ಬೆಂಗಳೂರು: ಪೆಟ್ರೋಲ್ ಬಂಕ್ನವನೇ ಎಥೆನಾಲ್ ಮಿಕ್ಸ್ (Ethanol Mix) ಮಾಡಿದ್ರೆ ನಾವೇನ್ ಮಾಡೋದು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನೆ (R Ashok) ಮಾಡಿದ್ದಾರೆ.
20%ಗಿಂತ ಹೆಚ್ಚು ಎಥೆನಾಲ್ ಮಿಶ್ರಣ ವಿಚಾರವಾಗಿ ಮಾತನಾಡಿ, ನಮ್ಮ ಬಳಿ ಎಥೆನಾಲ್ ಚೆಕ್ ಮಾಡೋ ಹೈ ಕ್ವಾಲಿಟಿ ಉಪಕರಣ ಎಲ್ಲಿದೆ? ಪೆಟ್ರೋಲ್ ಬಂಕ್ನವನೇ ಎಥೆನಾಲ್ ಮಿಕ್ಸ್ ಮಾಡಿದ್ರೆ ಏನು ಮಾಡೋದು? ಹೆಚ್ಚಿನ ಎಥೆನಾಲ್ ಮಿಕ್ಸ್ ಮಾಡಿರೋದಕ್ಕೆ ಗ್ಯಾರಂಟಿ? ಹಬ್ಬ ಇದೆ ಚೆಕ್ ಮಾಡೋಕೆ ಆಗಲ್ಲ ಅಂತಾರೆ. ಗೋಕುಲಾಷ್ಟಮಿಗೂ ಮುಲ್ಲಾ ಸಾಬಿಗೂ ಏನು ಸಂಬಂಧ. ಸರ್ಕಾರದ ಬಳಿ ಅಂಕಿ ಅಂಶ ಇದ್ದರೆ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಕುಟುಂಬ ಸಮೇತರಾಗಿ ಶಕ್ತಿ ಸ್ವರೂಪಿಣಿ ಹಾಸನಾಂಬೆ ದೇವಿ ದರ್ಶನ ಪಡೆದ ಡಿಕೆಶಿ
ಹಾಲು ತಮಿಳುನಾಡಿನಿಂದ ಚಿಕ್ಕಪೇಟೆಗೆ ಬರ್ತಿದೆ. ಅಕ್ಕಿಗೆ ಕಲ್ಲು ಬೆರೆಸ್ತಿದ್ದಾರೆ. ಅಕ್ರಮವಾಗಿ ಡ್ರಗ್ ಫ್ಯಾಕ್ಟರಿನೇ ಇಟ್ಟಿದಾರೆ ಮೊದಲು ಅದನ್ನ ಪರಿಶೀಲಿಸಿ. ಪೆಟ್ರೋಲ್ಗೆ ಎಥೆನಾಲ್ ಎಷ್ಟು ಮಿಕ್ಸ್ ಮಾಡಬೇಕು ಅನ್ನೋದು ಕೇಂದ್ರ ನಿರ್ಧಾರ ಮಾಡುತ್ತದೆ. ದೇಶಕ್ಕೆ ಉಳಿತಾಯ ಮಾಡೋಕೆ ಎಥೆನಾಲ್ ಮಿಕ್ಸ್ ಮಾಡಲಾಗುತ್ತೆ ಎಂದು ಸಮರ್ಥಿಸಿಕೊಂಡಿದ್ದಾರೆ.
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನ ನೋಡಿ. ಕಾವೇರಿ ನೀರು ಮಲೀನ ಆಗಿದೆ. ಈ ಕುರಿತು ತಮಿಳುನಾಡು ವರದಿ ಬಿಡುಗಡೆ ಮಾಡಿದೆ ಅದನ್ನ ಮೊದಲು ಸರಿಪಡಿಸಿಕೊಳ್ಳಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.ಇದನ್ನೂ ಓದಿ: ಹಾಸನ ಡಿಸಿ, ಶಿವಲಿಂಗೇಗೌಡ ವಿರುದ್ಧ ಲಂಚಾರೋಪ – ಕೇಂದ್ರ ಸಚಿವ ಕುಮಾರಸ್ವಾಮಿ ಬಾಂಬ್
ಗೃಹಲಕ್ಷ್ಮಿ ಬಾಕಿ ಹಣ ಕೊಡಲೇಬೇಕು
ಗೃಹಲಕ್ಷ್ಮೀ ಯೋಜನೆ ಕುರಿತು ಕೋರ್ಟ್ಗೆ ಅಫಿಡವಿಟ್ ಹಾಕಿದ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಪದವಿ ಜನ ಕೊಟ್ಟಿರೋ ಭಿಕ್ಷೆ. ಚುನಾವಣೆ ಮುಂಚೆ ಅಕ್ಕ ಅಮ್ಮ 2 ಸಾವಿರ ಕೊಡ್ತೀನಿ ಎಂದು ಹೇಳಿದ್ದಿರಿ. ವೋಟ್ ಹಾಕಿಸಿಕೊಳ್ಳುವಾಗ ಒಂದು, ಓಟ್ ಆದ ಮೇಲೆ ಇನ್ನೊಂದು. ಈ ಸರ್ಕಾರ ಮುಂದಿನ ಒಂದು ವರ್ಷ ಪೂರ್ತಿ ಮಾಡೋ ಗ್ಯಾರಂಟಿ ಇಲ್ಲ. ಸಿದ್ದರಾಮಯ್ಯ ಅವರೇ ಈ ಸರ್ಕಾರಕ್ಕೆ ಹಳ್ಳ ತೋಡ್ತಿದ್ದಾರೆ. ಯಾವಾಗ ಸರ್ಕಾರ ಬಿದ್ದೋಗುತ್ತೋ ಗೊತ್ತಿಲ್ಲ. ಗೃಹಲಕ್ಷ್ಮೀ ನಿಧಿಯ ಬಾಕಿ ಉಳಿಸಿಕೊಂಡಿರುವ 5 ಸಾವಿರ ಹಣ ಕೊಡಲೇ ಬೇಕು. ನಾವು ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡ್ತೀವಿ ಎಂದು ಎಚ್ಚರಿಸಿದ್ದಾರೆ.
