ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯ ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ಘೋಷಿಸಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಮೊದಲ ಬಾರಿಗೆ ಪುರುಷ ಸರ್ಕಾರಿ ನೌಕರರಿಗೆ ಪಿತೃತ್ವ ರಜೆ ಸೌಲಭ್ಯವನ್ನು ಜಾರಿಗೆ ತರಲಾಗಿದೆ.
ಹೊಸ ನಿಯಮದ ಪ್ರಕಾರ, ವಿವಾಹಿತ ಪುರುಷ ಸರ್ಕಾರಿ ನೌಕರರು ಮಗುವಿನ ಜನನದ ನಿರೀಕ್ಷಿತ ದಿನಾಂಕಕ್ಕೆ 15 ದಿನಗಳ ಮೊದಲು ಅಥವಾ ಮಗು ಜನಿಸಿದ ಆರು ತಿಂಗಳೊಳಗೆ 15 ದಿನಗಳ ರಜೆಯನ್ನು ಪಡೆಯಬಹುದು ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರಗೆ ಕ್ಲೀನ್ ಚಿಟ್ ಹೇಗೆ ಕೊಟ್ರಿ: ಹೆಚ್ಡಿಕೆ ಪ್ರಶ್ನೆ
ಮಗುವಿನ ಜನನದ ಸುತ್ತಮುತ್ತಲಿನ ಸಮಯ ತಾಯಿ ಮತ್ತು ನವಜಾತ ಶಿಶುವಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಸಂದರ್ಭದಲ್ಲಿ ತಾಯಿಗೆ ದೈಹಿಕ ಮತ್ತು ಭಾವನಾತ್ಮಕ ಬೆಂಬಲ ನೀಡುವುದರ ಜೊತೆಗೆ ಮಗುವಿನ ಆರೈಕೆಯಲ್ಲಿಯೂ ತಂದೆಯ ಉಪಸ್ಥಿತಿ ಅಗತ್ಯವಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರು ಕೇಂದ್ರದ ಮೇಲೂ ಒತ್ತಡ ಹೇರಬೇಕು.. ರಾಜ್ಯ ಸರ್ಕಾರ ಮಾತ್ರ ಹೊಣೆ ಅಲ್ಲ: ಸಿಎಂ
ತಮಿಳುನಾಡಿನಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಈಗಾಗಲೇ 365 ದಿನಗಳ ಹೆರಿಗೆ ರಜೆ ಸೌಲಭ್ಯವಿದೆ. ಆದರೆ ಪುರುಷ ಸರ್ಕಾರಿ ನೌಕರರು ಕೂಡ ಪಿತೃತ್ವ ರಜೆ ನೀಡುವಂತೆ ಹಲವು ದಿನಗಳಿಂದ ಮನವಿ ಸಲ್ಲಿಸುತ್ತಿದ್ದರು. ಪುರುಷ ನೌಕರರ ಮನವಿಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಇದನ್ನೂ ಓದಿ: ನಿರ್ಜಲೀಕರಣ ಸಮಸ್ಯೆ – ಶರದ್ ಪವಾರ್ ಆಸ್ಪತ್ರೆಗೆ ದಾಖಲು
