ಬೆಂಗಳೂರು: ಮಂಡ್ಯದಲ್ಲಿ (Mandya) ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರ ಇನ್ನೂ ಜಮೀನು ಕೊಟ್ಟಿಲ್ಲ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಮತ್ತೆ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅವರು, ರಾಜ್ಯ ಸರ್ಕಾರ ಮಂಡ್ಯದಲ್ಲಿ ಇನ್ನೂ ಜಾಗ ಕೊಟ್ಟಿಲ್ಲ. ಒಂದು ವರ್ಷದಿಂದ ಕಾಯ್ತಾ ಇದ್ದೀನಿ. ಸಿಎಂಗೆ ಪತ್ರ ಬರೆದಿದ್ದೇನೆ ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. 100 ಎಕರೆ ಕೊಟ್ಟಿದ್ದಾರೆ ಅಂತ ಸಿಎಂ ಹೇಳ್ತಾರೆ. ಸರ್ಕಾರ ಅ ಜಾಗ ಕೊಡಬೇಕು. ಶಾಸಕರು ಜಾಗ ಕೊಡೋಕೆ ಆಗುತ್ತಾ. ಸುಳ್ಳು ಹೇಳೋಕೆ ಇತಿಮಿತಿ ಬೇಡವಾ? ಅಂತ ಸಿಎಂ ವಿರುದ್ದ ಕಿಡಿಕಾರಿದರು.
ನಾನು ಕೈಗಾರಿಕೆ ಮಾಡೋಕೆ 160 ಎಕರೆ ಜಾಗ ಕೇಳಿದೆ. ಅದನ್ನ ರಾಜಕೀಯವಾಗಿ ಇವರು ಬಳಕೆ ಮಾಡ್ತಾರೆ. ನಮ್ಮ ರಾಜಕೀಯ ಬೇರೆ. ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ಇವರು ನಡೆದುಕೊಳ್ಳೋ ರೀತಿ ಸರಿಯಿಲ್ಲ. ಜನರ ಅಭಿವೃದ್ಧಿ ಮಾಡೋಕೆ ಇವರು ಕೆಲಸ ಮಾಡ್ತಾ ಇದ್ದಾರಾ? ಅಂತ ಸರ್ಕಾರದ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಕಾವೇರಿ ವನ್ಯಧಾಮದಲ್ಲಿ ಮೂವರ ಶೂಟೌಟ್ ಕೇಸ್ ತನಿಖೆ ವಿಳಂಬವಿಲ್ಲ: ಅರಣ್ಯ ಸಚಿವ
