– ಕರಕುಶಲ ಕಲೆಗೆ ದಾರಿ ಮಾಡಿಕೊಟ್ಟ ಗೃಹಲಕ್ಷ್ಮಿ ಹಣ
ಬೆಂಗಳೂರು: ಪುಟಾಣಿ ತೊಟ್ಟಿಲು..! ಗುಲಾಬಿ, ಹಳದಿ, ಹಸಿರು, ನೀಲಿ ಹೀಗೆ ಪುಟ್ಟ ಪುಟ್ಟ ಮಣಿಗಳಿಂದಲೇ ಅಲಂಕೃತಗೊಂಡ ಪುಟ್ಟ ಆಟಿಕೆ ಆಕೆಯ ಕೈಯಲ್ಲಿತ್ತು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಂವಾದ ಕಾರ್ಯಕ್ರಮಕ್ಕೆ ತನ್ನ ಬದುಕಿಗೆ ಆಧಾರವಾಗಿರುವ ಕರಕುಶಲ ವಸ್ತುವನ್ನು ಹೊತ್ತು ತಂದಿದ್ರು ಕಲಬುರಗಿಯ (Kalaburagi) ಶಿವನಗರದ ಎಂ ಎಸ್ ಸುವರ್ಣ.
ತೊಟ್ಟಿಲು, ಮುತ್ತಿನ ತೆನೆ, ದಂಡಿ ಮತ್ತಿತರ ಅಲಂಕಾರಿಕ ವಸ್ತುಗಳ ವ್ಯಾಪಾರದಿಂದಲೇ ಬದುಕಿನ ಬಂಡಿ ಸಾಗಿಸುವ ಈಕೆಯ ಕೈಯಲಿದ್ದ ಪುಟಾಣಿ ತೊಟ್ಟಿಲು ನೋಡಿ ಮನೆಯಲ್ಲಿದ್ದ ಮೊಮ್ಮಗಳ ನೆನಪಾಯ್ತೇನೋ ಸಿಎಂಗೆ..! ಅರೇ ತೊಟ್ಟಿಲು ಇಲ್ಲಿ ಕೊಡಮ್ಮ ಎಷ್ಟು ಮುದ್ದಾಗಿದೆ ಅಂತಾ ಅದನ್ನು ನೋಡಿ ಖುಷಿಪಟ್ರು ಡಿ.ಕೆ ಶಿವಕುಮಾರ್. (D K Shivakumar) ಎಷ್ಟಕ್ಕೆ ಮಾರ್ತೀಯಾ ನಂಗೂ ಬೇಕು ಅಂತಾ ಪಕ್ಕಾ ಜಾತ್ರೆಯಲ್ಲಿ ಮೊಮ್ಮಗಳಿಗಾಗಿ ಆಟಿಕೆ ತೆಗೆದುಕೊಳ್ಳುವ ಅಜ್ಜನ ಖುಷಿಯಿತ್ತು ಡಿಕೆ ಧ್ವನಿಯಲ್ಲಿ! ತನ್ನ ಕರಕುಶಲ ವಸ್ತು ಸಿಎಂ ಮೆಚ್ಚುಗೆ ಅನಿರೀಕ್ಷಿತವಾಗಿ ಪಡೆದಾಗ ಸುವರ್ಣ ಖುಷಿಗೆ ಪಾರವೇ ಇರಲಿಲ್ಲ.ಇದನ್ನೂ ಓದಿ: ಸಿಎಂ ಡಿ.ಕೆ ಶಿವಕುಮಾರ್ ಈಗ ಬೆಲೆ ಏರಿಕೆ ದೊರೆ: ಅರವಿಂದ ಬೆಲ್ಲದ್
ಸರ್, ಇದನ್ನು ಮಾಡಲು 125 ರೂ. ಖರ್ಚಾಗುತ್ತೆ, 250, 300 ರೂ. ಗೆ ಮಾರಾಟ ಮಾಡ್ತೀನಿ, ಲಾಭ ಬರ್ತಿದೆ” ಅಂದ್ರು ಸುವರ್ಣ. ಅಲ್ಲದೇ ಪುಣೆ ಹೈದರಾಬಾದ್ ಸೇರಿದಂತೆ ಹಲವಾರು ಕಡೆ ವ್ಯಾಪಾರ ವಿಸ್ತರಣೆಯ ಬಗ್ಗೆನೂ ಹೇಳಿದ್ರು. ಸಿಎಂ ತಮ್ಮ ಮೊಮ್ಮಗಳಿಗೆ ಗುಲಾಬಿ ಬಣ್ಣದ ಪುಟಾಣಿ ಮಣಿ ತೊಟ್ಟಿಲು ಖರೀದಿಸಿ ಖುಷಿಪಟ್ರು. ಪುಟಾಣಿ ತೊಟ್ಟಿಲನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸಿ ನೋಡಿ ಖುಷಿಪಟ್ರು ಮೊಮ್ಮಗಳಿಗಾಗಿ ಜತನದಿಂದ ಎತ್ತಿಕೊಂಡ್ರು. ಹಾ ಅಂದ ಹಾಗೆ 500 ರೂ. ಕೈಗಿತ್ತರು.ಇದನ್ನೂ ಓದಿ: 200 ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಬೇಯರ್ ಕಂಪನಿ ಜೊತೆ ಒಪ್ಪಂದಕ್ಕೆ ಸಹಿ
