– ಪ್ರತಿಭಟನೆ ಹಿಂಪಡೆಯಲು ಒಪ್ಪದ ʻಆಶಾʼಗಳು – ಲಿಖಿತ ಆದೇಶಕ್ಕೆ ಪಟ್ಟು
ಬೆಂಗಳೂರು: 12 ದಿನಗಳ ಈ ಹೋರಾಟದಲ್ಲಿ ʻಬಂಡೆʼಯನ್ನ ಕರಗುವಂತೆ ಮಾಡಿದ್ದೇವೆ. ಆದ್ರೆ ಸರ್ಕಾರದ ಹೊಣೆಗಾರಿಕೆ ತುಂಬಾ ಇದೆ. ಬರವಣಿಗೆ ರೂಪದಲ್ಲಿ ಆದೇಶ ಪ್ರತಿ ನಮ್ಮ ಕೈಗೆ ಬರೋವರೆಗೆ ಹೋರಾಟ ನಿಲ್ಲಿಸಬೇಕಾಗಿಲ್ಲ ಎಂದು ಆಶಾ ಕಾರ್ಯರ್ತೆಯರ ಸಂಘಟನೆ ಕಾರ್ಯದರ್ಶಿ ನಾಗಲಕ್ಷ್ಮಿ (Nagalakshmi) ಹೇಳಿದರು.
ಸಿಎಂ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ ಬಳಿಕ ಪ್ರತಿಭಟನಾ (ASHA Workers Protest) ಸ್ಥಳದಲ್ಲಿ ʻಆಶಾʼಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ 12 ದಿನಗಳಿಂದ ಹೋರಾಟ ನಡೆಯುತ್ತಿದೆ. ಅಭೂತಪೂರ್ವ ಹೋರಾಟ ನಡೆಸಿದ್ದೇವೆ. ಈ ಹೋರಾಟದಲ್ಲಿ ಭಾಗಿಯಾಗಿರುವ ಎಲ್ಲ ಆಶಾಗಳಿಗೆ ಧನ್ಯವಾದ ತಿಳಿಸುತ್ತೇನೆ. ಇವತ್ತು ಬೆಳಗ್ಗೆಯಿಂದ 2-3 ಸುತ್ತಿನ ಸಭೆಗಳನ್ನ ನಡೆಸಿದ್ದೇವೆ. ರಾಜ್ಯ ಸರ್ಕಾರ ವತಿಯಿಂದ ಜನವರಿಯಿಂದ 2 ಸಾವಿರ ಹೆಚ್ಚಳ ಮಾಡಿದ್ದಾರೆ. ಅದು ಜನವರಿ 1 ರಿಂದ ಬರುವ ಗೌರವ ಧನದಲ್ಲಿ ಬರಲಿದೆ. ಮುಂದಿನ ಬಜೆಟ್ ನಲ್ಲಿ 1 ಸಾವಿರ ರೂ. ಹೆಚ್ಚಳ ಮಾಡ್ತಾರೆ. ಕೆಲವರಿಗೆ ಟೀಮ್ ಬೇಸ್ ಇನ್ಸೆಂಟಿವ್ ಕೆಲವರಿಗೆ ಬರ್ತೀರಿಲ್ಲ. ಈಗ ಎಲ್ಲರಿಗೂ ಬರೋ ರೀತಿ ಆದೇಶ ಮಾಡ್ತಾರೆ. ಒಟ್ಟಾರೆ 11,500 ರೂ. ಬರುತ್ತೆ ಎಂದು ವಿವರಿಸಿದರು.
ಗೌರವಾನ್ವಿತ ಮುಖ್ಯಮಂತ್ರಿಗಳಿಂದ ಲಿಖಿತ ಆದೇಶವನ್ನ ಕೇಳಿದ್ವಿ. ಆರೋಗ್ಯ ಇಲಾಖೆಯಿಂದ ಲಿಖಿತ ಆದೇಶ ಕೂಡ ಸದ್ಯದಲ್ಲೇ ಬರಲಿದೆ. 12 ದಿನಗಳ ಹೋರಾಟದಲ್ಲಿ ಬಂಡೆಯನ್ನ ಕರಗುವಂತೆ ಮಾಡಿದ್ದೇವೆ. ನಮ್ಮ ಹೋರಾಟ ಸಾಮಾನ್ಯವಾದದ್ದಲ್ಲ. ನಿಮಗೆ ಸರ್ಕಾರದ ಈ ನಿರ್ಧಾರ ತೃಪ್ತಿ ಇಲ್ಲ ಅಂದ್ರೆ ಹೋರಾಟ ಮುಂದುವರೆಸೋಣ, ತೀರ್ಮಾನ ಮಾಡಬೇಕಾಗಿರೋದು ಆಶಾ ಗಳು ಹೋರಾಟ ಮಾಡೋಣವಾ? ಅಂತಾ ಕೇಳಿದ್ರು.
ಬಳಿಕ ಸರ್ಕಾರಕ್ಕೆ ಇದರ ಬಗ್ಗೆ ಹೊಣೆಗಾರಿಕೆಯಿದೆ. ಆದ್ದರಿಂದ ಲಿಖಿತ ಆದೇಶ ಪ್ರತಿ ನಮ್ಮ ಕೈಸೇರೋವರೆಗೂ ನಾವು ಇಲ್ಲಿಂದ ಹೋಗಬೇಕಿಲ್ಲ ಎಂದು ಹೇಳಿದರು.

