– 15ಕ್ಕೂ ಹೆಚ್ಚು ಮಂದಿ ಗಂಭೀರ
– ಯುವಕನ ಮನೆಯಲ್ಲಿ ಕುಟುಂಬಸ್ಥರ ಶವ ಪತ್ತೆ
ವಾರ್ಸಾ: ದಕ್ಷಿಣ ಪೋಲೆಂಡ್ನ ಕ್ರಾಕೋವ್ (Krakow) ನಗರದಲ್ಲಿ ಶನಿವಾರ ಮಧ್ಯಾಹ್ನ ಮಿಲಿಟರಿ ಬಟ್ಟೆ ಧರಿಸಿದ್ದ 25 ವರ್ಷದ ಪೋಲಿಷ್ ಯುವಕನೊಬ್ಬ, ಕಾರ್ನಲ್ಲಿ ಬಂದು ಮನಬಂದಂತೆ ಗುಂಡು ಹಾರಿಸಿದ್ದಾನೆ. ದಾಳಿಯಲ್ಲಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೊಲೀಸರಿಂದಳೂ ಶೂಟೌಟ್ ನಡೆದಿದ್ದು, ಯುವಕನ ವಶಕ್ಕೆ ಪಡೆದಿದ್ದಾರೆ. ಸದಾ ಪ್ರವಾಸಿಗರಿಂದ ತುಂಬಿರುವ ಕ್ರಾಕೋವ್ನ ಮುಖ್ಯ ಮಾರುಕಟ್ಟೆ ಚೌಕದ ಬಳಿ ಈ ದಾಳಿ ಸಂಭವಿಸಿದೆ.
ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಸಾರ್ವಜನಿಕ ಸ್ಥಳಕ್ಕೆ ನುಗ್ಗಿದ ಯುವಕ, ಕಾರ್ ಒಳಗಿದ್ದುಕೊಂಡೇ ಮನಬಂದಂತೆ ಜನರಿಗೆ ಶೂಟ್ ಮಾಡಿದ್ದಾನೆ. ಘಟನೆಯಲ್ಲಿ ಮೃತರ ಪೈಕಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಗುಂಡಿನ ಸೌಂಡ್ ಕೇಳುತ್ತಿದ್ದಂತೆ ಇಡೀ ಚೌಕದಲ್ಲಿದ್ದ ಜನರು ಪ್ರಾಣಭಯದಿಂದ ಓಡಿಹೋಗಿದ್ದಾರೆ. ಸುತ್ತಮುತ್ತಲಿನ ರೆಸ್ಟೋರೆಂಟ್ಗಳು, ಕೆಫೆಗಳು ಹಾಗೂ ಅಲ್ಲೇ ಇದ್ದ ಪೊಲೀಸ್ ಸ್ಟೇಷನ್ ಒಳಗೆ ನುಗ್ಗಿ ಜನರು ಪ್ರಾಣ ಉಳಿಸಿಕೊಂಡಿದ್ದಾರೆ. ರಕ್ತಸಿಕ್ತ ನೆಲದ ಮೇಲೆ ಬಿದ್ದಿರುವ ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಲು ಪರದಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ತಕ್ಷಣ ದಾಳಿಕೋರನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ನಡೆದ ಶೂಟೌಟ್ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗುಂಡೇಟು ಬಿದ್ದಿದೆ. ಇದನ್ನೂ ಓದಿ: ದೀಪೋತ್ಸವದ ಬೆಳಕಿನಲ್ಲಿ ಕಂಗೊಳಿಸಿದ ಅಯೋಧ್ಯೆ – 36 ಲಕ್ಷ ದೀಪಗಳನ್ನು ಬೆಳಗಿಸಿ ವಿಶ್ವ ದಾಖಲೆ
ಯುವಕನ ಮನೆಯಲ್ಲಿ ಕುಟುಂಬಸ್ಥರ ಶವ ಪತ್ತೆ
ದಾಳಿಕೋರನ ಕಾರಿನಲ್ಲಿ ಭಾರಿ ಪ್ರಮಾಣದ ಮಿಲಿಟರಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯಲ್ಲಿ ಈತ ತೀವ್ರಗಾಮಿ ಹಾಗೂ ಉಗ್ರ ರಾಷ್ಟ್ರೀಯತಾವಾದಿ ಸಿದ್ಧಾಂತಗಳಿಂದ ಪ್ರೇರಿತನಾಗಿದ್ದ ಎಂದು ತಿಳಿದುಬಂದಿದೆ. ಈತನ ಮನೆಯನ್ನು ತಪಾಸಣೆ ಮಾಡಿದಾಗ ಆತನ ಕುಟುಂಬದ ಮೂವರು ಸದಸ್ಯರ ಶವಗಳೂ ಪತ್ತೆಯಾಗಿವೆ.ಇದನ್ನೂ ಓದಿ: ಇಂದು ಹಾಸನಾಂಬ ದೇವಿ ದರ್ಶನಕ್ಕೆ ಸಿಎಂ ಡಿಕೆಶಿ, ಕೇಂದ್ರ ಸಚಿವ ಹೆಚ್ಡಿಕೆ ಆಗಮನ
