ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ಆತ್ಮಕಥನ ‘Belonging: A Journey of Love’ ಪುಸ್ತಕದಲ್ಲಿ ತಮ್ಮ ಆರೋಗ್ಯದ ಏರಿಳಿತಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಎರಡು ಬಾರಿ ಕ್ಯಾನ್ಸರ್ ಗೆದ್ದ ಅಚ್ಚರಿದಾಯಕ ವಿಚಾರವನ್ನೂ ಸೋನಿಯಾ ಗಾಂಧಿ ಬಹಿರಂಗಪಡಿಸಿದ್ದಾರೆ.
ತಮ್ಮ ಆರೋಗ್ಯ ಸಮಸ್ಯೆಗಳು ಮತ್ತು ರಹಸ್ಯವಾಗಿ ನಡೆಸಿದ ಶಸ್ತ್ರಚಿಕಿತ್ಸೆಗಳ ಬಗ್ಗೆ ಆತ್ಮಕಥನದಲ್ಲಿ ಉಲ್ಲೇಖ ಮಾಡಿದ್ದಾರೆ. ಆರೋಗ್ಯದ ವಿಚಾರ ತಿಳಿದು ನುನು ಆಘಾತಕ್ಕೊಳಗಾಗಿದ್ದೆ, ಆತಂಕಗೊಂಡಿದ್ದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಣಬ್ ಮುಖರ್ಜಿ ಪ್ರಧಾನಿಯಾಗುವ ಆಸೆ ಹೊಂದಿದ್ದರು: ಆತ್ಮಕಥನದಲ್ಲಿ ಸೋನಿಯಾ ಉಲ್ಲೇಖ
ತಮ್ಮ ವೈಯಕ್ತಿಕ ಆರೋಗ್ಯದ ಅನುಭವಗಳನ್ನು ಆತ್ಮಕಥನದಲ್ಲಿ ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ. ಎರಡನೇ ಬಾರಿ ಕ್ಯಾನ್ಸರ್ ಭೀತಿ ಎದುರಾದಾಗ ಕುಟುಂಬದವರು ಹಾಗೂ ವೈದ್ಯರು ಆತಂಕಗೊಂಡಿದ್ದರು. ನೆದರ್ಲೆಂಡ್ಸ್ನ ರೋಟರ್ಡ್ಯಾಮ್ನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಮೇದೋಜೀರಕ ಗ್ರಂಥಿಯ ಗಡ್ಡೆ ಆರಂಭಿಕ ಕ್ಯಾನ್ಸರ್ ಪೂರ್ವ ಹಂತದಲ್ಲಿರುವುದು ಪತ್ತೆಯಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆಯಲಾಯಿತು ಎಂದು ತಿಳಿಸಿದ್ದಾರೆ.
2016ರಲ್ಲಿ ವಾರಾಣಸಿಯಲ್ಲಿ ಚುನಾವಣಾ ರ್ಯಾಲಿ ವೇಳೆ ಸೋನಿಯಾ ಗಾಂಧಿ ಕುಸಿದು ಬಿದ್ದಿದ್ದರು. ಭುಜದ ಮೂಳೆ ಮುರಿತದಿಂದ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಎಲ್ಲಾ ವಿಚಾರಗಳನ್ನೂ ತಮ್ಮ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ. ಆರೋಗ್ಯ ಮಾಹಿತಿಯನ್ನು ಸಾರ್ವಜನಿಕ ಚರ್ಚೆಯಿಂದ ಕಾಪಾಡಿಕೊಳ್ಳುವುದು ಸವಾಲಾಗಿತ್ತು ಎಂದು ಬರೆದಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಮಾರುಕಟ್ಟೆಗೆ – ರಾಜಕೀಯ ಜೀವನದ ಹತ್ತಾರು ಕೌತುಕಗಳು ಬಹಿರಂಗ
