– ದೇವಸ್ಥಾನದ ಅಧಿಕೃತರು, ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಅನುಮತಿ
– ಸುಪ್ರೀಂ ಕೋರ್ಟ್ ತೀರ್ಮಾನ ಸ್ವಾಗತಿಸಿದ ಬಿಜೆಪಿ
ನವದೆಹಲಿ/ಚೆನ್ನೈ: ತಮಿಳುನಾಡಿನ ಮಧುರೈನಲ್ಲಿರುವ ತಿರುಪ್ಪರಾಂಕುಂಡ್ರಂ (Thiruparankundram) ಬೆಟ್ಟದ ದೀಪದೂನ್ನಲ್ಲಿ ನ.24ರಂದು ಕಾರ್ತಿಕ ದೀಪ ಹಚ್ಚಲು ಸುಪ್ರೀಂ ಕೋರ್ಟ್ (Supreme Court) ಷರತ್ತುಬದ್ಧ ಅನುಮತಿ ನೀಡಿದೆ.
ನವೆಂಬರ್ 24ರಂದು ಬೆಟ್ಟದ ಮೇಲಿರುವ ದೀಪದೂನ್ ಎಂಬ ಕಲ್ಲಿನ ಕಂಬದ ಬಳಿ ದೀಪ ಬೆಳಗಿಸಲು ಅವಕಾಶ ಕಲ್ಪಿಸಿದೆ. ಆದರೆ ಈ ಅನುಮತಿ ಈ ವರ್ಷದ ಆಚರಣೆಗೆ ಮಾತ್ರ ಸೀಮಿತವಾಗಿದ್ದು, ಮಧ್ಯಂತರ ವ್ಯವಸ್ಥೆಯಾಗಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇದನ್ನೂ ಓದಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಮತ್ತೊಮ್ಮೆ ಹಿನ್ನಡೆ
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ. ಇದೇ ವೇಳೆ ದೀಪದೂನ್ ಬಳಿ ದೀಪ ಬೆಳಗಿಸುವ ಪದ್ಧತಿಯನ್ನು ಮರುಸ್ಥಾಪಿಸುವಂತೆ ಸೂಚಿಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಪಿನ ಕೆಲವು ಅಂಶಗಳಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧಿಕೃತ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸ್ಥಳಕ್ಕೆ ತೆರಳಲು ಅವಕಾಶ ಇರಲಿದೆ. ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಎಷ್ಟು ಮಂದಿ ಭಾಗವಹಿಸಬೇಕು? ಯಾವ ಸಮಯದಲ್ಲಿ ದೀಪ ಬೆಳಗಿಸಬೇಕು? ಮತ್ತು ಯಾವ ಮಾರ್ಗದಲ್ಲಿ ತೆರಳಬೇಕು? ಎಂಬುದನ್ನು ಮಧುರೈ ಜಿಲ್ಲಾಧಿಕಾರಿ ನಿರ್ಧರಿಸಲಿದ್ದಾರೆ.ಇದನ್ನೂ ಓದಿ: ಹಿರಿಯೂರು ಉಪ ಚುನಾವಣೆ ನಮಗೆ ಗೆಲುವು ಮುಖ್ಯ, ಟಿಕೆಟ್ ಬಗ್ಗೆ ಪ್ರತಿಷ್ಠೆ ಇಲ್ಲ: ಹೆಚ್ಡಿಕೆ
ಕಾರ್ಯಕ್ರಮದ ವೇಳೆ ಯಾವುದೇ ಮೆರವಣಿಗೆ, ಪ್ರತಿಭಟನೆ ಅಥವಾ ಘೋಷಣೆ ಕೂಗುವುದಕ್ಕೆ ಅವಕಾಶ ಇರುವುದಿಲ್ಲ. ಸ್ಥಳದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಅಗತ್ಯವಿದ್ದಲ್ಲಿ ಭದ್ರತಾ ಪಡೆಗಳ ನೆರವು ಪಡೆಯಬಹುದು ಎಂದು ತಿಳಿಸಿದೆ.ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸರ್ಕಾರ ತಕ್ಷಣ ತೀರ್ಮಾನ ಮಾಡಬೇಕು: ಹೆಚ್ಡಿಕೆ ಆಗ್ರಹ
