ನವದೆಹಲಿ: ಆಟವಾಡುತ್ತಿದ್ದಾಗ ನಾಲ್ಕು ವರ್ಷದ ಬಾಲಕ ತೆರೆದ ಚರಂಡಿಗೆ ಜಾರಿ ಬಿದ್ದಿರುವ ಘಟನೆ ದೆಹಲಿಯ (Delhi) ನಂಗ್ಲಿ ವಿಹಾರ್ (Nangli Vihar) ಪ್ರದೇಶದ ದಾಸ್ ಗಾರ್ಡನ್ ಕಾಲೋನಿ ಬಳಿ ನಡೆದಿದ್ದು, ಸದ್ಯ ಬಾಲಕನ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
4 ವರ್ಷದ ಬಾಲಕ ತನ್ನ ತಾಯಿಯೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ತೆರೆದ ಚರಂಡಿಗೆ (Manhole) ಜಾರಿ ಬಿದ್ದಿದ್ದಾನೆ. ಈ ಕುರಿತು ನಮಗೆ 9:45ಕ್ಕೆ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದೇವೆ. ಈವರೆಗೆ ಬಾಲಕನ ಸುಳಿವು ಸಿಕ್ಕಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಾಸನಾಂಬ ದರ್ಶನೋತ್ಸವಕ್ಕೆ ಇಂದು ತೆರೆ – ಕೆಂಡ ಹಾಯುವಾಗ ಕೊನೆಗೆ ಜಾರಿದ ಸಂಸದ ಶ್ರೇಯಸ್ ಪಟೇಲ್
ಸದ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್ಎಸ್), ದೆಹಲಿ ಪೊಲೀಸ್, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮತ್ತು ಗಡಿ ಭದ್ರತಾ ಪಡೆ (ಬಿಎಸ್ಎಫ್) ತಂಡಗಳು ಸ್ಥಳದಲ್ಲಿ ನಿಯೋಜನೆಗೊಂಡಿದ್ದು, ಬಾಲಕನನ್ನು ಪತ್ತೆಹಚ್ಚಿ ಹೊರತೆಗೆಯಲು ತೀವ್ರ ಶೋಧ ನಡೆಯುತ್ತಿದೆ.
ಈ ಬಗ್ಗೆ ಮಗುವಿನ ತಂದೆ ಖುರ್ಷಿದ್ ಆಲಮ್ ಮಾತನಾಡಿ, ನನ್ನ ಮಗನ ಹೆಸರು ಇಮ್ರಾನ್. ಅವನು ಆಟವಾಡಲು ಗಾರ್ಡನ್ಗೆ ಬಂದಿದ್ದ. ಆಗ ಮೂತ್ರ ವಿಸರ್ಜನೆಗಾಗಿ ಒಳಚರಂಡಿ ಹತ್ತಿರ ಹೋಗಿದ್ದ. ಆಗ ತೆರೆದ ಒಳಚರಂಡಿಗೆ ಬಿದ್ದಿದ್ದಾನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಹಳಿ ತಪ್ಪಿದ ಕೋಲ್ಕತ್ತಾ–ಸೈರಾಂಗ್ ಎಕ್ಸ್ಪ್ರೆಸ್ ರೈಲು; ಹಲವು ಪ್ರಯಾಣಿಕರಿಗೆ ಗಾಯ
ಈ ಬಗ್ಗೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರಜತ್ ಮಲ್ಹೋತ್ರಾ ಮಾತನಾಡಿ, ಎನ್ಡಿಆರ್ಎಫ್ ತಂಡ ಮತ್ತು ಸಂಪೂರ್ಣ ಆಡಳಿತ ಮಗುವನ್ನು ರಕ್ಷಿಸಲು ಶ್ರಮಿಸುತ್ತಿವೆ. ಕರೆ ಬಂದಾಗಿನಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಎಲ್ಲ ರೀತಿಯ ಪ್ರಯತ್ನಗಳು ಮಾಡುತ್ತಿದ್ದೇವೆ. ವಿಶೇಷ ರಕ್ಷಣಾ ತಂಡಗಳು ಪ್ರಸ್ತುತ ಒಳಚರಂಡಿ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಬಾಲಕನ ಇರುವಿಕೆಯನ್ನು ಪತ್ತೆಹಚ್ಚಲು ಸಕ್ಷನ್ ಪಂಪ್ಗಳು ಹಾಗೂ ಸ್ಕ್ಯಾನಿಂಗ್ ಉಪಕರಣಗಳನ್ನು ಬಳಸುತ್ತಿವೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಉತ್ತರ ಪ್ರದೇಶ | ಹಳೇ ವೈಷಮ್ಯಕ್ಕೆ ರಾಷ್ಟ್ರಪತಿ ಅಂಗರಕ್ಷಕನಿಗೆ ಶೂಟ್ – ತಲೆಗೆ ಗಂಭೀರ ಗಾಯ
