ಮೈಸೂರು: ರಾಜ ವಂಶದ ಆಸ್ತಿ ಪಡೆದುಕೊಳ್ಳುವ ವಿಚಾರದಲ್ಲಿ ಶಾಸಕಾಂಗ, ಕಾರ್ಯಾಂಗ ಎರಡು ಕೂಡ ದುರಪಯೋಗ ಆಗಿವೆ. ಆಸ್ತಿ ರಾಜವಂಶಕ್ಕೆ ಸೇರಿದ್ದೋ, ಸರ್ಕಾರಕ್ಕೆ (Government) ಸೇರಿದ್ದೋ ಎಂಬುದನ್ನು ಕೋರ್ಟ್ (Court) ತೀರ್ಮಾನಿಸಲಿದೆ ಎಂದು ಸಂಸದ ಯದುವೀರ್ ಒಡೆಯರ್ (Yaduveer Wadiyar) ತಿಳಿಸಿದ್ದಾರೆ.
ಮೈಸೂರಿನಲ್ಲಿ (Mysuru) ಸುದ್ದಿಗೋಷ್ಠಿ ನಡೆಸಿದ ಅವರು, ಆಸ್ತಿಯ ಬಗ್ಗೆ ದಾರಿಯಲ್ಲಿ ನಿಂತು ಚರ್ಚೆ ಮಾಡಿದರೆ ಏನೂ ಪ್ರಯೋಜನವಿಲ್ಲ. ನ್ಯಾಯಾಲಯ ಎಲ್ಲಾ ತೀರ್ಪು ನೀಡುತ್ತದೆ. ಮೊದಲು ತೀರ್ಪುಗಳು ಬರಲಿ. ಆಸ್ತಿಗಳ ವಿಚಾರ ಬೀದಿಯಲ್ಲಿ ಚರ್ಚೆ ಮಾಡುವದು ಅಪ್ರಸ್ತುತ ಎಂದಿದ್ದಾರೆ. ಇದನ್ನೂ ಓದಿ: ಮೈಸೂರು | ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ vs ಬಿಜೆಪಿ – ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಆರೋಪ
ಅರಮನೆ ಮತ್ತು ಸರ್ಕಾರದ ನಡುವೆ ಒಪ್ಪಂದ ಆಗಿದ್ದಾಗ ನಾನು ಬಾಲಕನಾಗಿದ್ದೆ. ಅದರ ಬಗ್ಗೆ ನನಗೆ ಸಂಪೂರ್ಣ ವಿವರ ಇಲ್ಲ. ಎಲ್ಲಾ ದಸರಾದಲ್ಲೂ ಅವ್ಯವಸ್ಥೆ ಇದ್ದಿದ್ದೇ. ಮುಂದಿನ ದಿನಗಳಲ್ಲಿ ಇದನ್ನು ಸುಧಾರಿಸಿಕೊಳ್ಳೋಣ. ಇಡೀ ವಿವಾದದ ಬಗ್ಗೆ ನಾನು ಹೆಚ್ಚು ಮಾತಾಡುವುದಿಲ್ಲ. ಈಗ ದಸರಾ ಮುಗಿದಿದೆ, ಮುಂದೆ ಸಾಗಿದ್ದೇವೆ, ಅದನ್ನೇ ಮತ್ತೇ ಮತ್ತೆ ಚರ್ಚೆ ಮಾಡುತ್ತಾ ಕೂರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಎಥೆನಾಲ್ ಜಟಾಪಟಿ ವಿಚಾರವಾಗಿ, ಬೆಲೆ ಏರಿಕೆ ವಿಚಾರ ಡೈವರ್ಟ್ ಮಾಡಲು ಎಥೆನಾಲ್ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಈ ವಿಚಾರ ಎಳೆದು ತಂದಿದ್ದಾರೆ. ಈ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಕೊಡಲಿ. ಸುಮ್ಮನೆ ಆರೋಪಗಳನ್ನು ಮಾಡಬಾರದು ಎಂದಿದ್ದಾರೆ. ಇದನ್ನೂ ಓದಿ: ನನ್ನ ಸಿದ್ದರಾಮಯ್ಯ ನಡುವೆ ಯಾವುದೇ ಮುನಿಸಿಲ್ಲ: ಡಿ.ಕೆ ಶಿವಕುಮಾರ್
