– ಕನ್ನಡ ಬಾವುಟದಿಂದ ಕುತ್ತಿಗೆ ಬಿಗಿದು ಹತ್ಯೆ
– ತಾಯಿ, ಪ್ರಿಯಕರ ಸೇರಿ 6 ಮಂದಿ ಅರೆಸ್ಟ್
ಬೆಳಗಾವಿ: ಅನೈತಿಕ ಸಂಬಂಧಕ್ಕೆ (Illicit Relationship) ಅಡ್ಡಿಯಾಗಿದ್ದ ಮಗನನ್ನೇ (Son) ಪಾಪಿ ತಾಯಿ (Mother) ಪ್ರಿಯಕರನ ಜೊತೆಗೂಡಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
ಬೆಂಗಳೂರಿನ ಆರ್.ಟಿ ನಗರ ನಿವಾಸಿ ವಿಜಯ್ ನಾರಾಯಣ್ (24) ಕೊಲೆಯಾದ ಯುವಕ. ಕನ್ನಡ ಬಾವುಟದಿಂದ ಕುತ್ತಿಗೆ ಬಿಗಿದು ವಿಜಯ್ ಹತ್ಯೆ ಮಾಡಲಾಗಿದೆ. ರಾಜ್ಯೋತ್ಸವ ದಿನವೇ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು. ಯುವಕನ ಮೊಬೈಲ್ ಕಾಲ್ ಡೀಟೆಲ್ಸ್ ಆಧರಿಸಿ ಮಾಳಮಾರುತಿ ಠಾಣೆ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ಕೊಲೆ ಪ್ರಕರಣ ಪತ್ತೆಹಚ್ಚಿದ್ದಾರೆ. ಈ ವೇಳೆ ಮಗನ ಹತ್ಯೆ ಹಿಂದೆ ತಾಯಿ, ಆಕೆಯ ಪ್ರಿಯಕರ ಮತ್ತು ಸ್ನೇಹಿತರ ಪಾತ್ರ ಬಯಲಾಗಿದೆ. ಇದನ್ನೂ ಓದಿ: ದೇಶದಲ್ಲಿ ಶೇ.39ರಷ್ಟು ಎಥೆನಾಲ್ ಉತ್ಪಾದನೇ ಇಲ್ಲ; ಕಾಂಗ್ರೆಸ್ನವರು ಮೂರ್ಖರು: ಸಚಿವ ಜೋಶಿ ತಿರುಗೇಟು
ಅಚಾನಕ್ ಆಗಿ ಭೇಟಿ ಆದ ಮಹಾರಾಷ್ಟ್ರ ಯುವಕ ರಾಕೇಶ್ ಜೊತೆಗೆ ಬೆಂಗಳೂರು ಮೂಲದ ಮೀನಾ ಸಲುಗೆ ಬೆಳೆಸಿದ್ದರು. ಮೀನಾ ನಾರಾಯಣ್ ಬ್ಯೂಟಿ ಪಾರ್ಲರ್ನಲ್ಲಿ ಮ್ಯಾನೇಜರ್ ಆಗಿದ್ದಳು. ಅಲ್ಲದೇ ಪ್ರಿಯಕರ ರಾಕೇಶನನ್ನೇ ಮೀನಾ ತನ್ನ ಕಾರು ಚಾಲಕನಾಗಿರಿಸಿಕೊಂಡಿದ್ದಳು. ಇಬ್ಬರ ಅನೈತಿಕ ಸಂಬಂಧ ಗೊತ್ತಾಗಿ ಮೀನಾ ಪುತ್ರ ವಿಜಯ್ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲ ದಿನಗಳಿಂದ ವಿಜಯ್ಗೆ ಗೊತ್ತಾಗದ ಹಾಗೇ ಅನೈತಿಕ ಸಂಬಂಧ ಮುಂದುವರೆಸಿದ್ದರು. ಅನೈತಿಕ ಸಂಬಂಧಕ್ಕೆ ವಿಜಯ್ ಅಡ್ಡಿ ಆಗುತ್ತಾನೆಂದು ಕೊಲೆಗೆ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: 13 ವರ್ಷಗಳ ದಾಂಪತ್ಯ ಜೀವನ ಅಂತ್ಯ! – ಮೂರನೇ ಪತ್ನಿಯಿಂದಲೂ ಪವನ್ ಕಲ್ಯಾಣ್ ದೂರ!
ರಾಜ್ಯೋತ್ಸವ ನೋಡಿ ಬರೋಣ ಎಂದು ಹಂತಕರು ವಿಜಯ್ನನ್ನು ಬೆಳಗಾವಿಗೆ ಕರೆತಂದಿದ್ದರು. ತನ್ನೂರಿನ ನಾಲ್ವರು ಸ್ನೇಹಿತರ ಜೊತೆಗೂಡಿ ಮೀನಾ ಹಾಗೂ ರಾಕೇಶ್ ವಿಜಯ್ನನ್ನು ಹತ್ಯೆಗೈದಿದ್ದಾರೆ. ಪ್ರಕರಣ ಸಂಬಂಧ ಮೀನಾ, ರಾಕೇಶ್ ಮತ್ತು ಆತನ ಸ್ನೇಹಿತರಾದ ಸಚಿನ್, ಮನೋಜ್, ತಮ್ಮಣ್ಣ, ಏಕನಾಥ ಎಂಬವರನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೈಟೆಕ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ರೇಡ್ – ನಾಲ್ವರ ವಿರುದ್ಧ FIR; ಮೂವರು ಅರೆಸ್ಟ್

