ನಟಿ ತ್ರಿಷಾಗೆ (Trisha Krishnan) ಅಭಿಮಾನಿಗಳು ಸರ್ಪ್ರೈಸ್ ಕೊಟ್ಟಿದ್ದಾರೆ. ನಟಿ ಫ್ಯಾನ್ಸ್ ಮಾಜಿ ಸಿಎಂ ಜಯಲಲಿತಾ ಅವರ ಬಿರುದಿನಿಂದ ಸ್ಫೂರ್ತಿ ಪಡೆದು ಹೊಸ ಸಂಘಟನೆಯೊಂದನ್ನು ಶುರು ಮಾಡಿದ್ದು, ತ್ರಿಷಾ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಅನ್ನೋ ಚರ್ಚೆ ಮತ್ತೇ ಜೋರಾಗಿದೆ
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ತ್ರಿಷಾ ಫ್ಯಾನ್ಸ್ ‘ಇಲೈಯಾ ಪುರಚ್ಚಿ ತಲೈವಿ ತ್ರಿಶಾ ಪೆರವೈ’ (ಯುವ ಕ್ರಾಂತಿಕಾರಿ ನಾಯಕಿ ತ್ರಿಷಾ ವೇದಿಕೆ) ಎಂಬ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. ಹಿಂದೆ ಜಯಲಲಿತಾ ಅವರನ್ನು ಅಭಿಮಾನಿಗಳು ‘ಪುರಚ್ಚಿ ತಲೈವಿ’ ಎಂದು ಕರೆಯುತ್ತಿದ್ದರು. ಈಗ ಅದೇ ಹೆಸರಿಗೆ ‘ಯುವ’ (ಇಲೈಯಾ) ಎಂಬ ಪದ ಸೇರಿಸಿ ತ್ರಿಷಾ ಅವರಿಗೆ ಈ ಬಿರುದು ಕೊಟ್ಟಿರುವುದು ಎಲ್ಲರ ಹುಬ್ಬೇರಿಸಿದೆ.
ಈ ಸಂಘಟನೆಯ ಸಂಯೋಜಕ ರಾಜಗೋಪಾಲ್ ಮಾತನಾಡಿ, ತ್ರಿಷಾ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಜೊತೆ ಸೇರಿ ರಾಜಕೀಯಕ್ಕೆ ಬಂದರೆ ಜನರಿಗೆ ಒಳ್ಳೆಯದಾಗುತ್ತೆ ಅಂತ ತಮ್ಮ ಆಸೆ ಹೇಳಿಕೊಂಡಿದ್ದಾರೆ. ಈ ಸಂಘಟನೆಗೆ ಅವರ ಒಪ್ಪಿಗೆ ಇದೆಯಾ ಅಥವಾ ಇಲ್ಲವಾ ಅನ್ನೋದು ಇನ್ನೂ ಕ್ಲಿಯರ್ ಆಗಿಲ್ಲ.
ಕಳೆದ 27 ವರ್ಷಗಳಿಂದ ಚಿತ್ರರಂಗದಲ್ಲಿ ಮಿಂಚುತ್ತಿರುವ ತ್ರಿಷಾ, ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಗಿಲ್ಲಿ, ವಿನ್ನೈತಾಂಡಿ ವರುವಾಯಾ, 96, ಪೊನ್ನಿಯಿನ್ ಸೆಲ್ವನ್, ಲಿಯೋ, ಥಗ್ ಲೈಫ್ ಹಾಗೂ ಇತ್ತೀಚೆಗೆ ಸೂರ್ಯ ಜೊತೆ ‘ಕರುಪ್ಪು’ ಸಿನಿಮಾದಲ್ಲಿ ಕಾಣಿಸಿಕೊಂಡು ಈಗಲೂ ಟಾಪ್ ನಟಿಯಾಗಿ ಮೆರೆಯುತ್ತಿದ್ದಾರೆ.ಇದನ್ನೂ ಓದಿ: ದರ್ಶನ್, ಪವಿತ್ರಾ ಸೇರಿ ಯಾರನ್ನೂ ನೋಡಿಲ್ಲ – ಪಟ್ಟಣಗೆರೆ ಶೆಡ್ ವಾಚ್ಮ್ಯಾನ್ ಸಾಕ್ಷಿ ಹೇಳಿಕೆ ದಾಖಲು
ಇನ್ನೊಂದೆಡೆ, ಸಿಎಂ ವಿಜಯ್ ಮತ್ತು ತ್ರಿಶಾ ನಡುವಿನ ಸ್ನೇಹದ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಗಾಸಿಪ್ ಹರಿದಾಡುತ್ತಿದೆ. ಮೇ 2026ರಲ್ಲಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲೂ ತ್ರಿಷಾ ಭಾಗವಹಿಸಿ, ವಿಜಯ್ ಪೋಷಕರನ್ನು ಸ್ವಾಗತಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಒಟ್ಟಿನಲ್ಲಿ ಈ ಹೊಸ ಅಭಿಮಾನಿಗಳ ಸಂಘಟನೆ ತ್ರಿಷಾ ಅವರನ್ನು ನಿಜವಾಗಿಯೂ ರಾಜಕೀಯಕ್ಕೆ ಕರೆತರುತ್ತಾ ಅಂತ ಕಾದು ನೋಡಬೇಕಿದೆ.ಇದನ್ನೂ ಓದಿ: ಬೈಕ್, ಕಾರುಗಳ ಮೇಲೆ ಜಾತಿ ಹೆಸರು, ಸ್ಟಿಕ್ಕರ್ ಬ್ಯಾನ್ – ಗುಜರಾತ್ ಸರ್ಕಾರದಿಂದ ಹೊಸ ರೂಲ್ಸ್
