ಬೀದರ್: ಗುರುನಾನಕ್ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ 10 ಕಿಲೋಮೀಟರ್ ಬೃಹತ್ ಮ್ಯಾರಥಾನ್ಗೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್(Saina Nehwal) ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.
ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈನಾ ನೆಹ್ವಾಲ್ ಮ್ಯಾರಥಾನ್ಗೆ(Marathon) ಹಸಿರು ನಿಶಾನೆ ತೋರಿಸಿದರು. ಚಾಲನೆ ನೀಡುವ ಮುನ್ನ ವೇದಿಕೆಯಲ್ಲಿ ಹಿಂದಿ ಹಾಡುಗಳಿಗೆ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿದರು. ನೆಚ್ಚಿನ ಕ್ರೀಡಾತಾರೆಯನ್ನು ಕಂಡ ವಿದ್ಯಾರ್ಥಿಗಳು ಸೈನಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ನೆಹರು ಕ್ರೀಡಾಂಗಣದಿಂದ ಆರಂಭವಾದ ಈ 10 ಕಿ.ಮೀ. ಓಟವು ಕನ್ನಡಾಂಬೆ ವೃತ್ತ, ಸಿದ್ಧಾರ್ಥ ಕಾಲೇಜು, ಡಿಸಿ ನಿವಾಸ, ಚೌಬಾರ, ನಯಾಕಮಾನ್ ಹಾಗೂ ಮೈಲೂರು ಕ್ರಾಸ್ ಮಾರ್ಗವಾಗಿ ಸಾಗಿ ಗುರುನಾನಕ್ ಕಾಲೇಜಿನ ಆವರಣದಲ್ಲಿ ಮುಕ್ತಾಯಗೊಂಡಿತು. ಮ್ಯಾರಥಾನ್ನಲ್ಲಿ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
