ರಾಜ್ಯದಲ್ಲಿ ಹಿಂಗಾರು ಮಳೆಯ ಪ್ರಭಾವ ಮುಂದುವರಿಯುವ ಸಾಧ್ಯತೆಯಿದ್ದು, ನವೆಂಬರ್ 10ರಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 30-20
ಮಂಗಳೂರು: 32-25
ಶಿವಮೊಗ್ಗ: 30-20
ಬೆಳಗಾವಿ: 30-18
ಮೈಸೂರು: 30-20
ಮಂಡ್ಯ: 30-20
ಮಡಿಕೇರಿ: 26-18
ರಾಮನಗರ: 30-20
ಹಾಸನ: 29-19
ಚಾಮರಾಜನಗರ: 29-20
ಚಿಕ್ಕಬಳ್ಳಾಪುರ: 29-19
ಕೋಲಾರ: 29-19
ತುಮಕೂರು: 30-20
ಉಡುಪಿ: 31-25
ಕಾರವಾರ: 32-24
ಚಿಕ್ಕಮಗಳೂರು: 28-19
ದಾವಣಗೆರೆ: 31-21
ಹುಬ್ಬಳ್ಳಿ: 31-19
ಚಿತ್ರದುರ್ಗ: 30-20
ಹಾವೇರಿ: 31-20
ಬಳ್ಳಾರಿ: 32-22
ಗದಗ: 32-20
ಕೊಪ್ಪಳ: 32-21
ರಾಯಚೂರು: 32-21
ಯಾದಗಿರಿ: 33-20
ವಿಜಯಪುರ: 32-18
ಕಲಬುರಗಿ: 34-20
ಬಾಗಲಕೋಟೆ: 32-19






