Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೊರೊನಾ ವೈರಸ್ ಸೃಷ್ಟಿ ಆಗಿದ್ದು ಎಲ್ಲಿ – ರಹಸ್ಯ ಭೇದಿಸಲು ಹೊರಟ ಅಮೆರಿಕ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Corona | ಕೊರೊನಾ ವೈರಸ್ ಸೃಷ್ಟಿ ಆಗಿದ್ದು ಎಲ್ಲಿ – ರಹಸ್ಯ ಭೇದಿಸಲು ಹೊರಟ ಅಮೆರಿಕ

Corona

ಕೊರೊನಾ ವೈರಸ್ ಸೃಷ್ಟಿ ಆಗಿದ್ದು ಎಲ್ಲಿ – ರಹಸ್ಯ ಭೇದಿಸಲು ಹೊರಟ ಅಮೆರಿಕ

Public TV
Last updated: April 16, 2020 3:56 pm
Public TV
Share
3 Min Read
donald trump
SHARE

ವಾಷಿಂಗ್ಟನ್: ಕೊರೊನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ವುಹಾನ್ ನಲ್ಲಿ ಎಲ್ಲಿ ಎನ್ನುವುದು ಇನ್ನೂ ನಿಗೂಢವಾಗಿದೆ. ಈ ನಿಗೂಢ ರಹಸ್ಯವನ್ನು ಭೇದಿಸಲು ಅಮೆರಿಕ ಈಗ ಮುಂದಾಗಿದೆ.

ಅಮೆರಿಕ ಸರ್ಕಾರ ಈ ವೈರಸ್ ಮೊದಲು ವುಹಾನ್ ನಲ್ಲಿರುವ ವೆಟ್ ಮಾರುಕಟ್ಟೆಯಿಂದ ಮನುಷ್ಯರಿಗೆ ಬಂದಿದೆಯೋ ಅಥವಾ ವುಹಾನ್ ವೈರಾಲಜಿ ಲ್ಯಾಬ್ ನಿಂದ ಸೋರಿಕೆ ಆಗಿದೆಯೋ ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.

ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ಸಂಭವಿಸಿರುವ ಈ ಭಯಾನಕ ಪರಿಸ್ಥಿತಿ ಯಾಕೆ ಸೃಷ್ಟಿ ಆಗಿದೆ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

china virus Wuhan corona

ಟ್ರಂಪ್ ಅವರ ಪ್ರತಿಕ್ರಿಯೆಗೆ ಮಾಧ್ಯಮಗಳು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಬಳಿ ಈ ಬಗ್ಗೆ ನೀವು ಮಾತನಾಡಿದ್ದೀರಾ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಲ್ಯಾಬ್ ಬಗ್ಗೆ ಮಾತನಾಡಿದ ವಿಚಾರವನ್ನು ಚರ್ಚಿಸಲು ಇಷ್ಟ ಪಡುವುದಿಲ್ಲ. ಈ ವಿಚಾರವನ್ನು ಚರ್ಚಿಸುವ ಸರಿಯಾದ ಸಮಯ ಇದಲ್ಲ ಎಂದು ಉತ್ತರಿಸಿದರು.

ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮೈಕ್ ಪಾಂಪಿಯೊ ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ, ಚೀನಾದ ವುಹಾನ್ ನಲ್ಲಿ ವೈರಸ್ ಸೃಷ್ಟಿಯಾಗಿದೆ ಎನ್ನುವುದು ತಿಳಿದಿದೆ. ಈ ವೈರಸ್ ಹೇಗೆ ಹರಡಿತು ಎನ್ನುವ ಬಗ್ಗೆ ಸ್ಪಷ್ಟಪಡಿಸಬೇಕು. ವೈರಾಲಜಿ ಪ್ರಯೋಗಾಲಯದ ಕೆಲವೇ ಮೈಲು ದೂರದಲ್ಲಿ ವೆಟ್ ಮಾರುಕಟ್ಟೆಯಿದೆ. ಈ ವಿಚಾರದ ಬಗ್ಗೆ ಚೀನಾ ಸರ್ಕಾರ ಶುದ್ಧ ಹಸ್ತವಾಗಿರಬೇಕು ಎಂದು ಆಗ್ರಹಿಸಿದ್ದಾರೆ.

Corona 1 1

ಬುಧವಾರ ಫಾಕ್ಸ್ ನ್ಯೂಸ್ ಚೀನಾದ ವೈರಾಲಜಿ ಪ್ರಯೋಗಾಲಯದಿಂದ ಹರಡಿದೆ. ಇದು ಜೈವಿಕ ಅಸ್ತ್ರವಲ್ಲ. ವೈರಸ್ ವಿರುದ್ಧ ಹೋರಾಡಲು ಅಮೆರಿಕಕ್ಕೆ ಸರಿಸಮಾನವಾಗಲು ಅಥವಾ ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವಿದೆ ಎಂದು ತೋರಿಸಲು ಈ ವೈರಸ್ ಅಭಿವೃದ್ಧಿ ಪಡಿಸಿರಬಹುದು ಎಂದು ವರದಿ ಮಾಡಿತ್ತು.

ಈ ವಾರದ ಆರಂಭದಲ್ಲಿ ಡೈಲಿ ಮೇಲ್, ವುಹಾನ್ ವೈರಾಲಜಿ ಲ್ಯಾಬ್ ನಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ ಎಂದು ಎಂದು ವರದಿ ಮಾಡಿತ್ತು.

ಬಾವಲಿಗಳ ಜೀನ್ ತೆಗೆದು ಸಂಶೋಧನೆ ನಡೆಸಲಾಗುತ್ತಿತ್ತು. ಈ ಸಂಶೋಧನೆಗೆ ಅಮೆರಿಕ ಹಣ ನೀಡುತ್ತಿತ್ತು. ವುಹಾನ್ ಲ್ಯಾಬ್ ವಿಜ್ಞಾನಿಗಳು 1 ಸಾವಿರ ಕಿ. ಮೀ ದೂರದಲ್ಲಿರುವ ಯುನಾನ್ ಗುಹೆಯಿಂದ ಬಾವಲಿಗಳನ್ನು ಹಿಡಿದು ಅಧ್ಯಯನಕ್ಕಾಗಿ ಸ್ವಾಬ್ ಸಂಗ್ರಹಿಸಿ ಹೊಸ ರೀತಿಯ ವೈರಸ್ ಸಂಶೋಧನೆ ನಡೆಸುತ್ತಿದ್ದರು. ಈ ವೇಳೆ ಪತ್ತೆಯಾದ ವೈರಸ್ಸನ್ನು ಹಂದಿಗಳಿಗೆ ಚುಚ್ಚಿ ಯಾವ ರೀತಿ ಸೋಂಕು ತಗಲುತ್ತದೆ ಎಂದು ಪರೀಕ್ಷಿಸಿದ್ದಾರೆ. ಇದನ್ನೂ ಓದಿ: ವುಹಾನ್‍ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್

china corona

ಈ ಅಧ್ಯಯನದ ಬಳಿಕ ಪ್ರಯೋಗಕ್ಕೆ ಬಳಸಲಾದ ಬಾವಲಿ ಮತ್ತು ಹಂದಿಗಳನ್ನು 10 ಕಿ.ಮೀ ದೂರದ ವೆಟ್ ಮಾರುಕಟ್ಟೆಗೆ ಮಾರಾಟ ಮಾಡಿದ್ದರಿಂದ ವೈರಸ್ ಹರಡಿದೆ. ಚೀನಾದ ಈ ಪ್ರಯೋಗಗಳಿಗೆ ಅಮೆರಿಕ ಸುಮಾರು 3.7 ದಶಲಕ್ಷ ಡಾಲರ್(28 ಕೋಟಿ ರೂ.) ಸಹಾಯ ಮಾಡಿದೆ ಎಂದು ವರದಿ ಉಲ್ಲೇಖಿಸಿತ್ತು.

2011 ರಿಂದ 2015ರ ಅಕ್ಟೋಬರ್ ವರೆಗೆ ಈ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಮೂರು ದಿನಗಳ ಹಂದಿಗಳ ಮೇಲೆ ಚುಚ್ಚಿ ಪ್ರಯೋಗ ನಡೆಸಲಾಗಿದೆ. ಪ್ರಯೋಗದ ಫಲಿತಾಂಶವನ್ನು 2017 ರಲ್ಲಿ “ಸಾರ್ಸ್ ಸಂಬಂಧಿಸಿದ ಕೊರೊನಾ ವೈರಸ್ಸಿನ ಮೂಲ ಪತ್ತೆ” ಪ್ರಬಂಧದಲ್ಲಿ ವಿವರಿಸಲಾಗಿದೆ.

china virus 1

ವಿಶೇಷ ಏನೆಂದರೆ ಕಳೆದ ವಾರ ವುಹಾನ್ ನಗರದಲ್ಲಿರುವ ಪ್ರಸಿದ್ಧ ವೈದ್ಯರೊಬ್ಬರು ವೆಟ್ ಮಾರುಕಟ್ಟೆಯಿಂದ ವೈರಸ್ ಹರಡಿದೆ ಎಂಬ ವಾದವನ್ನು ತಿರಸ್ಕರಿಸಿದ್ದರು. ವುಹಾನ್ ನಲ್ಲಿ ಪತ್ತೆಯಾದ ಮೊದಲ 41 ಕೊರೊನಾ ಸೋಂಕಿತರ ಜೊತೆ ವೆಟ್ ಮಾರುಕಟ್ಟೆಗೆ ಸಂಬಂಧವಿಲ್ಲದ 10 ಮಂದಿಯೂ ಇದ್ದರು. ವೆಟ್ ಮಾರುಕಟ್ಟೆಯೇ ಮೂಲ ಎಂದ ಮೇಲೆ ಎಲ್ಲರೂ ಇಲ್ಲಿಯವರೇ ಆಗಬೇಕಿತ್ತು. ಉಳಿದ 10 ಮಂದಿ ಬೇರೆಯವರು ಆಗಿದ್ದ ಕಾರಣ ವೈರಸ್ ಮೂಲ ವೆಟ್ ಮಾರುಕಟ್ಟೆ ಅಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು.

TAGGED:chinaCoronaCorona Viruskannada newsWuhanWuhan Labಅಮೆರಿಕಕೊರೊನಾ ವೈರಸ್ಚೀನಾಡೊನಾಲ್ಡ್ ಟ್ರಂಪ್ವುಹಾನ್ವೈರಸ್
Share This Article
Facebook Whatsapp Whatsapp Telegram

Cinema news

Raghavendra Chitravani 1
ರಾಘವೇಂದ್ರ ಚಿತ್ರವಾಣಿಗೆ 50ರ ಸಂಭ್ರಮ – ಸಿನಿ ಗಣ್ಯರಿಂದ ಲೋಗೋ ಲಾಂಚ್
Cinema Latest Sandalwood Top Stories
Gilli Nata 6
ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್ – ವೇದಿಕೆ ಏರಿದ ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
Cinema Districts Karnataka Latest Ramanagara States Top Stories
Anantha Padmanabha
ಹಿಟ್‌ ಡೈಲಾಗ್‌ ರೈಟರ್‌ ಪ್ರಶಾಂತ್‌ ರಾಜಪ್ಪ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ರಿವೀಲ್
Cinema Latest Sandalwood
rashmika vijay devarakonda geetha govindam
ರಶ್ಮಿಕಾ, ವಿಜಯ್‌ ಮದುವೆಗೆ ಬೆಂಗಳೂರಿನಿಂದ ಹೂ ಪೂರೈಕೆ
Bengaluru City Cinema Latest Main Post Sandalwood South cinema Top Stories

You Might Also Like

daily horoscope dina bhavishya
Astrology

ದಿನ ಭವಿಷ್ಯ 27-01-2026

Public TV
By Public TV
24 minutes ago
Raichur Mother Murder By Son copy
Crime

ಆಸ್ತಿಗಾಗಿ ತಾಯಿ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಪಾಪಿ ಮಗ

Public TV
By Public TV
37 minutes ago
Richa Ghosh
Cricket

ಕೊನೆಯಲ್ಲಿ ರೊಚ್ಚಿಗೆದ್ದ ರಿಚಾ, ಹೋರಾಡಿ ಸೋತ ಆರ್‌ಸಿಬಿ – ಮುಂಬೈಗೆ 15 ರನ್‌ ಜಯ

Public TV
By Public TV
9 hours ago
Yadagiri Fire Accident
Districts

ಆಕಸ್ಮಿಕ ಬೆಂಕಿಗೆ 10 ಲಕ್ಷ ರೂ. ಮೌಲ್ಯದ ಪೈಪ್‌ಗಳು ಸುಟ್ಟು ಭಸ್ಮ

Public TV
By Public TV
9 hours ago
Narendra Modi breaks protocol goes to airport to welcome UAE President Sheikh Mohamed bin Zayed Al Nahyan
Latest

ಮೋದಿ ಜೊತೆ ಮಾತುಕತೆ ನಡೆದ ಕೆಲ ದಿನಗಳಲ್ಲೇ ಪಾಕ್‌ ವಿಮಾನ ನಿಲ್ದಾಣ ನಿರ್ವಹಣೆಯಿಂದ ಹಿಂದೆ ಸರಿದ ಯುಎಇ

Public TV
By Public TV
9 hours ago
BMTC bus
Bengaluru City

ಟಿಕೆಟ್ ಇಲ್ಲದೇ ಬಸ್ಸಿನಲ್ಲಿ ಪ್ರಯಾಣಿಸಿದವರಿಗೆ ಬಿಸಿ – 6.34 ಲಕ್ಷ ದಂಡ ವಸೂಲಿ

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?