ಚಿಕ್ಕಮಗಳೂರು: ಶೃಂಗೇರಿ (Sringeri) ಶಾರದಾ ಪೀಠಕ್ಕೆ (Sharadamba Temple) ಬಹುಭಾಷಾ ನಟಿ ತ್ರಿಷಾ ಕೃಷ್ಣನ್ (Trisha Krishnan) ಅವರು ಭೇಟಿ ನೀಡಿ, ದೇವಿಯ ದರ್ಶನ ಪಡೆದಿದ್ದಾರೆ.
ದೀಪಾಲಂಕೃತ ರಾಜಗೋಪುರದ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ತಿಳಿ ಗುಲಾಬಿ ಸಲ್ವಾರ್ನಲ್ಲಿ ಕ್ಲಿಕ್ಕಿಸಿಕೊಂಡ ಈ ಫೋಟೋವನ್ನು ಇನ್ಸ್ಟಾಲ್ಲಿ ಹಂಚಿಕೊಂಡಿದ್ದು, ʻಡಿವೈನ್ʼ ಎಂಬ ಒಂದೇ ಒಂದು ಪದದ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮ್ಯೂಸಿಕ್ ತೆಕ್ಕೆಗೆ ‘ಸಮುದ್ರ ಮಂಥನ’ ಸಿನಿಮಾ
ಫೋಟೋಗಳನ್ನು ಅಜನೀಶ್ ಲೋಕನಾಥ್ ಸಂಗೀತದೊಂದಿಗೆ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ನಟಿ ತ್ರಿಷಾ ಅವರ ಸರಳ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಪುಷ್ಪ 2 ಹಿಂದಿಕ್ಕಿ ಗಳಿಕೆಯಲ್ಲಿ ಮತ್ತೊಂದು ದಾಖಲೆ ಬರೆದ ‘ರಾಮಾಯಣ’
