* 2027ರ ಫೆಬ್ರವರಿಗೂ ಮುನ್ನ ಉಡಾವಣೆ ಅನುಮಾನ
ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ (Gaganyaan Mission) ಮತ್ತೊಮ್ಮೆ ಹಿನ್ನಡೆಯಾಗಿದೆ. 2027ರ ಫೆಬ್ರವರಿಗೂ ಮುನ್ನ ಉಡಾವಣೆ ಅನುಮಾನ ಎನ್ನಲಾಗಿದೆ.
ಈ ಹಿಂದೆ 2026ರ ಡಿಸೆಂಬರ್ನಲ್ಲಿ ಮೊದಲ ಉಡಾವಣೆ ನಡೆಸಲು ಇಸ್ರೋ ಯೋಜಿಸಿತ್ತು. ತಾಂತ್ರಿಕ ಪರಿಶೀಲನೆ, ಹೆಚ್ಚುವರಿ ಸಿಮ್ಯುಲೇಷನ್ ಮತ್ತು ಪರೀಕ್ಷಾ ಪ್ರಕ್ರಿಯೆಗಳು ಇನ್ನೂ ನಡೆಯುತ್ತಿವೆ. ಯೋಜನೆಯ ಸುಮಾರು ಶೇ.80 ರಷ್ಟು ಕೆಲಸ ಪೂರ್ಣಗೊಂಡಿದೆ. ಬಾಹ್ಯಾಕಾಶ ನೌಕೆ ಮತ್ತು ಉಡಾವಣಾ ವಾಹನಕ್ಕೆ ಹಾರಾಟದ ಅನುಮತಿ ನೀಡುವ ಮುನ್ನ ಕೆಲವು ಪ್ರಮುಖ ಪರೀಕ್ಷೆಗಳು ಬಾಕಿ ಉಳಿದಿವೆ. ಮಾನವ ಜೀವದ ಸುರಕ್ಷತೆಗೆ ಇಸ್ರೋ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದನ್ನೂ ಓದಿ: ಮಾನವಸಹಿತ ಗಗನಯಾನಕ್ಕೆ ಸಿದ್ಧವಾಗ್ತಿದೆ ಇಸ್ರೋ – ಡ್ರೋಗ್ ಪ್ಯಾರಾಚೂಟ್ ಪರೀಕ್ಷೆ ಸಕ್ಸಸ್
ಮೊದಲ ಮಾನವರಹಿತ ಹಾರಾಟದಲ್ಲಿ ವ್ಯೋಮಮಿತ್ರ ಎಂಬ ಅರ್ಧ ಮಾನವಾಕಾರದ ರೋಬೋಟ್ ಅನ್ನು ಕಳುಹಿಸುವ ಯೋಜನೆ ಇದಾಗಿದೆ. ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೂ ಮುನ್ನ ನೌಕೆಯ ಕಾರ್ಯಕ್ಷಮತೆ, ಜೀವಾಧಾರ ವ್ಯವಸ್ಥೆ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಪರೀಕ್ಷಿಸುವುದು ಈ ಉಡಾವಣೆಯ ಉದ್ದೇಶವಾಗಿದೆ. ಈ ಹಿನ್ನಲೆ ಇನ್ನಷ್ಟು ಕಾಲ ವಿಳಂಬವಾಗುವ ಸಾಧ್ಯತೆಯಿದೆ.
ಸೆಪ್ಟೆಂಬರ್ನಲ್ಲಿ EOS-05 ಅನ್ನು ಹೊತ್ತ GSLV-F17 ಯಶಸ್ವಿ ಉಡಾವಣೆಯ ನಂತರ, NVS-03 ಮತ್ತು ಮೊದಲ ಮಾನವರಹಿತ ಗಗನಯಾನ ಹಾರಾಟ ಸೇರಿದಂತೆ ಕ್ಯಾಲೆಂಡರ್ ವರ್ಷದಲ್ಲಿ ಇನ್ನೂ ಆರು ಉಡಾವಣೆಗಳನ್ನು ಯೋಜಿಸಲಾಗಿದೆ ಎಂದು ನಾರಾಯಣನ್ ತಿಳಿಸಿದ್ದಾರೆ. ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ
