– ನಾನು ಸಿಎಂ ಡಿಕೆಶಿ, ಜಮೀರ್ ಪುತ್ರ ಝೈದ್ ಖಾನ್ನ ನಿಂದಿಸಿಲ್ಲ ಎಂದ ನಟ
ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರ ಮ್ಯಾನೇಜರ್ ನಾಗರಾಜ್ಗೆ ಬೈದಿದ್ದು ನಿಜ ಎಂದು ಆರ್ಆರ್ ನಗರ ಪೊಲೀಸರ ವಿಚಾರಣೆ ವೇಳೆ ನಟ ಧನ್ವೀರ್ (Dhanveer Gowda) ತಪ್ಪೊಪ್ಪಿಕೊಂಡಿದ್ದಾರೆ.
ನಾನು ಸಿಎಂ ಡಿಕೆಶಿ ಹಾಗೂ ಸಚಿವ ಜಮೀರ್ ಪುತ್ರ ಝೈದ್ ಖಾನ್ ಅವರ ಬಗ್ಗೆ ಮಾತನಾಡಿಲ್ಲ. ಇದೆಲ್ಲವೂ ಎಐ ಕ್ರಿಯೇಟೆಡ್ ವೀಡಿಯೊ. ನಾಗರಾಜ್ನ ಬೈದಿದ್ದು ನಿಜ, ಕ್ಷಮೆಯಿರಲಿ ಅಂತಾ ನಟ ಧನ್ವೀರ್ ಆರ್ಆರ್ ನಗರ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ದರ್ಶನ್ ಬೆನ್ನುನೋವು ಚಿಕಿತ್ಸೆಗೆ ಕೋರ್ಟ್ ಅಸ್ತು – ಇಂದೇ ಆಸ್ಪತ್ರೆಗೆ ಶಿಫ್ಟ್?
ನಾನು ಕರೆ ಮಾಡಿ ನಾಗರಾಜ್ಗೆ ಬೈದಿದ್ದು ನಿಜ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರೋದು ಸತ್ಯ. ನನ್ನದು ತಪ್ಪಾಗಿದೆ ಸಾರ್, ಕ್ಷಮಿಸಿಬಿಡಿ ಎಂದ ಧನ್ವೀರ್ ಪೊಲೀಸರ ಮುಂದೆ ಹೇಳಿದ್ದಾರೆ. ವಿಜಯಲಕ್ಷ್ಮಿ ಹಾಗೂ ನಾಗರಾಜ್ ಮನೆಗೆ ಬಂದು ಗಲಾಟೆ ಮಾಡಿದ್ರು. ನಮ್ಮ ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು. ಆ ಕೋಪದಲ್ಲಿ ಮ್ಯಾನೇಜರ್ ನಾಗರಾಜ್ಗೆ ಬೈದಿದ್ದೇನೆ ಎಂದು ತಿಳಿಸಿದ್ದಾರೆ.
ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿದೆ. ನಾನು ಲೆಕ್ಕ ಕೊಡಲು ರೆಡಿ ಇದ್ದೇನೆ. ಅವರೇ ಬರ್ತಾ ಇಲ್ಲ. ನನಗೆ ಕೆಟ್ಟ ಹೆಸರು ತರಬೇಕೆಂದು ಈ ರೀತಿ ಆಡಿಯೋ ಕ್ರಿಯೇಟ್ ಮಾಡಿದ್ದಾರೆ ಎಂದು ಧನ್ವೀರ್ ಸ್ಪಷ್ಟಪಡಿಸಿದ್ದಾರೆ. ಆರ್.ಆರ್. ನಗರ ಠಾಣೆ ಇನ್ಸ್ಪೆಪೆಕ್ಟರ್ ಕುಮಾರಸ್ವಾಮಿ ವಿಚಾರಣೆ ನಡೆಸಿದರು. ಇದನ್ನೂ ಓದಿ: ರಾತ್ರೋರಾತ್ರಿ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡ ಧನ್ವೀರ್ – ಎದುರಾಗುತ್ತಾ ಸಂಕಷ್ಟ?
ಎಫ್ಐಆರ್ ರದ್ದು ಮಾಡಲು ಧನ್ವೀರ್ ಹೈಕೋರ್ಟ್ ಮೋರೆ ಹೋಗಿದ್ದರು. ಬಳಿಕ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.
