ಬೆಂಗಳೂರು: ಒಂದೇ ಕುಟುಂಬದ 7 ಮಂದಿಯ ನರಮೇಧ ಪ್ರಕರಣದಲ್ಲಿ ಆರೋಪಿ ಕೊಲೆಗಾಗಿ ನಡೆಸಿದ ಸಂಚು ಒಂದೊಂದಾಗಿಯೋ ಹೊರಬೀಳುತ್ತಿದೆ. ಹಂತಕ ಅಸಲಿಗೆ ಏಳಲ್ಲ, ಒಂಬತ್ತು ಮಂದಿಯನ್ನು ಕೊಲೆ ಮಾಡುವ ಯೋಚನೆಯಲ್ಲಿದ್ದ ಹಾಗೂ ಕನ್ನಡದಲ್ಲಿ ಮಸೇಜ್ ಮಾಡಿದ್ದೇ ಅವನಿಗೆ ಮುಳುವಾಯ್ತು ಎಂದು ಪೊಲೀಸರ ವಿಚಾರಣೆ ರೋಚಕ ಅಂಶಗಳು ಹೊರಬಿದ್ದಿವೆ.
ಅ.16ರಿಂದ ಒಂದೊಂದಾಗಿಯೇ ಕೊಲೆ ಮಾಡಿರುವ ಆರೋಪಿ ಬರೋಬ್ಬರಿ 15 ದಿನದಲ್ಲಿ 7 ಜನರನ್ನು ಹತ್ಯೆಗೈದಿದ್ದಾನೆ. ಅಕ್ಟೋಬರ್ 31ರಂದು ತಂಗಿ ಸುನಿತಾಳ ಮನೆಗೆ ಬಾಡೂಟಕ್ಕೆ ಹೋಗುವುದಾಗಿ ಸ್ನೇಹಿತರಿಗೆ ಹೇಳಿ, ಶಂಕರ್ ತನ್ನ ಪತ್ನಿ ನಳಿನಿ ಹಾಗೂ ಮಗನೊಂದಿಗೆ ತೆರಳಿದ್ದರು. ಇತ್ತ ನಳಿನಿಯೂ ಕೂಡ ತನ್ನ ಪೋಷಕರಿಗೆ ಮಾಂಸದ ಊಟಕ್ಕೆ ನಾದಿನಿ ಮನೆಗೆ ಹೋಗುತ್ತಿರುವುದಾಗಿ ಫೋನ್ ಮಾಡಿ ತಿಳಿಸಿದ್ದಳು. ಆದರೆ ಎರಡು ದಿನ ಕಳೆದರೂ ದಂಪತಿ ವಾಪಸ್ ಬಾರದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿತು. ಇದನ್ನೂ ಓದಿ: Bengaluru Horror | ಕೊಲೆ ಬಳಿಕ ಅತ್ತೆ, ನಾದಿನಿಯರ ಮೃತದೇಹದಿಂದ ಚಿನ್ನಾಭರಣ ದೋಚಿದ್ದ ಹಂತಕ!
ಇದರ ನಡುವೆ ಶಂಕರ್ ಮತ್ತು ನಳಿನಿ ಮೊಬೈಲ್ಗಳಿಂದ ಅವರ ಸ್ನೇಹಿತರಿಗೆ ಹಾಗೂ ಪೋಷಕರಿಗೆ ಮೆಸೇಜ್ ಬಂದಿದ್ದವು. ಉತ್ತರ ಭಾರತಕ್ಕೆ ಪ್ರವಾಸ ಬಂದಿದ್ದೇವೆ, ನಮ್ಮ ಮೊಬೈಲ್ ಅಧಿಕಾರಿಗಳ ಬಳಿ ಇದೆ. ಜೊತೆ ಇಲ್ಲಿ ನೆಟ್ವರ್ಕ್ ಸಿಗುವುದಿಲ್ಲ, ಹಾಗಾಗಿ ಕಾಲ್ ಮಾಡಬೇಡಿ ಎಂದು ಮಗನ ಧ್ವನಿಯಲ್ಲಿ ವಾಯ್ಸ್ ನೋಟ್ ಕೂಡ ಕಳುಹಿಸಲಾಗಿತ್ತು. ಆದರೆ, ಶಂಕರ್ಗೆ ಕನ್ನಡದಲ್ಲಿ ಸರಾಗವಾಗಿ ಟೈಪ್ ಮಾಡಲು ಬರುವುದಿಲ್ಲ ಎಂಬುದು ಆತನ ಸ್ನೇಹಿತರಿಗೆ ಚೆನ್ನಾಗಿ ತಿಳಿದಿತ್ತು. ಈ ಕಾರಣದಿಂದ ಅವರಿಗೆ ಅನುಮಾನ ಬಂದು ನಳಿನಿಯ ಪೋಷಕರ ಮನೆಯಲ್ಲಿ ವಿಚಾರಿಸಿದಾಗ, ಅಲ್ಲಿಯೂ ಅದೇ ರೀತಿಯ ಮೆಸೇಜ್ಗಳು ಬಂದಿದ್ದವು. ಕೂಡಲೇ ಶ್ರೀರಾಮಪುರ (Shrirampura) ಠಾಣೆಗೆ ನ.2ರಂದು ತಮ್ಮ ಮಗಳು ನಳಿನಿ, ಆಳಿಯ ಶಂಕರ್ ಹಾಗೂ 11 ವರ್ಷದ ಮೊಮ್ಮಗ ನಾಪತ್ತೆಯಾಗಿದ್ದಾರೆ ಎಂದು ಮೃತಳ ನಳಿನಿ ತಾಯಿ ದೂರು ನೀಡಿದ್ದರು.
ಏಳಲ್ಲ.. 9 ಜನರು ಟಾರ್ಗೆಟ್:
ಹಂತಕ ಮೊದಲು ಒಂಬತ್ತು ಜನರನ್ನು ಕೊಲೆ ಮಾಡುವ ಸಂಚು ರೂಪಿಸಿದ್ದನು. ಆದರೆ ಕೊನೆ ಕ್ಷಣದಲ್ಲಿ ಆ ಪ್ರಯತ್ನ ವಿಫಲವಾಯಿತು. ಆರೋಪಿಯು ಶಂಕರ್ ದಂಪತಿಯ 11 ವರ್ಷದ ಮಗನನ್ನು ಮೂರು ದಿನಗಳ ಕಾಲ ತನ್ನ ವಶದಲ್ಲೇ ಇಟ್ಟುಕೊಂಡಿದ್ದರೂ ಆತನನ್ನು ಕೊಲೆ ಮಾಡಿರಲಿಲ್ಲ. ಬಹುಶಃ ನಾಪತ್ತೆಯ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಸಂಗತಿ ಗೊತ್ತಾಗಿದ್ದರಿಂದ ಆತ ತನ್ನ ನಿರ್ಧಾರವನ್ನು ಬದಲಿಸಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ ಬೆಂಗ್ಳೂರು ಸರಣಿ ಹತ್ಯೆ ಕೇಸ್ – ನರಹಂತಕ ಇಂದುಶೇಖರ್ 14 ದಿನ ಪೊಲೀಸ್ ಕಸ್ಟಡಿಗೆ
ಏನಿದು ಪ್ರಕರಣ?
ಗಂಡ-ಹೆಂಡತಿ ಜಗಳ ಉಂಡು ಮಲಗೋತನಕ ಅನ್ನೋ ಗಾದೆ ಸುಳ್ಳಾಗಿದೆ. ಬೆಂಗಳೂರಿನಲ್ಲಿ ನಡೆದಿರುವ ಭೀಕರ, ಬೀಭತ್ಸ, ಘೋರಾತಿಘೋರ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.
ಕ್ಯಾಬ್ಚಾಲಕ ಇಂದೂಶೇಖರ್ ಅಲಿಯಾಸ್ ಅರ್ಜುನ್ ಎಂಬಾತ ತನ್ನ ಪತ್ನಿ ಹಾಗೂ ಆಕೆಯ ಕುಟುಂಬದ 6 ಜನರನ್ನು ಸೇರಿ 7 ಮಂದಿಯನ್ನು ಭಯಾನಕವಾಗಿ ಕೊಂದಿದ್ದಾನೆ. ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಪತ್ನಿ ಹಾಗೂ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಕುಟುಂಬಸ್ಥರನ್ನು ರುಬ್ಬುಕಲ್ಲಿನಿಂದ ಜಜ್ಜಿ ಮುಖವೇ ಗುರುತು ಸಿಗದಂತೆ ವಿಕೃತವಾಗಿ ಕೊಂದಿದ್ದಾನೆ. ಇದನ್ನೂ ಓದಿ: Bengaluru Murder Horror | ಮೈಸೂರಿನ ಚಾಮುಂಡಿಬೆಟ್ಟ, ಚಾರ್ಮಾಡಿ ಘಾಟ್ನಲ್ಲಿ ಮೃತದೇಹ ಎಸೆದಿರೋ ಶಂಕೆ!
7 ಮೃತದೇಹಗಳನ್ನು ಸೇಲಂ ಬಳಿ ಇರುವ ಎರ್ಕಾಡ್ ಘಾಟ್, ರಾಜ್ಯದ ನಂದಿಬೆಟ್ಟ, ಚಾಮುಂಡಿ ಬೆಟ್ಟ ಹಾಗೂ ಚಾರ್ಮಾಡಿ ಘಾಟ್ಗಳಲ್ಲಿ ಎಸೆದಿದ್ದಾನೆ. ಈ ಪೈಕಿ, ನಂದಿ ಬೆಟ್ಟದಲ್ಲಿ 7 ವರ್ಷದ ಬಾಲಕನ ಶವ ಸಿಕ್ಕಿದೆ. 20 ವರ್ಷಗಳ ಹಿಂದೆ ಸುನೀತಾ ಜೊತೆ ಮದುವೆ ಆಗಿದ್ದ ಇಂದೂಶೇಖರ್ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ ವಾಸವಿದ್ದರು. ಪತ್ನಿ ಸುನೀತಾ ವಕೀಲರೊಬ್ಬರ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದರು. ಕೆಲಸದಿಂದ ಬಂದ ತಕ್ಷಣ ಗಂಡನ ಜೊತೆ ಗಲಾಟೆ ಮಾಡಿ ನಿಂದಿಸುತ್ತಿದ್ದರು ಎನ್ನಲಾಗಿದೆ.
ಇದರಿಂದ ಕುಪಿತನಾಗಿದ್ದ ಇಂದೂಶೇಖರ್, ಪತ್ನಿ ಮನೆಯವರ ಬಳಿ ಹೇಳಿದರೂ ಅವರೆಲ್ಲರೂ ಪತ್ನಿ ಸುನೀತಾ ಪರವಾಗೇ ಮಾತಾಡ್ತಿದ್ದರಂತೆ. ಹಾಗಾಗಿ, ರೊಚ್ಚಿಗೆದ್ದ ಕ್ಯಾಬ್ಡ್ರೈವರ್ ದಿನಕ್ಕೊಬ್ಬರಂತೆ 15 ದಿನಗಳ ಅಂತರದಲ್ಲಿ 7 ಜನರ ನರಮೇಧ ಮಾಡಿದ್ದಾನೆ. ತಂದೆಯ ಅತಿಯಾದ ಪ್ರೀತಿ, ಅಮ್ಮನ ಮೇಲಿನ ದ್ವೇಷ ಬೆಳೆದಿದ್ದರಿಂದ ಅಪ್ಪನ ಪೈಶಾಚಿಕ ಕೃತ್ಯಕ್ಕೆ 17 ವರ್ಷ ಅಪ್ರಾಪ್ತ ಮಗಳು ಕೂಡ ಸಾಥ್ ಕೊಟ್ಟಿದ್ದಾಳೆ. ಶವ ವಿಲೇವಾರಿ ಮಾಡುವಾಗ 5-6 ದಿನ ಆರೋಪಿ ಇಂದೂಶೇಖರ್ ಜೊತೆ ಇದ್ದ ಮೃತ ನಳಿನಿ ಪುತ್ರ ಯತೀನ್ ಇಡೀ ಘಟನೆಗೆ ಸಾಕ್ಷಿಯಾಗಿದ್ದಾನೆ. ಇದನ್ನೂ ಓದಿ:Bengaluru Murder Horror | ಸೇಲಂನ ಘಾಟ್ ಕಾಡಿನಲ್ಲಿ ಹಂತಕ ಇಂದುಶೇಖರ್ ಪತ್ನಿ, ಅತ್ತೆಯ ಮೃತದೇಹ ಪತ್ತೆ
