ಕನ್ನಡದ ಸ್ಟಾರ್ ಯಶ್ (Yash) ಅಭಿನಯದ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ (Ramayana) ಸಿನಿಮಾ ಯಶಸ್ಸಿನ ಅಶ್ವಮೇಧ ಯಾಗವನ್ನು ಮುಂದುವರಿಸಿದೆ. ಸಿನಿಮಾದಲ್ಲಿ ರಾವಣ ಪಾತ್ರದ ಅಭಿನಯಕ್ಕಾಗಿ ನಟ ಯಶ್ಗೆ ಭರಪೂರ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಿನಿಮಾದಲ್ಲಿ ಯಶ್ ಫಿಟ್ನೆಸ್ ಪ್ರೇಕ್ಷಕರ ಗಮನ ಸೆಳೆದಿದೆ. ಉತ್ತಮ ಮೈಕಟ್ಟು ಕಾಪಾಡಿಕೊಳ್ಳಲು ಶಿಸ್ತುಬದ್ಧ ಆಹಾರ, ವ್ಯಾಯಾಮ ದಿನಚರಿಯನ್ನು ರಾಕಿಂಗ್ ಸ್ಟಾರ್ ಅನುಸರಿಸುತ್ತಿದ್ದರು.
ವೆಬ್ಸೈಟ್ವೊಂದರ ವರದಿಯಂತೆ, ಯಶ್ ತನ್ನ ದಿನವನ್ನು ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೊಟೀನ್ಯುಕ್ತ ಉಪಾಹಾರದೊಂದಿಗೆ ಪ್ರಾರಂಭಿಸುತ್ತಿದ್ದರು. ಅವರ ಉಪಾಹಾರದಲ್ಲಿ ದೊಡ್ಡ ಬಟ್ಟಲಲ್ಲಿ ಜಾಯಿಕಾಯಿ, ಐದು ಪೀಸ್ ಕಂದು ಬ್ರೆಡ್, ಎಂಟು ಮೊಟ್ಟೆಯ ಬಿಳಿಭಾಗ, ತರಕಾರಿಗಳು, ಕಲ್ಲಂಗಡಿ ಮತ್ತು ಪಪ್ಪಾಯಿ ಇರುತ್ತಿತ್ತು. ಬೆಳಗ್ಗೆ 11 ಗಂಟೆಯ ಸುಮಾರಿಗೆ ಅವರು ಪ್ರೊಟೀನ್ ಶೇಕ್ ಸೇವಿಸುತ್ತಿದ್ದರು. ಪ್ರೊಟೀನ್ನ ಮೂಲವಾಗಿ ಮೀನು ಕೂಡ ಅವರ ಆಹಾರದ ಪ್ರಮುಖ ಭಾಗವಾಗಿತ್ತು. ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಆರ್ಭಟ – ಭಾರತದಲ್ಲೇ 900 ಕೋಟಿ ಗಳಿಕೆಯತ್ತ ಯಶ್ ಸಿನಿಮಾ
ಸಂಜೆಯ ಜಿಮ್ ಅವಧಿಗೆ ಮುನ್ನ, ಯಶ್ ನಾಲ್ಕು ಪೀಸ್ ಕಂದು ಬ್ರೆಡ್ ಮತ್ತು ನಾಲ್ಕು ಬಾಳೆಹಣ್ಣುಗಳನ್ನು ತಿನ್ನುತ್ತಿದ್ದರು. ಮಿತ ಭೋಜನ ಮಾಡುತ್ತಿದ್ದರು. ಆದರೆ, ಅದರಲ್ಲಿ ಸಾಕಷ್ಟು ಪ್ರೊಟೀನ್ ಅಂಶ ಇರುವಂತೆ ನೋಡಿಕೊಳ್ಳುತ್ತಿದ್ದರು. ಜಂಕ್ ಫುಡ್ ಕೈಬಿಟ್ಟು, ಶುದ್ಧ ಆಹಾರ ಸೇವಿಸುತ್ತಿದ್ದರು ಎಂದು ವರದಿಯಾಗಿದೆ.
ಯಶ್ ದಿನಕ್ಕೆ ಎರಡು ಬಾರಿ ವ್ಯಾಯಾಮ ಮಾಡುತ್ತಿದ್ದರು. ನಿಯಮಿತ ಫಿಟ್ನೆಸ್ ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದರು. ಅವರ ಸಂಜೆಯ ವ್ಯಾಯಾಮವು ಮುಖ್ಯವಾಗಿ ತೂಕ ತರಬೇತಿಯ ಮೇಲೆ ಕೇಂದ್ರೀಕೃತವಾಗಿತ್ತು. ಫಿಟ್ನೆಸ್ ಮೇಲೆ ಸ್ಥಿರತೆ ಮುಖ್ಯ ಎಂದು ನಟ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೂರನೇ ವಾರಕ್ಕೆ ಕಾಲಿಟ್ಟ ʻರಾಮಾಯಣʼ – 1,600 ಕೋಟಿ ಗಳಿಕೆ ಹಾದಿಯಲ್ಲಿ ಯಶ್ ಸಿನಿಮಾ
‘ದಂಗಲ್’ ಸಿನಿಮಾ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ, ಕಾಜಲ್ ಅಗರ್ವಾಲ್ ಮಂಡೋದರಿಯಾಗಿ ಕಾಣಿಸಿಕೊಂಡಿದ್ದಾರೆ. ರವಿ ದುಬೆ ಲಕ್ಷ್ಮಣನಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನಾಗಿ ಅಭಿನಯಿಸಿದ್ದಾರೆ. ಪೋಷಕ ಪಾತ್ರದಲ್ಲಿ ದಶರಥನಾಗಿ ಅರುಣ್ ಗೋವಿಲ್, ಕೈಕೇಯಿಯಾಗಿ ಲಾರಾ ದತ್ತಾ, ಶೂರ್ಪಣಖಾ ಆಗಿ ರಾಕುಲ್ ಪ್ರೀತ್ ಸಿಂಗ್, ಮಂಥರಾ ಆಗಿ ಶೀಬಾ ಚಡ್ಡಾ ಮತ್ತು ಭರತ್ ಆಗಿ ಆದಿನಾಥ್ ಕೊಠಾರೆ ಇದ್ದಾರೆ.
