ಚಾಮರಾಜನಗರ: ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ (Darshan Dhruvanarayan) ಮತ್ತು ಡಾ.ಶ್ರೀನಿಧಿ ಮದುವೆ ಆರತಕ್ಷತೆ (Reception) ಹಾಗೂ ಬೀಗರ ಔತಣ (Dinner Party) ಇಂದು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನಡೆಯಿತು. ನೂತನ ದಂಪತಿಯ ಆರತಕ್ಷತೆ ಭರ್ಜರಿಯಾಗಿ ನಡೆದಿದ್ದು, ಸುಮಾರು 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ನವೆಂಬರ್ 26ರಂದು ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ `ಮಂತ್ರ ಮಾಂಗಲ್ಯ’ ಪದ್ಧತಿಯಲ್ಲಿ ದರ್ಶನ್ ಧ್ರುವನಾರಾಯಣ್ ಮತ್ತು ಶ್ರೀನಿಧಿ ವಿವಾಹವಾಗಿದ್ದರು. ರಾಮನಗರದ ಜಾನಪದ ಲೋಕದ ದೊಡ್ಡಮನೆಯಲ್ಲಿ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತರು ಭಾಗವಹಿಸಿದ್ದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ನವ ಜೋಡಿಗೆ ಶುಭ ಹಾರೈಸಿದ್ದರು. ಮಂತ್ರ ಮಾಂಗಲ್ಯದಡಿ ವಿವಾಹ ಆಗಿರೋದು ಭಾರೀ ಪ್ರಶಂಸೆಗೆ ಕಾರಣವಾಗಿತ್ತು. ಇದನ್ನೂ ಓದಿ: ಕೋರ್ಟ್ನಿಂದ ಆದೇಶ ತಂದರೂ ತೊಂದ್ರೆ ಕೊಡ್ತೀರಲ್ಲ, ನಮ್ಮ ನೋವು ನಮಗೆ ಮಾತ್ರ ಗೊತ್ತು – ಜೈಲಾಧಿಕಾರಿಗಳ ಮೇಲೆ ದರ್ಶನ್ ಅಸಮಾಧಾನ
ಆಡಂಬರದ ಮದುವೆಗೆ ಬದಲಾಗಿ ಸರಳ ಮಂತ್ರ ಮಾಂಗಲ್ಯ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದ ದರ್ಶನ್ ಧ್ರುವನಾರಾಯಣ್ ಅವರ ನಡೆ ಸಾಕಷ್ಟು ಗಮನ ಸೆಳೆದಿತ್ತು. ಕುವೆಂಪು ಅವರ ಸರಳತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಆಶಯದಂತೆ ವಿವಾಹ ನೆರವೇರಿಸಿದ್ದರು. ಇದೀಗ ಸ್ವಗ್ರಾಮ ಹೆಗ್ಗವಾಡಿಯಲ್ಲಿ ಆರತಕ್ಷತೆ ಹಾಗೂ ಬೀಗರ ಔತಣ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ರಾಜಕೀಯ ಗಣ್ಯರು, ಸಚಿವರು, ಶಾಸಕರು ಹಾಗೂ ಮುಖಂಡರು ಭಾಗವಹಿಸಿದ್ದರು. ಇದನ್ನೂ ಓದಿ: ಬಳ್ಳಾರಿ ಅಧಿದೇವತೆ ಕನಕದುರ್ಗಮ್ಮ ದೇವಿ ದೇವಸ್ಥಾನಕ್ಕೆ ವಿಜಯಲಕ್ಷ್ಮಿ ಭೇಟಿ – ದೇವಿಗೆ ಉಡಿ ತುಂಬಿ ಹರಕೆ ಸಲ್ಲಿಕೆ

