-ಬಾಲಕ ಪುನೀತ್ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು
ಬೆಂಗಳೂರು: ಇಲ್ಲಿನ ರಾಜಾಜಿನಗರದ (Rajajinagar) ಭೀಕರ ಏಳು ಜನರ ಕೊಲೆ ಪ್ರಕರಣದ ತನಿಖೆಯಲ್ಲಿ ಆರೋಪಿ ಇಂದುಶೇಖರ್ನ ಕ್ರೂರ ಪ್ಲ್ಯಾನ್ಗಳನ್ನು ಕಂಡು ಪೊಲೀಸರು ದಂಗಾಗಿದ್ದಾರೆ. ಕೊಲೆ ಮಾಡಿದ ಬಳಿಕ ಶವದ ವಾಸನೆ ಹೊರಬಾರದಂತೆ ಹಾಗೂ ಯಾರಿಗೂ ಅನುಮಾನ ಬಾರದಂತೆ ತಡೆಗಟ್ಟಲು ಪ್ರತಿಯೊಂದು ಮೃತದೇಹಕ್ಕೂ 10 ಲೇಯರ್ ಟೇಪ್ ಸುತ್ತಿರುವುದು ಸ್ಪೋಟಕ ಸತ್ಯ ಹೊರಬಿದ್ದಿದೆ.
ನಂದಿಬೆಟ್ಟದಲ್ಲಿ ಪತ್ತೆಯಾದ ಮಗು ಪುನೀತ್ನ ದೇಹಕ್ಕೂ ಇದೇ ರೀತಿ ಟೇಪ್ ಸುತ್ತಿ ವಿಕೃತ ಮೆರೆದಿದ್ದ. ಮನೆ ಕೆಳಭಾಗದಲ್ಲಿ ಅಂಗಡಿಗಳಿದ್ದು, ಆರೋಪಿ ಮೇಲಿನ ಮಹಡಿಯಲ್ಲಿದ್ದ ಕಾರಣ ಹಾಗೂ ರಾತ್ರಿ ವೇಳೆ ಯಾರೂ ಸುಳಿಯದಿದ್ದರಿಂದ ಕೃತ್ಯದ ಸುಳಿವು ಯಾರಿಗೂ ಸಿಕ್ಕಿರಲಿಲ್ಲ. ಮನೆಯಲ್ಲಿದ್ದ ಶವಗಳ ದುರ್ವಾಸನೆ ಹೊರಬಾರದಂತೆ ಎಚ್ಚರ ವಹಿಸಿದ್ದ ಆರೋಪಿ, ಬಳಿಕ ಮುಂಜಾನೆ ಸಮಯದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ. ಹಂತಕನ ಈ ಶಾಕಿಂಗ್ ಐಡಿಯಾಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಇದನ್ನೂ ಓದಿ: Bengaluru Murder Horror | ಸೇಲಂನ ಘಾಟ್ ಕಾಡಿನಲ್ಲಿ ಹಂತಕ ಇಂದುಶೇಖರ್ ಪತ್ನಿ, ಅತ್ತೆಯ ಮೃತದೇಹ ಪತ್ತೆ
ಹತ್ಯಾಕಾಂಡದಲ್ಲಿ ಬಲಿಯಾದ ಬಾಲಕ ಪುನೀತ್ ಅಂತ್ಯಕ್ರಿಯೆ ಪೂರ್ಣ
ಏಳು ಜನರ ಭೀಕರ ಕೊಲೆ ಪ್ರಕರಣದಲ್ಲಿ ಹತ್ಯೆಗೀಡಾಗಿದ್ದ ಪುಟ್ಟ ಬಾಲಕ ಪುನೀತ್ನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಚಿಕ್ಕಬಳ್ಳಾಪುರದ ನಂದಿಬೆಟ್ಟದ ತಪ್ಪಲಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯ ನಂತರ ಮಗುವಿನ ಶವವನ್ನು ಬೆಂಗಳೂರಿಗೆ ತಂದ ಕುಟುಂಬದವರು, ನ.6ರ ರಾತ್ರಿಯೇ ರಾಜಾಜಿನಗರದ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿಸಿದ್ದಾರೆ.
ಘೋರ ಕೃತ್ಯಕ್ಕೆ ಬಲಿಯಾದ ಪುಟ್ಟ ಕಂದನ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಶವಸಂಸ್ಕಾರದ ವೇಳೆ ಕಣ್ಣೀರಿನ ವಾತಾವರಣ ನಿರ್ಮಾಣವಾಗಿತ್ತು. ಇತ್ತ ಕ್ರೂರ ಹತ್ಯಾಕಾಂಡದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.ಇದನ್ನೂ ಓದಿ: ಹಂತಕನಿಗಿದ್ದದ್ದು ಏಳಲ್ಲ.. 9 ಜನರ ಟಾರ್ಗೆಟ್ – ಕನ್ನಡದಲ್ಲಿ ಮೆಸೇಜ್ ಮಾಡಿ ಸಿಕ್ಕಿಬಿದ್ದಿದ್ದು ರೋಚಕ
