ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಸ್ಟಿಂಗ್ ಪ್ರಕರಣಕ್ಕೆ (Sting Operation) ಸಂಬಂಧಿಸಿದಂತೆ ಕೊನೆಗೂ ಕೃಪಾ ಆಳ್ವಾ (Kripa Alva) ಸೈಬರ್ ಕ್ರೈಂ ಪೊಲೀಸರಿಗೆ ಮೊಬೈಲ್ ಪೋನ್ ಒಪ್ಪಿಸಿದ್ದಾರೆಂದು ತಿಳಿದು ಬಂದಿದೆ.
ಸೈಬರ್ ಕ್ರೈಂ ಪೊಲೀಸರು ಕೇಳಿದ್ದ ಪೋನ್ ಕೃಪಾ ಆಳ್ವಾ ತನಿಖಾಧಿಕಾರಿಗೆ ಕೈಗೆ ಕೊಟ್ಟಿದ್ದಾರೆ. ಕೃಪಾ ಆಳ್ವಾ ಸ್ಟಿಂಗ್ ವೀಡಿಯೋದಲ್ಲಿದ್ದ ಅಧಿಕೃತ ಮೊಬೈಲ್ ಪೋನ್ ಸೀಜ್ ಮಾಡಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಕೃಪಾ ಆಳ್ವಾ ಕೊಟ್ಟಿರುವ ಮೊಬೈಲ್ನಲ್ಲಿ ಒಂದಷ್ಟು ವೀಡಿಯೋಗಳು ಡಿಲೀಟ್ ಆಗಿರುವ ಅನುಮಾನದ ಹಿನ್ನೆಲೆ ಕೃಪಾ ಆಳ್ವಾ ಕೊಟ್ಟ ಪೋನ್ ಎಫ್ಎಸ್ಎಲ್ಗೆ ಕಳುಹಿಸಲು ಸೈಬರ್ ಕ್ರೈಂ ಪೊಲೀಸರು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಇದನ್ನೂ ಓದಿ: ಡಿಸೆಂಬರ್ ಒಳಗೆ ಬೆಂಗಳೂರು ರಸ್ತೆಗಳ ಗುಂಡಿ ಮುಚ್ಚಲು ಸರ್ಕಾರ ಡೆಡ್ಲೈನ್
ಪ್ರಕರಣದ ತನಿಖೆಗೆ ಮೂರು ಬಾರಿ ಕೃಪಾ ಆಳ್ವಾ ವಿಚಾರಣೆಗೆ ಬಂದಿದ್ದರು. ಆರಂಭದಲ್ಲಿ ಕೃಪಾ ಆಳ್ವಾ ಮೊಬೈಲ್ ಕೊಡಲು ಹಲವು ಕಾರಣ ನೀಡಿ ಹಿಂದೇಟು ಹಾಕುತ್ತಿದ್ದರು. ಕೃಪಾ ಆಳ್ವಾ ಕೃತ್ಯಕ್ಕೆಗೆ ಬಳಸಿದ್ದಾರೆ ಎನ್ನಲಾದ ಮೊಬೈಲ್ ಕೊಡಲು ಸೈಬರ್ ಕ್ರೈಂ ಪೊಲೀಸರು ಸೂಚನೆ ಕೊಟ್ಟಿದ್ದರು. ಹಾಗಾಗಿ ಮೊಬೈಲ್ ಅನ್ನು ಹ್ಯಾಂಡ್ ಓವರ್ ಮಾಡಿದ್ದಾರೆ. ಸದ್ಯ ಕೃಪಾ ಆಳ್ವಾ ಮೊಬೈಲ್ ಪಡೆದಿರುವ ಸೈಬರ್ ಕ್ರೈಂ ಪೊಲೀಸರು ವಾಯ್ಸ್ ಸ್ಯಾಂಪಲ್ ಕೂಡ ಪಡೆದು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ. ವೀಡಿಯೋದಲ್ಲಿರುವ ವಾಯ್ಸ್ ಮ್ಯಾಚ್ ಮಾಡಲು ಕೃಪಾ ಆಳ್ವಾ ವಾಯ್ಸ್ ಸ್ಯಾಂಪಲ್ ಪಡೆದಿದ್ದಾರೆ. ಇದನ್ನೂ ಓದಿ: ತಿರುಪ್ಪರಂಕುಂದ್ರಂ ದೀಪೋತ್ಸವ ವಿವಾದ: ಸುಪ್ರೀಂನಲ್ಲಿ ಕ್ಷಮೆಯಾಚಿಸಿದ ಮಧುರೈ ಜಿಲ್ಲಾಧಿಕಾರಿ
