ರಾಯಚೂರು: ನರಕ ಚತುರ್ದಶಿ (Naraka Chaturdashi) ಹಿನ್ನೆಲೆ ಮಂತ್ರಾಲಯದ (Mantralaya) ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆಗಳನ್ನ ನೆರವೇರಿಸಲಾಯಿತು.
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಮೂಲ ರಾಮದೇವರಿಗೆ ಕಾರ್ತಿಕ ಮಂಗಳಾರತಿ ನೆರವೇರಿಸಿ, ನಂತರ ಗೋಪೂಜೆ, ತುಳಸಿ ಪೂಜೆ ನೆರವೇರಿಸಿದರು. ಶ್ರೀ ರಾಯರ ಮೂಲ ಬೃಂದಾವನ ಹಾಗೂ ಮಠದ ಇತರ ಬೃಂದಾವನಗಳಿಗೆ ಸ್ವಾಮಿಜಿ ತೈಲಾಭ್ಯಂಜನವನ್ನು ನೆರವೇರಿಸಿದರು. ಬಳಿಕ ಪವಿತ್ರ ನಾರೀಕೃತ ನೀರಾಜನಂ ಸಮಾರಂಭವನ್ನು ನೆರವೇರಿಸಲಾಯಿತು. ಮಹಿಳೆಯರು ಶ್ರೀಗಳಿಗೆ ಆರತಿ ಬೆಳಗಿದರು. ಇದನ್ನೂ ಓದಿ: ಪೆಟ್ರೋಲ್ ಬಂಕ್ನವನೇ ಎಥೆನಾಲ್ ಮಿಕ್ಸ್ ಮಾಡಿದ್ರೆ ನಾವೇನ್ ಮಾಡೋದು? – ಆರ್. ಅಶೋಕ್
ನಾನಾ ಪವಿತ್ರ ವಿಧಿಗಳ ಸರಣಿಯ ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಭಕ್ತರಿಗೆ ಅನುಗ್ರಹ ಸಂದೇಶ ನೀಡಿ ಭಕ್ತರನ್ನು ಆಶೀರ್ವದಿಸಿದರು. ಇದನ್ನೂ ಓದಿ: ಜಪಾನ್ನಲ್ಲಿ 5.7 ತೀವ್ರತೆಯ ಭೂಕಂಪ – 22 ಮಂದಿಗೆ ಗಾಯ, ಕಟ್ಟಡಗಳ ಗಾಜು ಪುಡಿಪುಡಿ

