ಯಾದಗಿರಿ: ನಿರ್ಮಾಣ ಹಂತದ ಎಕ್ಸ್ಪ್ರೆಸ್ ಹೈವೇಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಯುವಕರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ.
ಯಾದಗಿರಿ (Yadagiri) ಜಿಲ್ಲೆಯ ಶಹಾಪುರ (Shahapura) ತಾಲೂಕಿನ ಇಬ್ರಾಹಿಂ ಡಿಬಿಎಲ್ ಕ್ಯಾಂಪ್ ಬಳಿಯ ಚೆನ್ನೈ-ಸೂರತ್ ಎಕ್ಸ್ಪ್ರೆಸ್ ಹೈವೇಯಲ್ಲಿ ಶುಕ್ರವಾರ (ನ.6) ರಾತ್ರಿ 11:30ರ ವೇಳೆಗೆ ಈ ಭೀಕರ ಅಪಘಾತ ಸಂಭವಿಸಿದೆ. ಮೃತರನ್ನು ಗುರುರಾಜ್ ಚವ್ಹಾಣ್ (35), ರೆಡ್ಡಿ ರಾಠೋಡ್ (33), ಗೋವಿಂದ ಚವ್ಹಾಣ್ (28) ಹಾಗೂ ಕುಮಾರ ರಾಠೋಡ್ (26) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು-ಚೂರಿ ಆರ್ಡರ್! – ಡೆಲಿವರಿ ಬಾಯ್ಸ್ ಜೊತೆ NSUI ಕಾರ್ಯಕರ್ತರು ಪ್ರತ್ಯಕ್ಷ
ಮೃತ ನಾಲ್ವರಲ್ಲಿ ಮೂವರು ಮಲ್ಹಾರ್ ತಾಂಡಾದ ನಿವಾಸಿಗಳಿದ್ದು, ಓರ್ವ ಲಿಂಗೇರಿ ತಾಂಡಾದ ಯುವಕ ಎಂದು ತಿಳಿದುಬಂದಿದೆ. ನಾಲ್ವರು ಯುವಕರು ಕಾರಿನಲ್ಲಿ ಜೇವರ್ಗಿಯಿಂದ ಯಾದಗಿರಿ ಕಡೆಗೆ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದು ರಸ್ತೆ ಪಕ್ಕದ ಗೋಡೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: 16 ವರ್ಷದ ಬಾಲಕಿ ಮೇಲೆ ರೇಪ್ ಆರೋಪ – ಚಿಕ್ಕಪ್ಪ ಅರೆಸ್ಟ್
