನ ಮುಖ್ಯ ಉದ್ದೇಶವಾಗಿತ್ತು.

ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಮಹಿಳೆಯರನ್ನು ಉದ್ದೇಶಿಸಿ ನಾನು ಅಂತಹ ಹೇಳಿಕೆಯನ್ನು ನೀಡಿಲ್ಲ ಹಾಗೂ ನನ್ನ ಮಾತು ಅಂತಹ ಉದ್ದೇಶವನ್ನು ಹೊಂದಿರಲೇ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಜೊತೆಗೆ ಪ್ರತಿಯೊಬ್ಬರೂ ನನ್ನ ಫೇಸ್‍ಬುಕ್ ಪೇಜ್ ನಲ್ಲಿ ಲಭ್ಯವಿರುವ ನನ್ನ ಭಾಷಣವನ್ನು ಸಂಪೂರ್ಣವಾಗಿ ಆಲಿಸಬೇಕೆಂದು ಕೋರುತ್ತೇನೆ.

TAGGED:dr. k sudhakarPublic TVwomenನಿಮ್ಹಾನ್ಸ್ಪಬ್ಲಿಕ್ ಟಿವಿಮಹಿಳೆಸುಧಾಕರ್
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Donald Trump Strait Of Hormuz
Latest

ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ – ಇರಾನ್‌ನೊಂದಿಗೆ ಜಂಟಿ ಉದ್ಯಮ ಬಯಸಿದ ಟ್ರಂಪ್‌

Public TV
By Public TV
4 hours ago
Gujarat Titans 1
Cricket

ಗೆಲ್ಲುವ ಪಂದ್ಯ ಕೈಚೆಲ್ಲಿದ ಡೆಲ್ಲಿ – ಗುಜರಾತ್‌ಗೆ 1 ರನ್‌ ರೋಚಕ ಜಯ 

Public TV
By Public TV
4 hours ago
krs party worker arrest
Latest

ಗೃಹಸಚಿವರನ್ನು ಪ್ರಶ್ನೆ ಮಾಡಿದ ಕೆಆರ್‌ಎಸ್ ಪಕ್ಷದ ‌ಮುಖಂಡ ಬಂಧನ

Public TV
By Public TV
5 hours ago
Bhutnal Lake
Bengaluru City

ಪ್ರವಾಸಕ್ಕೆ ಹೋಗಿದ್ದ ಬೆಂಗ್ಳೂರಿನ ಮೂವರು ಕೆರೆಯಲ್ಲಿ ಮುಳುಗಿ ಸಾವು

Public TV
By Public TV
5 hours ago
01 7
Big Bulletin

ಬಿಗ್‌ ಬುಲೆಟಿನ್‌ 08 April 2026 ಭಾಗ-1

Public TV
By Public TV
6 hours ago
02 7
Big Bulletin

ಬಿಗ್‌ ಬುಲೆಟಿನ್‌ 08 April 2026 ಭಾಗ-2

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?