ಬೆಂಗಳೂರು: ಭಾರತ್ ಜೋಡೋ ಸಂಘದ ಕೆಲಸಕ್ಕೆ ಶಿಕ್ಷಕರನ್ನ (Teachers) ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಜೆಡಿಎಸ್ ಎಂಎಲ್ಸಿ ಭೋಜೇಗೌಡ (SL Bhojegowda) ಆರೋಪಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ (Bharat Jodo) ಸಂಘಕ್ಕೆ ಸರ್ಕಾರ 1,000 ಕೋಟಿ ಹಣ ಮೀಸಲಿಟ್ಟಿದೆ. ಅದಕ್ಕೆ ಹಣ ಎಲ್ಲಿದೆ ಗೊತ್ತಿಲ್ಲ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಕಾರ್ತಕರ್ತರನ್ನು ಸೇರಿಸುವ ಈ ಕಾರ್ಯಕ್ರಮಕ್ಕೆ ಶಿಕ್ಷಕರನ್ನ ಬಳಕೆ ಮಾಡಲಾಗುತ್ತಿದೆ. ಪಕ್ಷದ ಕಾರ್ಯಕರ್ತರನ್ನು ಸೇರಿಸಲು ಯಾಕೆ ಶಿಕ್ಷಕರನ್ನು ಬಳಕೆ ಮಾಡ್ತಾ ಇದ್ದಾರೆ? ಎಂದು ಪ್ರಶ್ನೆ ಮಾಡಿದರು.
ಡಿಸಿಗಳು ಆದೇಶ ಹಿಂಪಡೆಯಬೇಕು
ಭಾರತ್ ಜೋಡೋಗೆ ಜನ ಸೇರಿಸೋಕೆ ಶಿಕ್ಷಕರನ್ನ ಯಾಕೆ ಬಳಕೆ ಮಾಡ್ತೀರಾ? ತಕ್ಷಣ ಈ ಕ್ರಮವನ್ನ ನಿಲ್ಲಿಸಬೇಕು. ಈ ಕೆಲಸಕ್ಕೆ ಶಿಕ್ಷಕರನ್ನ ಯಾಕೆ ಬಳಕೆ ಮಾಡ್ತೀರಾ? ಶಿಕ್ಷಣವನ್ನ ಅಧೋಗತಿಗೆ ತರೋ ಕೆಲಸ ಮಾಡ್ತಾ ಇದ್ದೀರಾ? ಎಲ್ಲಾ ಡಿಸಿಗಳು ಆದೇಶ ಮಾಡಿದ್ದಾರೆ, ಕೂಡಲೇ ಭಾರತ್ ಜೋಡೋ ಕೆಲಸಕ್ಕೆ ಶಿಕ್ಷಕರನ್ನ ಬಳಕೆ ಮಾಡೋ ಆದೇಶವನ್ನ ವಾಪಸ್ ಪಡೆಯಬೇಕು ಎಂದು ಎಂಎಲ್ಸಿ ಭೋಜೇಗೌಡ ಆಗ್ರಹಿಸಿದ್ದಾರೆ.
