– ನ.1 ರಂದು ರಾಮ್ಲೀಲಾ ಮೈದಾನದಲ್ಲಿ ನಡೆದಿದ್ದ ಬೃಹತ್ ರ್ಯಾಲಿ
ನವಹದೆಲಿ: ನವೆಂಬರ್ 1 ರಂದು ರಾಮ್ಲೀಲಾ ಮೈದಾನದಲ್ಲಿ ನಡೆದ ಇಂಡಿ ಒಕ್ಕೂಟದ ರ್ಯಾಲಿಯಲ್ಲಿ (Ramlila Maidan Rally) ಭಾಗವಹಿಸದ ಹಿನ್ನೆಲೆ ಇಂಡಿಯನ್ ಯೂತ್ ಕಾಂಗ್ರೆಸ್ (Indian Youth Congress), ರಾಜಸ್ಥಾನ ಘಟಕದ 31 ಪದಾಧಿಕಾರಿಗಳನ್ನ ಏಕಾಏಕಿ ಅಮಾನತುಗೊಳಿಸಿದೆ.
ಹೌದು. ಇಂಡಿಯಾ ಒಕ್ಕೂಟವು ನವೆಂಬರ್ 1 ರಂದು ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಎಸ್ಐಆರ್, ಮತಗಳ್ಳತನ ಹಾಗೂ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ರ್ಯಾಲಿ ಹಮ್ಮಿಕೊಂಡಿತ್ತು. ಈ ರ್ಯಾಲಿಗೆ ಗೈರಾದ ಹಿನ್ನೆಲೆ ರಾಜಸ್ಥಾನದ ಘಟಕದ 31 ಪದಾಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ಜೈಲಿಗೆ ಹೋಗ್ತಾರೆ, 2024 ರ ಚುನಾವಣೆಯೇ ಅಕ್ರಮ: ರಾಹುಲ್ ಗುಡುಗು
ರಾಜಸ್ಥಾನ ಯೂತ್ ಕಾಂಗ್ರೆಸ್ನ ಉಸ್ತುವಾರಿಯಾಗಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಕಾಸ್ ಚಿಕಾರಾ ಮತ್ತು ಕಾರ್ಯದರ್ಶಿ ಜ್ಞಾನೇಶ್ ಶುಕ್ಲಾ ಅವರು ಅಮಾನತು ಆದೇಶಕ್ಕೆ ಸಹಿ ಹಾಕಿದ್ದಾರೆ. ಮುಂದಿನ ಆದೇಶದ ವರೆಗೆ ಅಮಾನತು ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಯಾರೆಲ್ಲಾ ಅಮಾನತು?
ದೌಸಾದ ಎಸ್ಸಿ/ಎಸ್ಟಿ (SC/ST) ವಿಭಾಗದ ಉಪಾಧ್ಯಕ್ಷ ಪ್ರಕಾಶ್ ಚಂದ್ ಮೀನಾ, ಸಂಘಟನೆಯ ಅಲ್ಪಸಂಖ್ಯಾತ ವಿಭಾಗದ (Minority Wing) ಪ್ರಧಾನ ಕಾರ್ಯದರ್ಶಿ ಸದ್ದಾಂ ಹುಸೇನ್ ಮೇಯೋ (ಅಲ್ವಾರ್), ಫೈಜಾನ್ ಹಸನ್ ಖುರೇಷಿ (ಅಜ್ಮೀರ್ ಗ್ರಾಮೀಣ), ಜಾಫರ್ ಹುಸೇನ್ ಮೀರ್ (ಭಿಲ್ವಾರಾ ಗ್ರಾಮೀಣ) ಮತ್ತು ಸಲ್ಮಾ ಪಿನಾರಾ (ಚಿತ್ತೋರ್ಗಢ), ಒಬಿಸಿ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾದ ರಾಮ್ಫೂಲ್ ಧಾಕರ್ (ಭಿಲ್ವಾರಾ ಗ್ರಾಮೀಣ) ಮತ್ತು ಗಣೇಶ್ ದೇವಾಸಿ (ಜೋಧ್ಪುರ ಗ್ರಾಮೀಣ), ಎಸ್ಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅರ್ಜುನ್ ಸಿಂಗ್ ಬೋಚಾವತ್ (ಜೋಧ್ಪುರ ಗ್ರಾಮೀಣ) ಮತ್ತು ದೀಪಕ್ ಮೇಘವಾಲ್ (ಗಂಗಾನಗರ), ಸಾಮಾನ್ಯ ವರ್ಗದ (Open Category), ಪ್ರಧಾನ ಕಾರ್ಯದರ್ಶಿಗಳಾದ ಠಾಕೂರ್ ಬಿಷ್ಣೋಯಿ (ಫಲೋದಿ) ಮತ್ತು ಮಂಜುಳಾ ದೇಸಾಯಿ (ಜಾಲೋರ್) ಅವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಅಷ್ಟೇ ಅಲ್ಲದೇ ರಾಜಸ್ಥಾನದ ವಿವಿಧ ಜಿಲ್ಲೆಗಳಲ್ಲಿರುವ ಕಾರ್ಯಕಾರಿ ಸಮಿತಿಯ (Executive Committee – EC) ಆಶಿಶ್ ಬೈರ್ವಾ ತತ್ವಾಲ್ (ಸವಾಯಿ ಮಾಧೋಪುರ್), ಹಿಮಾಂಶು ಶರ್ಮಾ ಮತ್ತು ದಿನೇಶ್ ಕುಮಾರ್ ಗುರ್ಜರ್ (ಬೇವಾರ್), ಸುರೇಶ್ ಗೋಡಾರಾ (ಜಲೋರ್), ನವಾಬ್ ಖಾನ್ (ಗಂಗಾನಗರ), ಸಂಗ್ರಾಮ್ ಸಿಂಗ್ ಗುರ್ಜರ್ (ಕರೌಲಿ), ಮುಜಾಹಿದ್ ಖುರೇಷಿ (ಬಿಕಾನೇರ್ ಅರ್ಬನ್), ಭರತ್ ಪಟ್ರಾಲ್ (ಭರತ್ ಪತ್ರಾಲ್) ಸೇರಿದಂತೆ ಒಟ್ಟು ಇಪ್ಪತ್ತು ರಾಜ್ಯ ಕಾರ್ಯದರ್ಶಿಗಳನ್ನ ಅಮಾನತುಗೊಳಿಸಲಾಗಿದೆ. (ಪ್ರತಾಪ್ಗಢ), ಮಹಬೂಬ್ ಖಾನ್ (ಚುರು), ಗನಿ ಎಂಡಿ ಸಿಂಧಿ (ರಾಜ್ಸಮಂದ್), ರವಿಕಾಂತ್ (ದೌಸಾ), ಗಿರಿರಾಜ್ ಕುಮಾರ್ ಮತ್ತು ಹಿಮಾಂಶು ಧಕಡ್ (ಬರನ್), ಸುರೇಶ್ ಕುಮಾರ್ ಗುರ್ಜರ್ (ಅಜ್ಮೀರ್ ಗ್ರಾಮಾಂತರ), ಅರವಿಂದ್ ಯೋಗಿ (ಭರತ್ಪುರ), ವಿಷ್ಣು ಕುಮಾರ್ ಮೀನಾ (ಝಾಲಾವರ್), ಆಸಿಫ್ ಖಾಯಮ್ಖಾನಿ (ಎಸ್ಹು ಜೆಜ್ಕರ್) ಅವರನ್ನ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

