– ಕಣ್ಣಿಗೆ ಹಾನಿಯಾಗಿ ಮಿಂಟೋ, ನಾರಾಯಣದಲ್ಲಿ ಚಿಕಿತ್ಸೆ
ಬೆಂಗಳೂರು: ಬೆಳಕಿನ ಹಬ್ಬ ನಿಮ್ಮ ಬದುಕನ್ನೇ ಕತ್ತಲೆ ಮಾಡಬಹುದು ಎಚ್ಚರ. ಪಟಾಕಿ ಸಿಡಿಸುವುದಾಗಲಿ, ಪಟಾಕಿ ಸಿಡಿಸುವುದನ್ನ ನೋಡುವುದಕ್ಕೂ ಮುನ್ನ ಎಚ್ಚರ. ದೆಹಲಿಯಲ್ಲಿ ಪಟಾಕಿ (Fire Crcakers) ಸಿಡಿದು ಓರ್ವ ಬಾಲಕ ಸಾವನ್ನಪ್ಪಿದರೆ ಬೆಂಗಳೂರಿನಲ್ಲಿ (Bengaluru) ಪಟಾಕಿ ಸಿಡಿತದಿಂದ ಗಾಯಗೊಂಡ ಪ್ರಕರಣಗಳು 44ಕ್ಕೆ ಏರಿಕೆ ಕಂಡಿದೆ. ಕೆಲ ಪ್ರಕರಣಗಳಲ್ಲಿ ಬಾಲಕರ ಕಣ್ಣಿಗೆ ಗಾಯ ಆಗಿ ಕಣ್ಣು ದೃಷ್ಣಿ ಬರುವುದೇ ಡೌಟ್ ಎನ್ನಲಾಗುತ್ತಿದೆ.
ಜನರ ಬದುಕಲ್ಲಿ ದೀಪಾವಳಿ (Deepavali) ಹಬ್ಬ ಬೆಳಕನ್ನ ಕರುಣಿಸಲಿ ಅಂತಾ ಆಚರಿಸಿದರೆ ಇದೇ ಬೆಳಕಿನ ಹಬ್ಬ ಕೆಲವರ ಬಾಳಲ್ಲಿ ಕತ್ತಲೆ ಆವರಿಸುವಂತೆ ಮಾಡಿದೆ. ಪಟಾಕಿ ಸಿಡಿಸುವಾಗ ಎಚ್ವರ ಇರಲಿ ಕಣ್ಣಿಗೆ ಹಾನಿಯಾಗುತ್ತೆ, ಕಣ್ಣಿನ ದೃಷ್ಟಿ ಕಳೆದುಕೊಳ್ಳಬೇಕಾಗುತ್ತೆ ಅಂತಾ ಎಷ್ಟು ಎಚ್ಚರಿಸಿದರೂ ಜನ ಎಚ್ಚೆತ್ತುಕೊಂಡಿಲ್ಲ. ಪ್ರತಿ ವರ್ಷ ಕೂಡ ಪಟಾಕಿ ಸಿಡಿತದಿಂದ ಅವಘಡಗಳು ಸಂಭವಿಸುತ್ತಿದ್ದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಬಾರಿ ಕೂಡ ಪಟಾಕಿ ಸಿಡಿತದಿಂದ ಅವಘಡಗಳು ಸಂಭವಿಸಿವೆ. ಇದನ್ನೂ ಓದಿ: 169 ರೂ.ಗೆ ಸಿಗುತ್ತೆ ಪ್ಯೂರ್ ಪೆಟ್ರೋಲ್ – ದಿನಕ್ಕೆ 400 ಲೀ. ಎಥೆನಾಲ್ ಮಿಶ್ರಣ ಇಲ್ಲದ ಪೆಟ್ರೋಲ್ ಸೇಲ್
ದೆಹಲಿಯಲ್ಲಿ ಪಟಾಕಿ ಸಿಡಿದು 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ದೆಹಲಿಯ ನರೆಲಾ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಕೈಯಲ್ಲೇ ಪಟಾಕಿ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿದ್ದಾರೆ. ಸ್ಫೋಟಗೊಂಡ ಪಟಾಕಿ ಯಾವ ಪ್ರಕಾರದ್ದು ಎಂಬ ಬಗ್ಗೆ ಪೊಲೀಸರಿಂದ ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: ದೀಪಾವಳಿಯಂದು ಪ್ರತ್ಯೇಕ ಅಗ್ನಿ ಅವಘಡ – 2 ತಿಂಗಳ ಮಗು ಸೇರಿ 12 ಮಂದಿ ಸಾವು
ಇನ್ನೂ ಬೆಂಗಳೂರಿನಲ್ಲಿ ಪಟಾಕಿ ಸಿಡಿತ ಪ್ರಕರಣಗಳು 44ಕ್ಕೆ ಏರಿಕೆ ಆಗಿವೆ. ನಾರಾಯಣ ನೇತ್ರಾಲಯದಲ್ಲಿ ಬರೋಬ್ಬರಿ 25 ಪ್ರಕರಣ, ಮಿಂಟೋ ಆಸ್ಪತ್ರೆ 16 ಪ್ರಕರಣ, ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ 2 ಪ್ರಕರಣ, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಮಿಂಟೋ ಆಸ್ಪತ್ರೆಗೆ ದಾಖಲಾದ ಗಾಯಾಳುಗಳ ಸಂಖ್ಯೆ ಏರಿಕೆ ಆಗಿದೆ. ಭಾನುವಾರ ರಾತ್ರಿ ಮಿಂಟೋದಲ್ಲಿ 16 ಪ್ರಕರಣಗಳು ದಾಖಲಾಗಿದೆ. ಈ ಪೈಕಿ 10 ಜನರಿಗೆ ತೀವ್ರ ಥರದ ಗಾಯ ಆಗಿದೆ. ಇಬ್ಬರಿಗೆ ಶಸ್ತ್ರ ಚಿಕಿತ್ಸೆ ಬೇಕಾಗಿದೆ. 4 ಜನರಿಗೆ ಸಣ್ಣ ಗಾಯ ಆಗಿದೆ. 14 ಜನರ ಪೈಕಿ 12 ಜನರು ನೋಡಿ ನಿಂತವರು. ಇಬ್ಬರು ಮಾತ್ರ ಪಟಾಕಿ ಹೊಡೆದು ಗಾಯ ಮಾಡಿಕೊಂಡವರು. 13 ಜನರು 40 ವರ್ಷದಿಂದ ಕೆಳಗಿರುವವರು. ಒಬ್ಬರು ಮಾತ್ರ 40 ವರ್ಷ ಮೇಲ್ಪಟ್ಟವರು. ಬಿಜಿಲಿ ಪಟಾಕಿ ಸಿಡಿದು ಜಾಸ್ತಿ ಅವಘಡ ಆಗಿದೆ. 14 ಜನರಲ್ಲಿ 3 ಮಹಿಳೆಯರು, 11 ಜನರು ಪುರುಷರಿಗೆ ಗಾಯ ಆಗಿದೆ. ಇದನ್ನೂ ಓದಿ: ಗುಡ್ನ್ಯೂಸ್ – ಇಂದಿನಿಂದ ಕ್ಯಾನ್ಸರ್ ಔಷಧಿಗಳ ದರ ಭಾರೀ ಇಳಿಕೆ!
ಇನ್ನೂ ಬಾಲಕನೊಬ್ಬನ ಬಲಗಣ್ಣಿಗೆ ಭಾರೀ ಹಾನಿ ಆಗಿದೆ. ಆಪರೇಷನ್ ಆದ ಮೇಲೆ ದೃಷ್ಣಿ ಬರುತ್ತಾ ಇಲ್ವ ಅಂತಾ ಗೊತ್ತಾಗಲಿದೆ. ಪಟಾಕಿ ಹೊಡೆಯುವವರು ಬೇರೆಯವರ ಬಗ್ಗೆಯೂ ಯೋಚನೆ ಮಾಡಬೇಕು. ಇವತ್ತೂ ಕೂಡ ಪಟಾಕಿ ಸಿಡಿಸುತ್ತಾರೆ. ಜನರು ಎಚ್ಚರಿಕೆಯಿಂದ ಪಟಾಕಿ ಸಿಡಿಸಲು ಡಾ. ಸುರೇಶ್ ಬಾಬು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಾಲಿನ ದರ ಏರಿಕೆ ಬೆನ್ನಲ್ಲೇ ಪಶು ಆಹಾರ ದರವೂ ಏರಿಕೆ – ಕೊಟ್ಟು ಕಿತ್ತುಕೊಂಡ ಸರ್ಕಾರ.. ಅಂತಾ ರೈತರ ಆಕ್ರೋಶ..!
