ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅವರು ರೇಸಿಂಗ್ ಟ್ರ್ಯಾಕ್ನಲ್ಲಿ(Racing Track) ಕಾರು ಚಲಾಯಿಸುವ ಮೂಲಕ ಜೀವನದಲ್ಲೇ ಮರೆಯಲಾಗದ ರೋಮಾಂಚಕಾರಿ ಅನುಭವ ಪಡೆದಿದ್ದಾರೆ. ಈ ಅಪರೂಪದ ಕ್ಷಣಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಅವರು, “ಇದೊಂದು ಪದಗಳಲ್ಲಿ ವಿವರಿಸಲು ಸಾಧ್ಯವಾಗದಂತಹ ಅದ್ಭುತ ಚಾಲನಾ ಅನುಭವ” ಎಂದು ಬಣ್ಣಿಸಿದ್ದಾರೆ.
ರೇಸಿಂಗ್ ಟ್ರ್ಯಾಕ್ಗೆ ಇಳಿಯುವ ಮುನ್ನ ಸುದೀಪ್ ಅವರಿಗೆ ರೇಸಿಂಗ್ ಕಾರಿನ ಕಾರ್ಯವೈಖರಿ, ತಾಂತ್ರಿಕ ಅಂಶಗಳು ಹಾಗೂ ಚಾಲನೆಯ ವೇಳೆ ಪಾಲಿಸಬೇಕಾದ ನಿಯಮಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ತಜ್ಞರಿಂದ ಸಂಪೂರ್ಣ ವಿವರಣೆ ನೀಡಲಾಗಿತ್ತು. ಬಳಿಕ ಟ್ರ್ಯಾಕ್ಗೆ ಪ್ರವೇಶಿಸಿದ ಕಿಚ್ಚ, ಅಲ್ಲಿನ ವಿಶ್ವದರ್ಜೆಯ ಮೂಲಸೌಕರ್ಯ, ವಿಶಾಲತೆ ಮತ್ತು ಅದ್ಭುತ ವಾತಾವರಣವನ್ನು ಕಂಡು ಫಿದಾ ಆಗಿದ್ದಾರೆ. ಈ ಅವಿಸ್ಮರಣೀಯ ಅನುಭವವನ್ನು ನೀಡಿದ ಇಂಡಿಯನ್ ರೇಸಿಂಗ್ ಲೀಗ್ (IRL) ತಂಡಕ್ಕೆ ಸುದೀಪ್ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.
It was a rare moment… a driving experience of a lifetime… simply unexplainable! 🥂
We were given a complete insight before being taken to the racing track — a detailed explanation of the car, its mechanism, the dos and don’ts, and everything we needed to know.
And then came the racing track itself! Its infrastructure, ambience, atmosphere, and sheer scale… absolutely breathtaking!
A big thank you to @Irlofficial1 and everyone who made this incredible experience possible.
Upcoming Races:
🏁 28th & 29th November – BIC, Noida
🏁 5th & 6th December – Navi Mumbai Street Circuit.Cheers and best wishes!
@iampriya06
@KKB_Bengaluru
❤️— Kichcha Sudeepa (@KicchaSudeep) November 23, 2026
ಇಂಡಿಯನ್ ರೇಸಿಂಗ್ ಲೀಗ್ನಲ್ಲಿ ಸುದೀಪ್ ಮಾಲೀಕತ್ವದ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ (Kichcha’s Kings Bengaluru) ತಂಡವು ಮುಂಬರುವ ರೇಸ್ಗಳಿಗೆ ಭರ್ಜರಿ ಸಿದ್ಧತೆ ನಡೆಸಿದೆ. 2026ರ ನವೆಂಬರ್ 28 ಮತ್ತು 29ರಂದು ಗ್ರೇಟರ್ ನೋಯ್ಡಾದ ಬುದ್ಧ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ (Buddh International Circuit) ನಡೆಯಲಿರುವ ರೇಸ್ನಲ್ಲಿ ತಂಡವು ಕಣಕ್ಕಿಳಿಯಲಿದೆ. ಇದಾದ ಬಳಿಕ ಡಿಸೆಂಬರ್ 5 ಮತ್ತು 6ರಂದು ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್ನಲ್ಲಿಯೂ ರೋಚಕ ರೇಸ್ ನಡೆಯಲಿದೆ.
