ಪಾಟ್ನಾ: ಬಿಹಾರದ (Bihar) ಮುಂಗೇರ್ ಜಿಲ್ಲೆಯ ಭತ್ತದ ಗದ್ದೆಯಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ 30 ವರ್ಷದ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಆಕೆಯ ಜೊತೆ ಸಂಬಂಧ ಹೊಂದಿದ್ದ ವ್ಯಕ್ತಿಯೇ ಆಕೆಯನ್ನು ಕೊಂದಿದ್ದಾರೆ ಎಂದು ಕುಟುಂಬದವರು ಶಂಕಿಸಿದ್ದಾರೆ.
ಮೃತ ಮಹಿಳೆಯನ್ನು ಉದಯ್ ಕುಮಾರ್ ಅವರ ಪತ್ನಿ ಮತ್ತು ಮುಂಗೇರ್ ನಿವಾಸಿ ನೀಲು ಕುಮಾರಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸ್ನೇಹಿತನನ್ನೇ ಪ್ರೀತಿಸುವಂತೆ ರೌಡಿಶೀಟರ್ ಧಮ್ಕಿ, ಹಲ್ಲೆ ಆರೋಪ; ಮನನೊಂದು ಅಪ್ರಾಪ್ತೆ ಆತ್ಮಹತ್ಯೆ
ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಕುಮಾರ್ ದೇವೇಂದ್ರ ಅವರ ಪ್ರಕಾರ, ಶನಿವಾರ ಬೆಳಗ್ಗೆ 10 ರಿಂದ 10:30 ರ ನಡುವೆ ಭತ್ತದ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆಯಾದ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿತು.
ಮಹಿಳೆ ಬಿಹಾರದ ತಿಲಕ್ಪುರದ ನಿವಾಸಿ ಅನಕೇಶ್ ಕುಮಾರ್ ಎಂಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಈ ಬಗ್ಗೆ ಆಕೆಯ ಪತಿಗೆ ತಿಳಿದಿತ್ತು ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ಈ ಸಂಬಂಧದ ಬಗ್ಗೆ ದಂಪತಿ ನಡುವೆ ಜಗಳ ಆಗಿತ್ತು ಎನ್ನಲಾಗಿದೆ. ಈ ವಿಷಯದ ಬಗ್ಗೆ ಸುಮಾರು ಆರು ತಿಂಗಳಿನಿಂದ ತನಗೆ ತಿಳಿದಿತ್ತು ಆದರೆ ಘಟನೆ ನಡೆದ ಸಮಯದಲ್ಲಿ ಅವರು ದೂರವಿದ್ದರು ಎಂದು ಉದಯ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಇ-ರಿಕ್ಷಾ ಚಾರ್ಜಿಂಗ್ ಪಾಯಿಂಟ್ನಿಂದ ಹೊತ್ತಿ ಉರಿದ ಕಟ್ಟಡ – ನಾಲ್ವರು ಸಾವು, ಇಬ್ಬರಿಗೆ ಗಾಯ
ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ತಂಡವು ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಗೇರ್ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ.
