ಬೆಂಗಳೂರು: ರಾಜ್ಯದ ರೈತರ ಬ್ಯಾಂಕ್ ಖಾತೆಗಳಿಗೆ ಕಡಿಮೆ ಬರ ಪರಿಹಾರ (Drought Relief) ಹಾಕಿರುವ ವಿಚಾರವಾಗಿ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಪ್ರತಿಕ್ರಿಯೆ ನೀಡಿದ್ದಾರೆ. ಯಾರೂ ಗಾಬರಿ ಪಡಬೇಕಿಲ್ಲ. ಒಬ್ಬ ರೈತರಿಗೆ 5,000 ರೂ. ಅಂತ ಫಿಕ್ಸ್ ಆಗಿದೆ. ಹಣ ಹಾಕುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ರೈತರ ಖಾತೆಗಳಿಗೆ ಕಡಿಮೆ ಪರಿಹಾರದ ಹಣ ನೀಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಸಿಎಂ ಉತ್ತರಿಸಿದ್ದಾರೆ. ಯಾರು ಹೇಳಿದ್ದು ರೀ? ಒಬ್ಬ ರೈತರಿಗೆ 5 ಸಾವಿರ ಅಂತ ಫಿಕ್ಸ್ ಆಗಿದೆ. ಯಾರ ಅಕೌಂಟ್ಗೆ ಸರಿಯಾಗಿ ಹಣ ಹೋಗಿಲ್ಲ, ಅದೆನ್ನೆಲ್ಲವನ್ನೂ ಸರಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬರ ಪರಿಹಾರದ ಬಗ್ಗೆ ಗೊಂದಲ ಬೇಡ – ಎಲ್ಲ ಅರ್ಹ ರೈತರಿಗೂ 5,000 ರೂ. ನೆರವು: ಸಿಎಂ ಸ್ಪಷ್ಟನೆ
ಒಬ್ಬ ರೈತನಿಗೆ 5 ಸಾವಿರ ಅಂತ ಫಿಕ್ಸ್ ಆಗಿದೆ. ಏನೋ ಹೆಚ್ಚು ಕಮ್ಮಿ ಆಗಿದೆ, ಅದನ್ನು ಸರಿ ಮಾಡುತ್ತೇವೆ. ಯಾರೂ ಗಾಬರಿ ಪಡಬೇಕಿಲ್ಲ. ಯಾರು ವೈರಲ್ ಮಾಡಿದ್ರೂ ಏನು ಇಲ್ಲ. ಕೇಂದ್ರ ಸರ್ಕಾರ ಕೊಡದೇ ಹೋದ್ರು, ನಾವು 5 ಸಾವಿರವರೆಗೆ ಕೊಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಈಗಾಗಲೇ ಶುರು ಮಾಡಿದ್ದೇವೆ ಎಂದು ತಿಳಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಯ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಧಿಕಾರಿಗಳು ಅಲ್ಲ, ಕೆಲವು ಅಕೌಂಟ್ಗಳು ಸರಿ ಇಲ್ಲ. ಕೆಲವು ಬ್ಯಾಂಕ್ಗಳಲ್ಲಿ ಅಕೌಂಟ್ಗಳು ಲೋನ್ಗೆ ಅಟ್ಯಾಚ್ ಆಗಿರೋದೆಲ್ಲ ದಾಖಲೆಗಳಿವೆ. ಅವುಗಳನ್ನ ವೆರಿಫಿಕೇಷನ್ ಮಾಡುತ್ತಿದ್ದೇವೆ ಎಂದರು.
