ಫಿಟ್ನೆಸ್ಗೆ ಹೆಚ್ಚು ಆದ್ಯತೆ ಕೊಡುವ ನಟಿಯರಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಒಬ್ಬರು. ಆಗಾಗ ಇನ್ಸ್ಟಾಗ್ರಾಂನಲ್ಲಿ ವರ್ಕೌಟ್ ಫೋಟೋ ಪೋಸ್ಟ್ ಮಾಡುವ ರಶ್ಮಿಕಾ, ಮದುವೆಯ ಬಳಿಕ ಕುಟುಂಬದ ಜೊತೆಗಿನ ಫೋಟೋಗಳನ್ನೇ ಹೆಚ್ಚು ಪೋಸ್ಟ್ ಮಾಡುತ್ತಿದ್ದರು. ಇದೀಗ ಬಹಳ ಗ್ಯಾಪ್ ಬಳಿಕ ವ್ಯಾಯಾಮದ ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ. ಇದ್ರಿಂದ ರಶ್ಮಿಕಾ ಜಿಮ್ಗೆ ಹೋಗುವುದಿಲ್ಲ, ಮನೆಯಲ್ಲೇ ವರ್ಕೌಟ್ ಮಾಡ್ತಾರೆ ಅನ್ನೋದು ತಿಳಿದು ಬಂದಿದೆ.
ಮನೆಯಲ್ಲಿ ಫಿಟ್ನೆಸ್ಗಾಗಿ ಕಸರತ್ತು ಮಾಡುವ ರಶ್ಮಿಕಾಗೆ ವರ್ಕೌಟ್ ಪಾರ್ಟ್ನರ್ ಯಾರಿರಬಹುದು ಅನ್ನೋ ಕುತೂಹಲ ಮೂಡಬಹುದು. ಏಕೆಂದರೆ ಮನೆಯಲ್ಲೇ ವ್ಯಾಯಾಮ ಅಂದಾಗ ಪತಿ ವಿಜಯ್ ದೇವರಕೊಂಡ ಸಾಥ್ ಕೊಡಬಹುದು ಅಥವಾ ಪತಿಯ ಸಹೋದರ ಕೂಡ ಜೊತೆಯಾಗಬಹುದು ಅನ್ನೋ ಉತ್ತರ ಬರುವುದು ಸಹಜ. ಆದರೆ ರಶ್ಮಿಕಾಗೆ ವರ್ಕೌಟ್ ಪಾರ್ಟ್ನರ್ ಅವರ ಸಾಕುನಾಯಿ ಅನ್ನೋದು ತಿಳಿದುಬಂದಿದೆ.
View this post on Instagram
ಇದೀಗ ಮನೆಯಲ್ಲೇ ವರ್ಕೌಟ್ ಮಾಡುವ ಫೋಟೋಗಳನ್ನ ರಶ್ಮಿಕಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದು ಈ ಸಮಯದಲ್ಲಿ ಅವರ ನಾಯಿ ಜೊತೆಯಲ್ಲಿರೋದು ಕಂಡುಬಂದಿದೆ. ರಶ್ಮಿಕಾ ವ್ಯಾಯಾಮ ಮಾಡುತ್ತಲೇ ಸಾಕುನಾಯಿಯನ್ನು ಮುದ್ದಿಸುತ್ತಾರೆ. ರಶ್ಮಿಕಾ ಪೋಸ್ಟ್ ಮಾಡಿರುವ ಫೋಟೋಗಳಿಗೆ ಅವರು ಬರಹವನ್ನೂ ಕೊಟ್ಟಿದ್ದು ʻಇದು ರಶ್ಮಿಕಾ ಟೀಮ್, ಕೆಲಸ ಮುಗಿಸಿ ಅವರ ಮನೆಗೆ ಹೋದ್ರೆ ಅವರು ಇದೇ ಕೆಲಸ ಮಾಡ್ತಿರ್ತಾರೆʼ ಎಂದು ಸಹಜ ರೀತಿಯಲ್ಲಿ ಕ್ಯಾಷ್ಶನ್ ನೀಡಿದ್ದಾರೆ. ವರ್ಕೌಟ್ ಪಾರ್ಟ್ನರ್ ಹೊರತಾಗಿ ರಶ್ಮಿಕಾ ಜೊತೆಯಲ್ಲಿ ಪ್ರೀತಿಯ ನಾಯಿ ಮಾತ್ರವೇ ಇರುವುದು ದೃಶ್ಯದಲ್ಲಿ ಕಂಡುಬಂದಿದೆ.
