Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜೂ.8ರ ವರೆಗೂ ಸುಶಾಂತ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದೆ: ರಿಯಾ ಸ್ಪಷ್ಟನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಜೂ.8ರ ವರೆಗೂ ಸುಶಾಂತ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದೆ: ರಿಯಾ ಸ್ಪಷ್ಟನೆ

Cinema

ಜೂ.8ರ ವರೆಗೂ ಸುಶಾಂತ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದೆ: ರಿಯಾ ಸ್ಪಷ್ಟನೆ

Public TV
Last updated: July 31, 2020 2:46 pm
Public TV
Share
2 Min Read
Rhea 1
SHARE

– ನನಗೆ ಅನೇಕ ಅತ್ಯಾಚಾರ, ಕೊಲೆ ಬೆದರಿಕೆಗಳು ಬರ್ತಿವೆ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಬಿಹಾರದಲ್ಲಿ ದಾಖಲಿಸಿರುವ ಎಫ್ಐಆರ್‌ನಲ್ಲಿ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ನಟಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: 43 ದಿನಗಳ ಬಳಿಕ ದೂರು ದಾಖಲಿಸಿದ್ದೇಕೆ? ಸುಶಾಂತ್ ತಂದೆ ಸ್ಪಷ್ಟನೆ

ಇತ್ತೀಚೆಗೆ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ತಂದೆ, ನಟಿ ರಿಯಾ ಚಕ್ರವರ್ತಿ ಸೇರಿದಂತೆ ಆರು ಮಂದಿ ವಿರುದ್ಧ ಪಾಟ್ನಾದಲ್ಲಿ ಎಫ್‍ಐಆರ್ ದಾಖಲಿಸಿದ್ದರು. ಇದೀಗ ಈ ತನಿಖೆಯನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ಬುಧವಾರ ನಟಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

sushanth 1

ಅಲ್ಲದೇ ಸುಶಾಂತ್ ಸಿಂಗ್ ಸಾವಿನಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಇದರಿಂದ ನನಗೂ ಅನೇಕ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಬಂದಿವೆ. ಜೊತೆಗೆ ಜೂನ್ 8 ರವರೆಗೆ ಸುಶಾಂತ್ ಜೊತೆ ಲಿವ್-ಇನ್ ರಿಲೇಷನ್‍ಶಿಪ್‍ನಲ್ಲಿದ್ದೆ ಎಂಬ ಮಾಹಿತಿಯನ್ನ ಕೂಡ ಸುಪ್ರೀಂ ಕೋರ್ಟಿಗೆ ನೀಡಿದ್ದಾರೆ. ಇದನ್ನೂ ಓದಿ: ಬಾಲಿವುಡ್‍ಗೆ ಬೈ ಹೇಳಿ ಕೊಡಗಿನಲ್ಲಿ ಕೃಷಿ ಮಾಡೋಕೆ ಮುಂದಾಗಿದ್ದ ಸುಶಾಂತ್ ಸಿಂಗ್

sushanth riya

ರಿಯಾ ಸಲ್ಲಿಸಿರೋ ಅರ್ಜಿಯಲ್ಲಿ ಏನಿದೆ?
ಪ್ರಸ್ತುತ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಕಿಶೋರ್ ಸಿಂಗ್ ಸಲ್ಲಿಸಿರುವ ಎಫ್ಐಆರ್‌ನಲ್ಲಿ ತಪ್ಪಾಗಿ ಹೇಳಿಕೆ ನೀಡಿದ್ದು, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಅಲ್ಲದೇ ಪಟ್ನಾದಲ್ಲಿ ಅವರಿಗೆ ಬಹಳ ಪ್ರಭಾವ ಇದೆ. ಇದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ನ್ಯಾಯ ಸಮ್ಮತ ತನಿಖೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಬಿಹಾರದಲ್ಲಿ ದಾಖಲಿಸಿರುವ ಎಫ್ಐಆರ್‌ನ ತನಿಖೆಯನ್ನು ಮುಂಬೈಗೆ ವರ್ಗಾಯಿಸಬೇಕು ಎಂದು ರಿಯಾ ತಮ್ಮ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

sushanth singh

ಸುಶಾಂತ್ ಕೆಲವು ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು. ಆದರೆ ಜೂನ್ 14ರಂದು ಅವರು ಬಾಂದ್ರಾದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಸುಶಾಂತ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಓವರ್ ಡೋಸ್ ಮಾತ್ರೆ ಕೊಟ್ಟಿದ್ದಾಳೆ: ಸುಶಾಂತ್ ತಂದೆ ಗಂಭೀರ ಆರೋಪ

sushant rhea story 1595939343

ಅಷ್ಟೇ ಅಲ್ಲದೇ ರಿಯಾ ಸಲ್ಲಿಸಿರುವ ಅರ್ಜಿಯಲ್ಲಿ, ನಾನು ಜೂನ್ 8, 2020 ರವರೆಗೆ ಸುಶಾಂತ್ ಸಿಂಗ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದೆ ಎಂಬ ಮಾಹಿತಿಯನ್ನ ಕೋರ್ಟಿಗೆ ನೀಡಿದ್ದಾರೆ. ಅದಾದ ಬಳಿಕ ನಾನು ತಾತ್ಕಾಲಿಕವಾಗಿ ಮುಂಬೈನಲ್ಲಿರುವ ನನ್ನ ಸ್ವಂತ ನಿವಾಸಕ್ಕೆ ಸ್ಥಳಾಂತರಗೊಂಡೆ. ನಟನ ಸಾವಿನಿಂದಾಗಿ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಜೊತೆಗೆ ನಟನ ಸಾವಿನ ನಂತರ ಅನೇಕ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ.

SUSHANT

ತಮಗೆ ಬರುತ್ತಿದ್ದ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಕರೆಗಳ ವಿರುದ್ಧ ಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಂದ್ರಾ ಪೊಲೀಸರು ಹಲವು ಬಾರಿ ಸಮನ್ಸ್ ನೀಡಿ ತಮ್ಮ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮುಂಬೈ ಪೊಲೀಸರ ತನಿಖೆ ಇನ್ನೂ ನಡೆಯುತ್ತಿದೆ. ಈ ಮಧ್ಯೆ ಸುಶಾಂತ್ ಸಿಂಗ್ ತಂದೆ ನನ್ನ ಮೇಲೆ ಬಿಹಾರದಲ್ಲಿ ಪ್ರಭಾವದಿಂದ ಸುಳ್ಳು ಆರೋಪ ಮಾಡಿದ್ದಾರೆ. ಇದರಿಂದ ಬಿಹಾರದ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಎಫ್ಐಆರ್‌ನ ತನಿಖೆಯನ್ನು ಮುಂಬೈಗೆ ವರ್ಗಾಯಿಸಬೇಕು ಎಂದು ರಿಯಾ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Sushant Singh Rajput 2

TAGGED:FIRmumbaiPublic TVRhea ChakrabortySupreme CourtSushant Singh Rajputಎಫ್‍ಐಆರ್ಪಬ್ಲಿಕ್ ಟಿವಿಮುಂಬೈರಿಯಾ ಚಕ್ರವರ್ತಿಸುಪ್ರೀಂ ಕೋರ್ಟ್ಸುಶಾಂತ್ ಸಿಂಗ್ ರಜಪೂತ್
Share This Article
Facebook Whatsapp Whatsapp Telegram

Cinema news

Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories
Dhurandhar 2
ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್‌ 2’ – ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ಕಲೆಕ್ಷನ್‌
Bollywood Cinema Latest Top Stories
Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories

You Might Also Like

21 people arrested from 2 communities Mundaragi Gadgag
Districts

ನೀರಿನ ವಿಚಾರಕ್ಕೆ ಗಲಾಟೆ – 2 ಸಮುದಾಯ 21 ಮಂದಿ ಅರೆಸ್ಟ್‌

Public TV
By Public TV
45 seconds ago
7 Dogs Kidnapped Outsmart Thieves And Walk 17 km Back Home In Incredible True Story
Latest

ಮಾಂಸದ ವ್ಯಾಪಾರಿಗಳಿಂದ ಪಾರಾಗಿ 17 ಕಿ.ಮೀ. ಕ್ರಮಿಸಿ ಮರಳಿ ಹಳ್ಳಿ ಸೇರಿದ 7 ನಾಯಿಗಳು

Public TV
By Public TV
19 minutes ago
Supreme Court
Court

ಹಿಂದೂ, ಬೌದ್ಧ, ಸಿಖ್‌ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್

Public TV
By Public TV
19 minutes ago
Delhi Assembly Bomb Threat
Crime

ದೆಹಲಿ ವಿಧಾನಸಭೆ, ಮೆಟ್ರೋ ಸ್ಟೇಷನ್‌ಗೆ ಬಾಂಬ್ ಬೆದರಿಕೆ

Public TV
By Public TV
28 minutes ago
Mudigere Police Station
Chikkamagaluru

PUC ಹುಡ್ಗ, SSLC ಹುಡ್ಗಿ ಪ್ರೇಮಕ್ಕೆ ಲವ್ ಜಿಹಾದ್ ಆರೋಪ, ಹಲ್ಲೆ – ದೂರಿಗೆ ಪ್ರತಿದೂರು

Public TV
By Public TV
51 minutes ago
Gold
Bengaluru City

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?