ಬಿಗ್ಬಾಸ್ ಸೀಸನ್ 12ರ ಸ್ಪರ್ಧಿ ನಟಿ ಸ್ಪಂದನಾ ಸೋಮಣ್ಣ (Spandana Somanna) ಭಾವೀ ಪತಿಯನ್ನು ಪರಿಚಯಿಸಿದಾಗಿಂದ ಭಾರೀ ಟ್ರೋಲ್ಗೆ ಒಳಗಾಗಿದ್ದಾರೆ.
ವರುಣ್ ಹೆಸರಿನ ಹುಡುಗನನ್ನ ಸ್ಪಂದನಾ 6 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ನಿಶ್ಚಿತಾರ್ಥದ ಬಳಿಕ ಹುಡುಗನ ಫೋಟೋ ಹಂಚಿಕೊಂಡಿದ್ದರು. ಬಳಿಕ ಸ್ಪಂದನಾ ಭಾವೀ ಪತಿ ರೂಪದ ಕುರಿತು ಭಾರೀ ಟೀಕೆ ಕೇಳಿಬಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಆದ್ರೆ ಟ್ರೋಲ್, ಟೀಕೆಗಳು ಎಷ್ಟೇ ಬಂದರೂ ಸ್ಪಂದನ ಯಾವುದನ್ನೂ ಲೆಕ್ಕಿಸಿಲ್ಲ ಅನ್ನೋದನ್ನ ಹೊಸ ಪೋಸ್ಟ್ ಹೇಳುತ್ತಿದೆ.
ಹೌದು, ಸ್ಪಂದನಾ ಪ್ರೀ ವೆಡ್ಡಿಂಗ್ ಫೋಟೋಶೂಟ್ನ್ನು (Pre Wedding Photoshoot) ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ಫೋಟೋ ಜೊತೆ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ʻʻನೀವು ನನ್ನ ಜೊತೆಗಿರುವಾಗ ಜೀವನ ತುಂಬಾ ಸುಂದರವೆನಿಸುತ್ತದೆ. ನಾನು ಬಯಸುವ ಎಲ್ಲಕ್ಕಿಂತ ಮಿಗಿಲಾದವರು ನೀವುʼʼ ಎಂದು ಬರೆದುಕೊಂಡಿದ್ದು, ಟ್ರೋಲ್ಗಳಿಗೆ ಡೋಂಟ್ ಕೇರ್ ಎಂದಿದ್ದಾರೆ.
ಸದ್ಯ ಸ್ಪಂದನಾ ಅವರ ಭಾವೀ ಪತಿ ವರುಣ್ ಮುನಿರಾಜು ಸ್ವದೇಶಕ್ಕೆ ಮರಳಿದ್ದಾರೆ. ಶೀಘ್ರದಲ್ಲೇ ಸ್ಪಂದನಾ ಮದುವೆ ನಡೆಯಲಿದ್ದು ವರುಣ್ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ. ಆದರೆ ಮದುವೆಯಾಗಲಿರೋ ಹುಡುಗನ ಬಗ್ಗೆ ಫೋಟೋ ಹಾಕಿದಾಗಲೆಲ್ಲಾ ಸ್ಪಂದನಾ ಟ್ರೋಲ್ ಆಗುತ್ತಾರೆ.
ಪ್ರೀ ವೆಡ್ಡಿಂಗ್ ಫೋಟೋಶೂಟ್ಗೂ ಕೆಟ್ಟ ಕಾಮೆಂಟ್ಗಳು ಬಂದಿದೆ. ʻʻಒಳ್ಳೊಳ್ಳೆ ಹೂಗಳನ್ನ ಕೀಟಗಳೇ ತಿನ್ನುತ್ತವೆʼʼ, ʻʻದುಡ್ಡುಮಾಡೋ ಮಂಗಣ್ಣ ನಿನಗೂ ಸಿಕ್ತಾಳೆ ಸ್ಪಂದನಾ ಸೋಮಣ್ಣʼʼ. ಎಂಬ ಹಲವು ಬಗೆಯ ಬ್ಯಾಡ್ ಕಾಮೆಂಟ್ಸ್ ಬಂದಿವೆ. ಆದರೆ ಉರ್ಕೊಳ್ಳೋರು ಉರ್ಕೊಳ್ತಿರಿ. ನಾವು ಉರಿಸ್ತಾನೇ ಇರ್ತೀವಿ ಎಂಬರ್ಥದಲ್ಲಿ ಸ್ಪಂದನಾ ಭಾವೀ ಪತಿಯ ಜೊತೆ ಫೋಟೋ ಹಾಕೋದನ್ನ ಮುಂದುವರಿಸಿದ್ದಾರೆ.




