ಬೆಂಗಳೂರು: ನೀಟ್ ಪರೀಕ್ಷೆ (Neet Exam) ನಡೆಸೋದ್ರಲ್ಲಿ ಕೇಂದ್ರ ಸರ್ಕಾರ (Central Govt) ವಿಫಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದ್ದಾರೆ.
ನೀಟ್ ಮರುಪರೀಕ್ಷೆಗೆ ದಿನಾಂಕ ನಿಗದಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನೀಟ್ ಪರೀಕ್ಷೆ ನಡೆಸುವದರಲ್ಲಿ ಕೇಂದ್ರ ಸರ್ಕಾರದವರು ವಿಫಲರಾಗಿದ್ದಾರೆ. ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈಗ ಮತ್ತೆ ಎಕ್ಸಾಂ ಬರೆಯುವ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:NE ET 2026 Paper Leak | ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ : ಧರ್ಮೇಂದ್ರ ಪ್ರಧಾನ್
ರಾಜ್ಯದಲ್ಲಿ ಎಸ್‌ಐಆರ್ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಎಸ್‌ಐಆರ್ ಪ್ರಾರಂಭ ಆಗುತ್ತಿದೆ. ನಾವು ಕೂಡ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ತೀವಿ ಎಂದಿದ್ದಾರೆ.

