ಸಹಸ್ಪರ್ಧಿಗಳ ಮೇಲೆ ನಾಲಿಗೆ ಹರಿಬಿಟ್ಟ ವಿಚಾರಕ್ಕೆ ಮಂಜುಗೆ ಬಿಗ್ಬಾಸ್ನಿಂದ (Bigg Boss) ಗೇಟ್ಪಾಸ್ ಕೊಡಲಾಗಿತ್ತು. ಒಂದು ತಿಂಗಳ ಬಳಿಕ ಮತ್ತೆ ಬಿಗ್ ಹೌಸ್ಗೆ ವಾಪಸ್ಸಾದ ಮಾಡರ್ನ್ ಮಹಾಕವಿ ಮಂಜ (Modern Mahakavi Manja) ಇದೀಗ ಕೋ ಕಂಟೆಸ್ಟಂಟ್ಗಳ ಜೊತೆ ಮತ್ತದೇ ರೀತಿ ವರ್ತನೆ ತೋರಿದ್ದಾರೆ. ಈ ಬಾರಿ ಪ್ರಶಾಂತ್ ಮೇಲೆ ಮಹಾಕವಿ ಮಂಜನ ಬಿರುಸಿನ ಪದ ಪ್ರಯೋಗ ನಡೆದಿದೆ.
ಮಂಜ ದಿಢೀರ್ ಎಂಟ್ರಿಯ ಶಾಕ್ನಿಂದ ಈವರೆಗೂ ಸ್ಪರ್ಧಿಗಳು ಹೊರಬಂದಿಲ್ಲ. ಅದಾಗಲೇ ಮಂಜು ಸಹಸ್ಪರ್ಧಿಗಳ ಜೊತೆ ಒರಟಾಗಿ ನಡೆದುಕೊಳ್ಳಲಾರಂಭಿಸಿರುವುದು ಕಂಡುಬಂದಿದೆ. ಎರಡು ರಾಜಕೀಯ ಪಕ್ಷಗಳ ಟಾಸ್ಕ್ನಲ್ಲಿ ತಮ್ಮ ನಾಯಕನ ಕಟೌಟ್ಗೆ ಬಣ್ಣ ಬಳಿಯದಂತೆ ಉಳಿಸಿಕೊಳ್ಳಲು ಆಟವಾಡ್ತಿದ್ದ ವೇಳೆ ಪರಸ್ಪರ ವಿರೋಧಿ ತಂಡದ ಗಾನವಿ ಹಾಗೂ ಪ್ರಶಾಂತ್ ಬಿರುಸಿನ ಆಟವಾಡಿದ್ದಾರೆ. ಈ ವೇಳೆ ಗಾನವಿ ಕತ್ತಿನ ಮೇಲೆ ಪ್ರಶಾಂತ್ ಕಾಲನ್ನಿಟ್ಟಿದ್ದಾರೆ. ಈ ವಿಚಾರಕ್ಕೆ ಟಾಸ್ಕ್ನ ಉಸ್ತುವಾರಿ ಮಂಜ ಹಾಗೂ ಪ್ರಶಾಂತ್ ನಡುವೆ ಭಾರೀ ವಾಗ್ವಾದ ನಡೆಯಿತು.
ಸ್ಪರ್ಧಿ ಪ್ರಶಾಂತ್ , ಉಸ್ತುವಾರಿ ಮಂಜುಗೆ ಕ್ಲಾರಿಫಿಕೇಷನ್ ಕೊಡುವಾಗ ಪ್ರಶಾಂತ್ ಕೋಪಗೊಂಡು `ಒಂದ್ ತಿಂಗ್ಳು ಆಚೆ ಇರೋ ಬಚ್ಚಾ’ ಅಂದ್ರು.. ಅದಕ್ಕೆ ಕೌಂಟರ್ ಕೊಟ್ಟ ಮಂಜ ಹೋಗೋ ಲುಚ್ಚ ಎಂದಿದ್ದಾರೆ… ಇನ್ನೂ ಮಾತು ಮುಂದುವರೆದು ಪ್ರಶಾಂತ್ಗೆ ಬಾಡಿ ಶೇಮಿಂಗ್ ಆಗುವ ರೀತಿ ಪದ ಪ್ರಯೋಗ ಮಾಡಿದ್ದಾರೆ. ಮೂರಡಿ ಮೂಟೆ ಎಂದು ಪ್ರಶಾಂತ್ಗೆ ಮಂಜು ಹೇಳಿದ್ದಾರೆ. ಬಳಿಕ ಪರಸ್ಪರ ಭರ್ಜರಿ ವಾಗ್ಯುದ್ಧ ನಡೆದಿದೆ. ಹೀಗೆ ಮಂಜು ಮತ್ತೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಆಟವಾಡಿದ್ದಾರೆ. ಇದು ಯಾವ ಪರಿಣಾಮಕ್ಕೆ ಹೋಗುತ್ತೋ ನೋಡ್ಬೇಕು.
