ರಾಜ್ಯದಲ್ಲಿ ಜೂನ್ 14ರವರೆಗೆ ಲಾಕ್‍ಡೌನ್ ವಿಸ್ತರಣೆ ಸಾಧ್ಯತೆ – ಅನ್‍ಲಾಕ್‍ಗೆ ತಜ್ಞರ 3 ಷರತ್ತು

Public TV
2 Min Read
LOCKDOWN

ಬೆಂಗಳೂರು: ರಾಜ್ಯದಲ್ಲಿ ಜೂನ್ 7ರ ಬಳಿಕವೂ ಲಾಕ್‍ಡೌನ್ ವಿಸ್ತರಣೆ ಪಕ್ಕಾ ಆಗಿದೆ. ಬಹುತೇಕ ಇನ್ನೊಂದು ವಾರ ಅಂದರೆ ಜೂನ್ 14ರವರೆಗೆ ಲಾಕ್‍ಡೌನ್ ವಿಸ್ತರಣೆ ಸಾಧ್ಯತೆ ದಟ್ಟವಾಗಿದೆ. ತಾಂತ್ರಿಕ ಸಮಿತಿ ಸದಸ್ಯರು ತಮ್ಮ ವರದಿಯನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‍ಗೆ ಸಲ್ಲಿಸಿದ್ದಾರೆ. ವರದಿಯಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾ ಮಾಡೆಲ್ ಪ್ರಸ್ತಾಪಿಸಿದ್ದಾರೆ. ಜೊತೆಗೆ ಅನ್‍ಲಾಕ್‍ಗೆ ಸೂಚಿಸಿರೋ 3 ಪ್ರಮುಖ ಷರತ್ತುಗಳನ್ನು ಸೂಚಿಸಿದ್ದಾರೆ.

FotoJet 2 53

3 ಅಗತ್ಯಗಳು ಪಾಲನೆಯಾದ್ರಷ್ಟೇ ಅನ್‍ಲಾಕ್ ಮಾಡಿ, ಇಲ್ಲವಾದಲ್ಲಿ ಲಾಕ್‍ಡೌನ್ ಮುಂದುವರಿಕೆ ಅನಿವಾರ್ಯ ಅಂದಿದ್ದಾರೆ. ತಜ್ಞರ ವರದಿಯ ಸಾರಾಂಶವನ್ನು ಹೊತ್ತೊಯ್ದ ಸುಧಾಕರ್, ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ತಜ್ಞರ ವರದಿಯನ್ನೇ ಪರಿಗಣಿಸೋಣ, ಸಚಿವರ ಜೊತೆಯೂ ಮಾತಾಡೋಣ. ಇನ್ನೊಂದು ವಾರ ಮುಂದುವರಿಸುವ ಬಗ್ಗೆ ಎರಡ್ಮೂರು ದಿನದಲ್ಲಿ ನಿರ್ಧಾರ ಮಾಡೋಣ ಅಂತ ಹೇಳಿರೋದಾಗಿ ತಿಳಿದು ಬಂದಿದೆ.

LOCKDOWN 2 1

ಇದರ ಬೆನ್ನಲ್ಲೇ, ನಾಳೆ ಕೋವಿಡ್ ನಿರ್ವಹಣಾ ಸಚಿವರ ಜೊತೆ ಸಿಎಂ ಸಭೆ ಕರೆದಿದ್ದಾರೆ. ಸಭೆ ಬಳಿಕ ಬುಧವಾರ ಅಥವಾ ಗುರುವಾರ ಮತ್ತೊಮ್ಮೆ ಸಚಿವರು, ಅಧಿಕಾರಿಗಳು, ತಜ್ಞರ ಜೊತೆ ಸಭೆ ನಡೆಸಿ, ಶುಕ್ರವಾರದೊಳಗೆ ಲಾಕ್ ಡೌನ್ ವಿಸ್ತರಣೆ ಘೋಷಿಸುವ ಸಾಧ್ಯತೆ ಇದೆ.

Tamilnadu Lockdown 3

ತಜ್ಞರ ವರದಿಯಲ್ಲಿ ಏನಿದೆ?: 5 ಸಾವಿರಕ್ಕಿಂತ ಕೇಸ್ ಇಳಿಕೆಯಾಗದ ಹೊರತು ಅನ್‍ಲಾಕ್ ಬೇಡ. 5 ಸಾವಿರಕ್ಕಿಂತ ಕಡಿಮೆ ಕೇಸ್ ಬಂದ ಬಳಿಕ ಹಂತ ಹಂತವಾಗಿ ಅನ್ಲಾಕ್ ಮಾಡೋದು ಸೂಕ್ತ. ಆಸ್ಟ್ರೇಲಿಯಾ ವಿಕ್ಟೋರಿಯಾ ಮಾದರಿ ಲಾಕ್‍ಡೌನ್ ಮುಂದುವರಿಸಿ. ವಿಕ್ಟೋರಿಯಾದಲ್ಲಿ ಕೇವಲ 7 ಕೇಸ್‍ಗಳಿದ್ದರೂ ಟಫ್ ರೂಲ್ಸ್ ಮುಂದುವರಿದಿದೆ. ಈಗ ಸೋಂಕು ಇಳಿಮುಖವಾಗಿದ್ದರೂ, ಸಾವಿನ ಪ್ರಮಾಣ ಕಡಿಮೆ ಆಗಿಲ್ಲ. ಹಳ್ಳಿಗಳಲ್ಲಿ ಈಗ 2ನೇ ಅಲೆಯ ಸೋಂಕಿದೆ. ಈ ಸಮಯದಲ್ಲಿ ಅನ್‍ಲಾಕ್ ಮಾಡಿದ್ರೆ ರೂಪಾಂತರಿ ವೈರಸ್ ಮತ್ತೆ ವ್ಯಾಪಕವಾಗಬಹುದು. ಹೀಗಾಗಿ ಕರ್ನಾಟಕದಲ್ಲಿಯೂ ರಿಸ್ಕ್ ಬೇಡವೇ ಬೇಡ ಎಂದು ತಜ್ಞರ ನೀಡಿರುವ ವರದಿಯಲ್ಲಿದೆ ಎಂದು ತಿಳಿದು ಬಂದಿದೆ.

Lockdown 1

ಅನ್‍ಲಾಕ್‍ಗೆ ತಜ್ಞರ ಷರತ್ತುಗಳು:
1. ಬೆಂಗಳೂರಲ್ಲಿ ಸೋಂಕಿನ ಪ್ರಮಾಣ ಶೇ.3ಕ್ಕೆ ಇಳಿಯಬೇಕು.
2. ರಾಜ್ಯದಲ್ಲಿ ಸೋಂಕಿನ ಒಟ್ಟಾರೆ ಪ್ರಮಾಣ ಶೇ.5ಕ್ಕೆ ಇಳಿಯಬೇಕು.
3. ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಶೇ.6ಕ್ಕೆ ಇಳಿಯಬೇಕು.

maharashtra lockdown1

ಲಾಕ್‍ಡೌನ್ ಮುಂದುವರೆಕೆಗೆ ತಾಂತ್ರಿಕ ಸಮಿತಿ ಸದಸ್ಯರು ವರದಿ ಸಲ್ಲಿಕೆ ಬೆನ್ನಲ್ಲೇ ಇನ್ನು 3-4 ದಿನಗಳಲ್ಲಿ ನಿರ್ಧಾರ ಕೈಗೊಳ್ಳೋದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಕೋವಿಡ್ ಸಚಿವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳೋದಾಗಿ ಹೇಳಿದ್ದಾರೆ. ಆರೋಗ್ಯ ಸಚಿವ ಡಾ. ಸುಧಾಕರ್, ತಜ್ಞರ ವರದಿ ಆಧರಿಸಿಯೇ ಕ್ರಮ ತೆಗೆದುಕೊಳ್ತೇವೆ. ಏಕಾಏಕಿ ನಿರ್ಧಾರ ಸಾಧ್ಯವಿಲ್ಲ. ಬಹಳ ಸುಲಭವಾಗಿ ಲಾಕ್‍ಡೌನ್ ಅಂತ ಹೇಳಬಹುದು. ಎಚ್ಚರ ತಪ್ಪಿದ್ರೆ ಅನಾಹುತ ಆಗಬಹುದು ಅಂದಿದ್ದಾರೆ.

Bengaluru Lockdown Police 5

ಕಂದಾಯ ಸಚಿವ ಅಶೋಕ್, ಬೆಂಗಳೂರಲ್ಲಿ ದಿನಕ್ಕೆ ಸೋಂಕು 500ಕ್ಕೆ ಇಳಿಯಬೇಕು. ರಾಜ್ಯದಲ್ಲಿ ದಿನಕ್ಕೆ 2-3 ಸಾವಿರಕ್ಕೆ ಸೋಂಕು ಇಳಿಯಬೇಕು. ಆಗ ಮಾತ್ರ ಲಾಕ್‍ಡೌನ್ ಸಡಿಲಿಕೆ ಮಾಡ್ತೇವೆ ಅಂದಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶೇ.5ರಷ್ಟು ಪಾಸಿಟಿವಿಟಿ ರೇಟ್ ಬರಬೇಕು. ಅಲ್ಲಿಯವರೆಗೆ ಲಾಕ್‍ಡೌನ್ ಮುಂದುವರೆಸಿ ಅಂತ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ತಜ್ಞರು ನೀಡಿರುವ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿ ಅಂದಿದ್ದಾರೆ. ಇನ್ನು ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ, ಸದ್ಯದ ಪರಿಸ್ಥಿತಿಯಲ್ಲಿ ಲಾಕ್‍ಡೌನ್ ಮುಂದುವರೆಸುವುದೇ ಸೂಕ್ತ ಅಂತ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *