ಇಡೀ ದೇಶದಲ್ಲೇ ಸಖತ್ ಸೌಂಡ್ ಮಾಡಿ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿದ್ದ ಬ್ಲಾಕ್ಬಸ್ಟರ್ ಸಿನಿಮಾ ‘ಹನುಮಾನ್’ ಸಕ್ಸಸ್ ಬೆನ್ನಲ್ಲೇ, (Hanuman Part-2) ಈಗ ಇದರ ಮುಂದಿನ ಭಾಗದ ಬಗ್ಗೆ ಅಪ್ಡೇಟ್ ಸಿಕ್ಕಿದೆ.
ನಿರ್ಮಾಣ ಸಂಸ್ಥೆ ಪ್ರೈಮ್ಶೋ ಎಂಟರ್ಟೈನ್ಮೆಂಟ್ ತನ್ನ ಹೊಸ ಸಿನಿಮಾ ‘ಹನುಮಾನ್ 2 – ದಿ ರೈಸ್ ಆಫ್ ವಾನರಾಸ್’ ಚಿತ್ರವನ್ನು ಅಧಿಕೃತವಾಗಿ ಅನೌನ್ಸ್ ಮಾಡಿದೆ. ಈ ಬಾರಿ ಯುವ ನಟ ಪಂಜ ವೈಷ್ಣವ್ ತೇಜ್ ಹೀರೋ ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಸಿನಿಮಾ ಟೈಟಲ್ ಜೊತೆಗೆ ರಿಲೀಸ್ ಆಗಿರುವ ಪೋಸ್ಟರ್ ಈಗ ಸಿನಿ ಪ್ರಿಯರ ಕಣ್ಣು ಕುಕ್ಕುತ್ತಿದೆ. ದೈತ್ಯ ಬಾಲ ಮತ್ತು ದೈವಿಕ ಶಕ್ತಿಯೊಂದಿಗೆ ಮೋಡಗಳ ನಡುವೆ ಹಾರುತ್ತಿರುವ ವ್ಯಕ್ತಿಯ ಲುಕ್ ಪೋಸ್ಟರ್ನಲ್ಲಿದ್ದು, ಸಿನಿಮಾ ಮೇಲಿನ ಕ್ರೇಜ್ ಅನ್ನು ಡಬಲ್ ಮಾಡಿದೆ. ಪುರಾಣ ಮತ್ತು ಫ್ಯಾಂಟಸಿ ಕಥೆಗಳ ಮಿಶ್ರಣದೊಂದಿಗೆ ಪ್ರೇಕ್ಷಕರಿಗೆ ಹೊಸದೊಂದು ಲೋಕವನ್ನೇ ತೋರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
ವಿಭಿನ್ನ ರೀತಿಯ ಫ್ಯಾಂಟಸಿ ಕಥೆಗಳನ್ನು ಹೇಳುವುದರಲ್ಲಿ ಎಕ್ಸ್ಪರ್ಟ್ ಆಗಿರುವ ನಿರ್ದೇಶಕ ವಿ.ಐ. ಆನಂದ್ ಈ ಸಿನಿಮಾಗೆ ಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕರಾದ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಈ ಚಿತ್ರಕ್ಕೆ ಅದ್ದೂರಿಯಾಗಿ ಬಂಡವಾಳ ಹೂಡುತ್ತಿದ್ದಾರೆ.ಇದನ್ನೂ ಓದಿ: ಹಾಸನದ ಗಜಪಡೆಯನ್ನು ಚಿಕ್ಕಮಗಳೂರಿಗೆ ನುಗ್ಗಿಸಿದ್ದಕ್ಕೆ ಆಕ್ರೋಶ – ರಾಜೀನಾಮೆ ಪತ್ರ ಹಿಡಿದು ಸ್ಪೀಕರ್ ಕಚೇರಿಗೆ ಬಂದ ನಯನಾ ಮೋಟಮ್ಮ
ವಿಶೇಷ ಅಂದ್ರೆ, ಇದೇ ನಿರ್ಮಾಣ ಸಂಸ್ಥೆ ಸದ್ಯ ಸಾಯಿ ದುರ್ಗಾ ತೇಜ್ ಜೊತೆ ‘SYG’ ಹಾಗೂ ನಮ್ಮ ಕನ್ನಡದ ಕಿಚ್ಚ ಸುದೀಪ್ ಅವರ ಜೊತೆ ‘BRB’ ಸಿನಿಮಾಗಳನ್ನೂ ನಿರ್ಮಿಸುತ್ತಿದೆ. ಈಗ ‘ಹನುಮಾನ್ 2’ ಮೂಲಕ ಮತ್ತೊಂದು ದೊಡ್ಡ ಮಟ್ಟದ ಸಿನಿಮಾ ಸಾಹಸಕ್ಕೆ ಕೈಹಾಕಿದ್ದು, ಉಳಿದ ಪಾತ್ರವರ್ಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದೆ.ಇದನ್ನೂ ಓದಿ: `ನಾವು ತುಂಬಾ ಒಳ್ಳೆಯವರು’ ಅಂದ ಪಪ್ಪಿ ಟೀಮ್: ಬಾಲ ಕಲಾವಿದರಿಂದ ಹಾಡು ರಿಲೀಸ್
