ರಾಯ್ಪುರ: ಬಲೋದಾ ಬಜಾರ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ರಾಯ್ಪುರಕ್ಕೆ (Raipur) ಹಿಂದಿರುಗುತ್ತಿದ್ದ ವೇಳೆ ಛತ್ತೀಸ್ಗಢದ ರಾಜ್ಯಸಭಾ ಸಂಸದೆ (BJP Rajya Sabha MP) ಲಕ್ಷ್ಮೀ ವರ್ಮಾ (Laxmi Verma) ಅವರ ಕಾರು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಅವರ ಕೈ ಮೂಳೆ ಮುರಿತಗೊಂಡಿದ್ದು, ಅವರನ್ನು ರಾಯ್ಪುರದ ಏಮ್ಸ್ ಆಸ್ಪತ್ರೆಗೆ (AIIMS Hospital) ದಾಖಲಿಸಲಾಗಿದೆ.
ಖರೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗೋಲಿ ಸಮೀಪ ಈ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಕಾರಿನಲ್ಲಿ ಲಕ್ಷ್ಮೀ ವರ್ಮಾ ಅವರೊಂದಿಗೆ ಚಾಲಕ, ವೈಯಕ್ತಿಕ ಭದ್ರತಾ ಸಿಬ್ಬಂದಿ (ಪಿಎಸ್ಒ) ಹಾಗೂ ವೈಯಕ್ತಿಕ ಸಹಾಯಕ (ಪಿಎ) ಇದ್ದರು. ಗಾಯಗೊಂಡ ನಾಲ್ವರನ್ನು ರಾಯ್ಪುರದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜೆದ್ದಾ, ಮದೀನಾಗೆ ವಿಮಾನಯಾನ ಪುನಾರಂಭಿಸಿದ ಇಂಡಿಗೋ – ರಿಯಾದ್, ದಮ್ಮಾಮ್ಗೆ ವಿಮಾನ ಸೇವೆ ಡಿ.7ರ ವರೆಗೆ ಸ್ಥಗಿತ
ಸಂಸದೆ ಲಕ್ಷ್ಮೀ ವರ್ಮಾ ಅವರ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯಸಭಾ ಸಂಸದೆ ಶ್ರೀಮತಿ ಲಕ್ಷ್ಮೀ ವರ್ಮಾ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸುದ್ದಿ ತಿಳಿದು ಬಂದಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಭಗವಾನ್ ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಳ್ಳರು ಬಂದವ್ರೆ ಅಂತಾ ಸಿಎಂ ಡಿಕೆಶಿನಾ ಹಳ್ಳಿಯೊಂದರ ಜನ ಮಧ್ಯರಾತ್ರಿ ಓಡಿಸಿದ್ದಾರೆ: ಹೆಚ್ಡಿಕೆ ಟಾಂಗ್
ಯಾರು ಈ ಲಕ್ಷ್ಮೀ ವರ್ಮಾ?
ಲಕ್ಷ್ಮೀ ವರ್ಮಾ ಅವರು ಛತ್ತೀಸ್ಗಢದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದೆಯಾಗಿದ್ದಾರೆ. ಈ ಹಿಂದೆ ಛತ್ತೀಸ್ಗಢ ಬಿಜೆಪಿ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಛತ್ತೀಸ್ಗಢ ರಾಜ್ಯ ಮಹಿಳಾ ಆಯೋಗದ ಮಾಜಿ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಪ್ರಜಾಪ್ರಭುತ್ವಕ್ಕೆ ಅಪಾಯ; ಮೋದಿ ಅಧಿಕಾರದ ಸಂಪೂರ್ಣ ನಿಯಂತ್ರಣ ಬಯಸುತ್ತಿದ್ದಾರೆ: ಖರ್ಗೆ ವಾಗ್ದಾಳಿ
ರಾಯ್ಪುರ ಜಿಲ್ಲಾ ಪಂಚಾಯತ್ನ ಮಾಜಿ ಅಧ್ಯಕ್ಷೆಯಾಗಿರುವ ಅವರು, ಕೇಂದ್ರ ಉಕ್ಕು ಸಚಿವಾಲಯದ ಅಧೀನದಲ್ಲಿರುವ ಫೆರೋ ಸ್ಕ್ರ್ಯಾಪ್ ನಿಗಮ್ ಲಿಮಿಟೆಡ್ ಸಂಸ್ಥೆಯ ಸ್ವತಂತ್ರ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಇದೀಗ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಗೂಡ್ಸ್ ವಾಹನ, ಬೈಕ್ ಮಧ್ಯೆ ಭೀಕರ ಅಪಘಾತ; ತಂದೆ – ಮಗಳು ದುರ್ಮರಣ
