ಬೆಂಗಳೂರು: ಇಲ್ಲಿನ ರಾಜಾಜಿನಗರದಲ್ಲಿ (Rajajinagar) ಒಂದೇ ಕುಟುಂಬದ ಏಳು ಮಂದಿಯ ಬರ್ಬರ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಒಂದು ಹೊರಬಂದಿದೆ. ಕೊಲೆ ಬಳಿಕ ಮೃತರ ಮೊಬೈಲ್ಗೆ ಬಂದ ಕರೆಗಳಿಗೆ ಹಂತಕ, ಬಾಲಕನ ಮೂಲಕ ಮಾತನಾಡಿಸಿದ್ದಾನೆ ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಏಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಲ್ಲಾ ಮೃತದೇಹಗಳನ್ನ ಪತ್ತೆಹಚ್ಚಿ ಆರೋಪಿಯನ್ನ ವಿಚಾರಣೆ ನಡೆಸ್ತಿದ್ದಾರೆ. ಆರಂಭದಲ್ಲೇ ಪ್ರಕರಣ ಬೆಳಕಿಗೆ ಬಂದಾಗ ಆರೋಪಿ ಕೊಲೆ ಮಾಡಿದ ಬಳಿಕ ಎಲ್ಲರ ಮೊಬೈಲ್ಗಳನ್ನ ತನ್ನ ಬಳಿಯೇ ಇರಿಸಿಕೊಂಡು ಅವುಗಳಿಗೆ ಬಂದ ಫೋನ್, ಮೆಸೇಜ್ಗಳಿಗೆ ತಾನೇ ಉತ್ತರಿಸುತ್ತಿದ್ದ ಎಂದು ಗೊತ್ತಾಗಿತ್ತು. ಶಿವಕುಮಾರ್ ಮತ್ತು ದಿವ್ಯ ದಂಪತಿಯನ್ನ ಕೊಲೆ ಮಾಡಿದ ಬಳಿಕ ಅವರ ಪುತ್ರ ಪುನೀತ್ನ ಉಳಿಸಿಕೊಂಡು ಆತನ ಮೂಲಕ ಫೋನ್ಗಳಿಗೆ ಮಾತನಾಡಿಸ್ತಿದ್ದ. ಬಳಿಕ ಆ ಮಗುವನ್ನ ಕೊಲೆ ಮಾಡಿದ್ದ. ಅದಾದ ಬಳಿಕ ಶಂಕರ್ ಮತ್ತು ನಳಿನಿ ದಂಪತಿಯನ್ನ ಕೊಲೆ ಮಾಡಿ ಅವರ ಪುತ್ರ ಯತಿನ್ ಮೂಲಕ ಮಾತನಾಡಿಸಿದ್ದ. ಸದ್ಯ ಈ ನಡುವೆ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದ. ಇದೀಗ ಸಂಬAಧಿಕರ ಜೊತೆ ಯತಿನ್ ಮಾತನಾಡಿರೋ ಆಡಿಯೋ ಬಹಿರಂಗವಾಗಿದೆ.ಇದನ್ನೂ ಓದಿ: Bengaluru 7 Murder | ಸೇಲಂ, ನಂದಿಬೆಟ್ಟದ ಬಳಿಕ ಈಗ ಬೆಂಗಳೂರಲ್ಲಿ ಮಹಜರು
ಆರೋಪಿ ಇಂದುಶೇಖರ್, ಯತೀನ್ನನ್ನು ತನ್ನೊಂದಿಗೆ ಕರೆದೊಯ್ದ ಬಳಿಕ ಸಂಬಂಧಿಕರ ಕರೆ ಬಂದಾಗ ಬಾಲಕನ ಕೈಗೆ ಫೋನ್ ಕೊಟ್ಟು ಮಾತನಾಡಿಸಿದ್ದಾನೆ. ಈ ವೇಳೆ ಅಪ್ಪ-ಅಮ್ಮ ಎಲ್ಲಿ ಎಂದು ಕೇಳಿದಾಗ ಟ್ರಿಪ್ಗೆ ಬಂದಿದ್ದೇವೆ ಎಂದು ಬಾಲಕನ ಬಾಯಲ್ಲಿ ಹೇಳಿಸಿದ್ದಾನೆ. ಕುಟುಂಬದ ಸದಸ್ಯರು ಒಬ್ಬೊಬ್ಬರಾಗಿ ಸಂಪರ್ಕಕ್ಕೆ ಸಿಗದಿದ್ದಾಗ ಸಂಬಂಧಿಕರು ಮೃತರ ಮೊಬೈಲ್ಗಳಿಗೆ ಪದೇಪದೇ ಕರೆ ಮಾಡುತ್ತಿದ್ದರು. ಯತೀನ್ ತಾಯಿ ನಳಿನಿಗೂ ಕರೆ ಮತ್ತು ಮೆಸೇಜ್ ಮಾಡುತ್ತಿದ್ದರು. ಆದರೆ ಸಂಬಂಧಿಕರ ಕರೆಗಳಿಗೆ ಉತ್ತರಿಸುತ್ತಿದ್ದದ್ದು ಆರೋಪಿ ಇಂದುಶೇಖರ್. ಅನುಮಾನ ಬಾರದಂತೆ ತಾನೇ ಉತ್ತರಿಸುತ್ತಿದ್ದ ಆರೋಪಿ, ಕೆಲವೊಮ್ಮೆ ಬಾಲಕ ಯತೀನ್ ಕೈಗೆ ಫೋನ್ ಕೊಟ್ಟು ಮಾತನಾಡಿಸಿದ್ದಾನೆ.
ಈ ಆಡಿಯೋದಲ್ಲಿ ಯತೀನ್ ಸಂಬಂಧಿಕರ ಜೊತೆ ಮಾತನಾಡಿರುವುದು ಕಂಡುಬಂದಿದ್ದು. ಈ ವೇಳೆ ನಳಿನಿ ಜೊತೆ ಒಮ್ಮೆಯಾದರೂ ಮಾತನಾಡಿಸು, ಸಮಾಧಾನವಾಗುತ್ತದೆ ಎಂದು ಸಂಬಂಧಿಕರು ಬೇಡಿಕೊಂಡಿದ್ದಾರೆ. ಕನಿಷ್ಠ ಆಕೆಯ ತಾಯಿ ತುಂಗಮ್ಮ ಅವರ ಬಳಿಯಾದರೂ ಮಾತನಾಡಿಸು, ಅವರು ತುಂಬಾ ಕುಗ್ಗಿಹೋಗಿದ್ದಾರೆ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿರುವ ಯತೀನ್, ತಾವು ಟ್ರಿಪ್ಗೆ ಬಂದಿದ್ದೇವೆ, ಅಪ್ಪ-ಅಮ್ಮ ಬಸ್ನಲ್ಲಿದ್ದಾರೆ, ಬಸ್ನಲ್ಲಿ ಮಾತನಾಡಲು ಆಗುವುದಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ, ಟ್ರಿಪ್ ಮುಗಿಸಿ ಬರಲು ಮೂರು ತಿಂಗಳು ಆಗುತ್ತದೆ, ಬಸ್ ಹತ್ತಲು ಕರೆಯುತ್ತಿದ್ದಾರೆ, ನಾನು ಹೋಗಬೇಕು ಎಂದು ಮಾತನಾಡಿದ್ದಾನೆ.
ಇನ್ನು ಇದೇ ಮಾತುಕತೆಯಲ್ಲಿ ಕೊಲೆಯಾಗಿದ್ದ ಬಾಲಕ ಪುನೀತ್ ಬಗ್ಗೆಯೂ ಸಂಬಂಧಿಕರು ವಿಚಾರಿಸಿದ್ದಾರೆ. ಅದಕ್ಕೆ ಪುನೀತ್ ಕೂಡ ನಮ್ಮ ಜೊತೆ ಇದ್ದಾನೆ, ಎಲ್ಲರೂ ಬಸ್ನಲ್ಲಿದ್ದಾರೆ ಎಂದು ಯತೀನ್ ಉತ್ತರಿಸಿದ್ದಾನೆ. ಅಂದರೆ, ಕುಟುಂಬದ ಸದಸ್ಯರ ಹತ್ಯೆಯಾಗಿರುವ ವಿಚಾರ ಸಂಬಂಧಿಕರಿಗೆ ತಿಳಿಯದಂತೆ ಟ್ರಿಪ್ ಮತ್ತು ಬಸ್ ಪ್ರಯಾಣದ ಕಥೆಯನ್ನು ಹೇಳಿಸಿ ಆರೋಪಿ ಇಂದುಶೇಖರ್ ಬಾಲಕನಿಂದ ಮಾತನಾಡಿಸಿದ್ದಾನೆ ಎಂಬುದು ಆಡಿಯೋದಿಂದ ಬಯಲಾಗಿದೆ. ಸದ್ಯ ಈ ಆಡಿಯೋಗಳನ್ನು ಸಂಬಂಧಿಕರು ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ಆಡಿಯೋಗಳ ಸತ್ಯಾಸತ್ಯತೆ ಹಾಗೂ ಹಿನ್ನೆಲೆಯನ್ನು ಪರಿಶೀಲನೆ ಮಾಡುತ್ತಿದ್ದು, ಏಳು ಕೊಲೆ ಪ್ರಕರಣ ಸಂಬಂಧ ಇನ್ನೂ ಏನೆಲ್ಲಾ ಮಾಹಿತಿಗಳು ಹೊರಬೀಳಲಿವೆ ಕಾದು ನೋಡಬೇಕಿದೆ.ಇದನ್ನೂ ಓದಿ: 7 ಜನರ ಭೀಕರ ಹತ್ಯೆಗೆ ಮಗಳ ಸಾಥ್ – ಅಪ್ರಾಪ್ತೆಯಾಗಿದ್ದವಳಿಗೆ ಈಗ 18 ವರ್ಷ
