ವಿರುಷ್ಕಾ ಈ ಕಾಂಡೋಮ್‍ಗಳನ್ನೆ ಬಳಸಲಿ-ಪತಂಜಲಿ ಕಾಂಡೋಮ್ ತರ್ತಿರಾ: ರಾಮ್‍ದೇವ್‍ಗೆ ರಾಖಿ ಚಾಲೆಂಜ್

Public TV
1 Min Read
Rakhi Virushka Ramdev

ಮುಂಬೈ: ಬಾಲಿವುಡ್‍ನ ಹಾಟ್ ಬ್ಯೂಟಿ ರಾಖಿ ಸಾವಂತ್ ಇತ್ತೀಚೆಗೆ ವಿರಾಟ್ ಕೊಹ್ಲಿ ಮದುವೆ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದೀಗ ನವ ದಂಪತಿ ವಿರುಷ್ಕಾಗೆ ಮದುವೆಯ ವಿಶ್ ಮಾಡಿದ್ದು, ತಾವು ಜಾಹೀರಾತು ನೀಡಿರುವ ಕಾಂಡೋಮ್ ಗಳನ್ನು ಬಳಸಿ ಎಂದು ಉಚಿತ ಸಲಹೆಯನ್ನು ನೀಡಿದ್ದಾರೆ.

ಇಟಲಿಯಲ್ಲಿ ಯಾರಿಗೂ ಹೇಳದಂತೆ ಕೇವಲ ಆಪ್ತ ಬಂಧು ಬಳಗ ಸಮ್ಮುಖದಲ್ಲಿ ವಿರಾಟ್ ಮತ್ತು ಅನುಷ್ಕಾ ಶರ್ಮಾ ಮದುವೆಯಾಗಿದ್ರು. ಮದುವೆ ವಿಷಯ ತಿಳಿದ ಕೂಡಲೇ ರಾಖಿ ಸಾವಂತ್ ಫನ್ನಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಈಗ ಅದೇ ರೀತಿಯಾದ ಇನ್ನೊಂದು ವಿಡಿಯೋ ಮಾಡಿದ್ದು, ವಿರಾಟ್-ಅನುಷ್ಕಾ ಇಬ್ಬರಿಗೂ ಮದುವೆಯ ಶುಭಾಶಯಗಳು, ನನ್ನ ಜಾಹೀರಾತಿನ ಕಾಂಡೋಮ್ ಗಳನ್ನು ಬಳಿಸಿ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ವಿರಾಟ್-ಅನುಷ್ಕಾ ಮದ್ವೆ ವಿಷಯ ಕೇಳಿ ಕಣ್ಣೀರು ಹಾಕಿದ ರಾಖಿ-ವಿಡಿಯೋ ನೋಡಿ

ಇಷ್ಟಕ್ಕೆ ಸುಮ್ಮನಾಗದ ರಾಖಿ, ಬಾಬಾ ರಾಮ್‍ದೇವ್ ಅವ್ರಿಗೂ ಚಾಲೆಂಜ್ ಹಾಕಿದ್ದಾರೆ. ಇತ್ತೀಚೆಗೆ ಬಾಬಾ ರಾಮ್‍ದೇವ್ `ಪತಂಜಲಿ’ ಬ್ರಾಂಡ್ ಮೂಲಕ ಎಲ್ಲ ಉತ್ಪನ್ನಗಳನ್ನು ಉತ್ಪಾದಿಸುತ್ತಾ ತಮ್ಮ ಕಂಪೆನಿಯ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬಾಬಾ ರಾಮ್‍ದೇವ್ ಜೀ, ಜನರು ಪತಂಜಲಿ ಕಾಂಡೋಮ್ ಹೇಗಿರುತ್ತೆ ಎಂಬ ಕುತೂಹಲವನ್ನು ಹೊಂದಿದ್ದಾರೆ. ಆದಷ್ಟು ಬೇಗ ನಿಮ್ಮ ಕಂಪೆನಿಯಿಂದ ‘ಪತಂಜಲಿ ಕಾಂಡೋಮ್’ ತಯಾರಿಸಿ ಅಂತಾ ಚಾಲೆಂಜ್ ಹಾಕಿದ್ದಾರೆ.

https://www.instagram.com/p/BdCWsjflu-s/?hl=en&taken-by=rakhisawant2511

https://www.instagram.com/p/BdCc3oVlYUI/?hl=en&taken-by=rakhisawant2511

rakhi sawant 41

Virat Rakhi Sawant Anushka 2

Virat Rakhi Sawant Anushka

Virat Rakhi Sawant 2

Virat Rakhi Sawant

Share This Article
Leave a Comment

Leave a Reply

Your email address will not be published. Required fields are marked *