– ಸ್ಟಾಲಿನ್ ಭೇಟಿ ಬಳಿಕ ದೆಹಲಿಗೆ ಸೋನಿಯಾ ಗಾಂಧಿ ವಾಪಸ್
ಚೆನ್ನೈ: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ ಘೋಷಿಸಿದ ಬೆನ್ನಲ್ಲೇ, ಎಂ.ಕೆ ಸ್ಟಾಲಿನ್ ಮನವೊಲಿಸಲು ತಮಿಳುನಾಡಿಗೆ ತೆರಳಿರುವ ಕಾಂಗ್ರೆಸ್ ನಾಯಕರಿಗೆ ಈಗ ಪ್ರತಿಭಟನೆ ಬಿಸಿ ತಟ್ಟಿದೆ.
ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅವರ ನಿವಾಸದ ಮುಂದೆ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ‘ಗೋ ಬ್ಯಾಕ್ ಕಾಂಗ್ರೆಸ್’ (ಕಾಂಗ್ರೆಸ್ ವಾಪಸ್ ತೊಲಗಿ) ಎಂಬ ಬರಹವಿರುವ ಪೋಸ್ಟರ್ ಹಿಡಿದು ಆಕ್ರೋಶ ಹೊರಹಾಕಿದ್ದಾರೆ.
#WATCH | Chennai, Tamil Nadu: Outside visuals from the DMK chief MK Stalin’s residence, where the INDIA bloc delegation led by Congress chief Mallikarjun Kharge and CPP chairperson Sonia Gandhi will arrive shortly to meet DMK chief MK Stalin. https://t.co/cveuGEK6Hu
— ANI (@ANI) November 29, 2026
ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಡಿಎಂಕೆಯ ನಿಲುವಿನ ಬಗ್ಗೆ ಚರ್ಚಿಸಲು ಇಂಡಿಯಾ ಮೈತ್ರಿಕೂಟದ ನಾಯಕರು ಸ್ಟಾಲಿನ್ ಅವರನ್ನು ಭೇಟಿಯಾಗುವ ಮುನ್ನ ಈ ಪ್ರತಿಭಟನೆ ನಡೆದಿದೆ.
ಎಂ.ಕೆ. ಸ್ಟಾಲಿನ್ ನಿವಾಸಕ್ಕೆ ಬಿಗಿ ಭದ್ರತೆ
ಇನ್ನೂ ಇಂಡಿಯಾ ಮೈತ್ರಿಕೂಟದ ನಾಯಕರು ದೆಹಲಿಯಿಂದ ಚೆನ್ನೈಗೆ ಭೇಟಿ ನೀಡುವ ನಿರೀಕ್ಷೆ ಹಿನ್ನೆಲೆ, ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಚೆನ್ನೈನ ತೇನಾಂಪೇಟೆಯಲ್ಲಿರುವ ನಿವಾಸದ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
… INDIA leaders in Chennai …
Congress Parliamentary Party chairperson Mrs Sonia Gandhi ji, Congress President & LoP Rajya Sabha Mr Mallikarjun @kharge ji, Leader of President Mr @RahulGandhi ji also present … https://t.co/LXBB2aUld6
— Supriya Bhardwaj (@Supriya23bh) November 29, 2026
ಸ್ಟಾಲಿನ್ ಭೇಟಿ ಬಳಿಕ ದೆಹಲಿಗೆ ಸೋನಿಯಾ ವಾಪಸ್
ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು ಚೆನ್ನೈನಲ್ಲಿ ಭೇಟಿಯಾದ ಬಳಿಕ ಸೋನಿಯಾ ಗಾಂಧಿ ಅವರು ಸಂಜೆ 4.30ಕ್ಕೆ ವಿಶೇಷ ವಿಮಾನದ ಮೂಲಕ ದೆಹಲಿಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಇಂಡಿಯಾ ಮೈತ್ರಿಕೂಟದ ಇತರ ನಾಯಕರು ಎನ್ಸಿಪಿ (ಎಸ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಲು ಮುಂಬೈಗೆ ತೆರಳಲಿದ್ದಾರೆ ಎಂದು ಮೂಲಗಳು ಹೇಳಿವೆ.
#WATCH | Chennai, Tamil Nadu: DMK MP T Siva arrives at the residence of DMK chief MK Stalin.
The INDIA bloc delegation led by Congress chief Mallikarjun Kharge and CPP chairperson Sonia Gandhi will meet DMK chief MK Stalin. https://t.co/BC1AJBng4e
— ANI (@ANI) November 29, 2026
ಏರ್ಪೋರ್ಟ್ನಲ್ಲೇ ಕಾದು ಕುಳಿತಿದ್ದ ಎನ್ಡಿಎ ನಾಯಕರು, ಸದ್ಯ ಉದಯನಿಧಿ ಸ್ಟಾಲಿನ್ ಅವರ ನಿವಾಸತ್ತ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಯೇ ಮಾತುಕತೆ ನಡೆಸುವ ಸಾಧ್ಯತೆಗಳಿವೆ.
