ನವದೆಹಲಿ: ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ರಾಜ್‌ಘಾಟ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ ಪ್ರಿಯಾಂಕಾ ವಾದ್ರಾ (Priyanka Gandhi) ತೆರಳಿದ್ದಾರೆ.
ವಿರೋಧ ಪಕ್ಷದ ಇತರ ನಾಯಕರು ಪ್ರತಿಭಟನೆಗಾಗಿ ರಾಜ್‌ಘಾಟ್‌ಗೆ (Rajghat) ತಲುಪಿದ ಸ್ವಲ್ಪ ಸಮಯದ ಬಳಿಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅಲ್ಲಿಂದ ಹೊರಟು ಹೋಗಿದ್ದಾರೆ. ಇದನ್ನೂ ಓದಿ: ಮಹಿಳಾ ಪೇದೆಯನ್ನ ತಳ್ಳಿ ರಾಹುಲ್ ಗಾಂಧಿ ಅಪಮಾನಕರ ನಡವಳಿಕೆ: ಬಿಜೆಪಿ ಆರೋಪ
ಮಂಗಳವಾರ (ಅ.6) ನಿಂದ ಚುನಾವಣಾ ಆಯೋಗದ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ನಂತರ ಆಕಾಶವಾಣಿ ಭವನದಲ್ಲಿ ಇಂಡಿಯಾ (INDIA) ಒಕ್ಕೂಟದ ಸಂಸದರು ಧರಣಿ ಕೂತಿದ್ದರು. ದೆಹಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕ್ರಮಕೈಗೊಂಡು ವಶಕ್ಕೆ ಪಡೆದುಕೊಂಡಿದ್ದರು. ಅದಾದ ಬಳಿಕ ಬುಧವಾರ (ಅ.7) ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿರಲಿಲ್ಲ. ಇದನ್ನು ವಿರೋಧಿಸಿ, `ಇಂಡಿಯಾ’ ಒಕ್ಕೂಟದ ನಾಯಕರು ಇಂದು (ಅ.8) ರಾಜ್‌ಘಾಟ್‌ನಲ್ಲಿ ಧರಣಿ ನಡೆಸಲು ಅಲ್ಲಿಗೆ ಆಗಮಿಸಿದ್ದರು.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ (Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟವು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖಾರ್ಗೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಿರಿಯ ವಿರೋಧ ಪಕ್ಷದ ನಾಯಕರು ಭಾರತೀಯ ಚುನಾವಣಾ ಆಯೋಗವು ಸರ್ಕಾರದ ಕೈಗೊಂಬೆಯಾಗಿದೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಚುನಾವಣಾ ಆಯೋಗದ ಪರ 42 ನಿವೃತ್ತ ನ್ಯಾಯಾಧೀಶರಿಂದ ಬಹಿರಂಗ ಪತ್ರ

